ಶಾಲೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆ, ಪೆರ್ವಾಜೆ
   
 ನಮ್ಮ ವಿದ್ಯಾ ಸಂಸ್ಥೆಯು ಉಡುಪಿ ಜಿಲ್ಲೆಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. 2016-17ನೇ ಸಾಲಿನಲ್ಲಿ ಭಾರತ ಸರಕಾದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ವಚ್ಛ ಭಾರತದ ಕಲ್ಪನೆಯ ಅಡಿಯಲ್ಲಿ ‘ರಾಷ್ಟ್ರ ಮಟ್ಟದ ಸ್ವಚ್ಛ ವಿದ್ಯಾಲಯ’ ಪ್ರಶಸ್ತಿಯಿಂದ ಪುರಸ್ಕøತಗೊಂಡಿದೆ. 2016-17ನೇ ಸಾಲಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖ ವತಿಯಿಂದ ಉಡುಪಿ ಜಿಲ್ಲೆಯ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿಯನ್ನು ನಮ್ಮ ಸಂಸ್ಥೆಯು ಗಳಿಸಿರುತ್ತದೆ. ಹೀಗೆ ರಾಷ್ಟ್ರ ಮಟ್ಟದಲ್ಲಿ ಸುಪ್ರಸಿದ್ಧವಾಗಿರುವ ನಮ್ಮ ಸಂಸ್ಥೆಯು ಕನ್ನಡ ನಾಡಿನ ಪ್ರಸಿದ್ಧ ವಾರ ಪತ್ರಿಕೆಗಳಾದ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿದ್ದ ನಮ್ಮ ಶಾಲಾ ಕುರಿತ ಲೇಖನದಿಂದಾಗಿ ನಾಡಿನ ಜನರ ಮನೆಮನಗಳಲ್ಲಿ ನೆಲೆಸಿದ್ದಲ್ಲದೇ ವಿದೇಶಗಳಲ್ಲಿಯೂ ಜನಪ್ರಿಯವಾಗುವಂತಾಯಿತು. 

      1996-97ರಲ್ಲಿ ಆರಂಭಗೊಂಡು ಪ್ರಥಮ ತಂಡದಿಂದಲೂ ಸತತವಾಗಿ ಪ್ರತಿ ವರ್ಷವೂ ಹತ್ತನೇ ತರಗತಿಯಲ್ಲಿ 92%ಕ್ಕಿಂತ ಅಧಿಕ ಫಲಿತಾಂಶವನ್ನು ಸಾಧಿಸುತ್ತ ಬಂದಿರುತ್ತದೆ. ಆರಂಭದಲ್ಲಿ 100 ವಿದ್ಯಾರ್ಥಿಗಳನ್ನೊಳಗೊಂಡಿದ್ದ ಈ ಸಂಸ್ಥೆಯು ಇಂದು 356 ವಿದ್ಯಾರ್ಥಿಗಳನ್ನು ಹೊಂದಿರುತ್ತದೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿದ್ದು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಉತ್ತಮ ಶಿಕ್ಷಕರ ತಂಡ ನಮ್ಮ ಸಂಸ್ಥೆಯಲ್ಲಿದೆ. ನಮ್ಮ ವಿದ್ಯಾ ಸಂಸ್ಥೆಯು ಸರಕಾರದ ಪ್ರತಿಯೊಂದು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತಾ ತನ್ನದೇ ಆದ ಪ್ರತ್ಯೇಕತೆಯನ್ನು, ಪ್ರಖ್ಯಾತಿಯನ್ನು ಉಳಿಸಿಕೊಂಡಿದೆ. 2001ರಲ್ಲಿ ನೇತಾಜಿ ಸುಭಾಸ್‍ಚಂದ್ರ ಬೋಸ್ ಜನ್ಮಶತಾಬ್ಧಿ ಕಟ್ಟಡದ 4 ತರಗತಿ ಕೊಠಡಿಗಳಲ್ಲಿ ಆರಂಭಗೊಂಡ ಈ ಸಂಸ್ಥೆಯಲ್ಲಿ ಈಗ 7 ತರಗತಿ ಕೊಠಡಿಗಳು, ಸುಸಜ್ಜಿತ ಸಭಾಂಗಣ, ಪ್ರತ್ಯೇಕವಾದ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಪ್ರಯೋಗಾಲಯ, ಭೋಜನ ಶಾಲೆ ಹಾಗೂ 17 ಲಕ್ಷದಲ್ಲಿ ನಿರ್ಮಿತವಾದ ಸುಸಜ್ಜಿತವಾದ ಅಕ್ಷರ ದಾಸೋಹ ಕೊಠಡಿಗಳು ಇವೆ. ಪ್ರಾಥಮಿಕ ಶಾಲೆಯು ಸೇರಿ ಇಲ್ಲಿ ದಿನಕ್ಕೆ 850 ವಿದ್ಯಾರ್ಥಿಗಳಿಗೆ ಸ್ವಚ್ಛವಾದ, ಆರೋಗ್ಯಭರಿತವಾದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆ ವ್ಯವಸ್ಥಿತವಾಗಿ ನಡೆಯುತ್ತಿದೆ. 


No comments:

Post a Comment