ಶಾಲಾ ಪ್ರಾರಂಭೋತ್ಸವ :
29 ಮೇ 2019
ಕಾರ್ಕಳ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ಶಾಲಾ ಪ್ರಾರಂಭೋತ್ಸವವನ್ನು ಈ ದಿನ ಆಚರಿಸಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯರಾಜ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಐ.ಟಿ. ಮಣಿಪಾಲ ಇಲ್ಲಿನ ಪ್ರಾಧ್ಯಾಪಕರಾದ ಡಾ|| ಶ್ರೀಹರಿ ಉಪಾಧ್ಯಾಯ ಅವರು “ವಿದ್ಯಾರ್ಥಿಗಳು ಪ್ರತಿ ಗಳಿಗೆಯ ಅನುಭವವನ್ನು ಪಡೆಯುತ್ತಾ ಬೆಳೆಯಬೇಕು. ಜಗತ್ತನ್ನು ಚಿಕ್ಕಪುಟ್ಟ ಸಂಗತಿಗಳ ಮೂಲಕವೇ ಅರಿಯಬೇಕು” ಎಂದರು.
ಸರ್ಕಾರದಿಂದ ಪೂರೈಕೆಯಾದ ಉಚಿತ ಪಠ್ಯಪುಸ್ತಕಗಳನ್ನು ಪುರಸಭೆಯ ಸದಸ್ಯರಾದ ಶ್ರೀ ಪ್ರದೀಪ ರಾಣೆ ವಿತರಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಹರ್ಷಿಣಿ ಜೈನ್ ಇವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್‍ಪುಸ್ತಕಗಳನ್ನು ಅತಿಥಿಗಳಾದ ಶ್ರೀ ಶೇಖ್ ಮುಸ್ತಾಫ್ ಶುಕೂರ್ ವಿತರಿಸಿದರು. ಅತಿಥಿಗಳಾಗಿ ಶ್ರೀ ಸತೀಶ ಮಡಿವಾಳ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ನಿರ್ಮಲಾಭಟ್ ಸ್ವಾಗತಿಸಿದರು. ಜಾನ್ ಮೆನೇಜಸ್ ಧನ್ಯವಾದ ಸಲ್ಲಿಸಿದರು.