ತೋಟದ ಶಂಕರ
ಹೊನ್ನಳ್ಳಿ ಎಂಬುದೊದು ಊರು ಇತ್ತು. ಅಲ್ಲಿ ರಂಗಪ್ಪನೆಂಬ ರೈತನಿದ್ದನು. ಅವನಿಗೆ ಅರಡು ಎಕ್ರೆ ಹೊಲ ಇತ್ತು. ಸರಿಯಾಗಿ ಮಳೆ ಇಲ್ಲದೆ ಬೆಳೆ ಬರುತ್ತಿರಲಿಲ್ಲ. ಆದ್ದರಿಂದ ಅವನು ಸದಾ ಬಡತನದಲ್ಲಿಯೇ ಕಾಲಕಳೆಯುತ್ತಿದ್ದನು. ರಂಗಪ್ಪನಿಗೆ ಶಂಕರನೆಂಬ 12 ವಷ್ರದ ಮಗನಿದ್ದನು. 7ನೇ ವರ್ಗದಲ್ಲಿ ಅಭಾಸ
ಮಾಡುತ್ತಿದ್ದನು.ಒಂದು ದಿನ ಅವನ ಗುರುಗಳು “ಮರ ಬೆಳೆಸಿ ಬರ ಅಳಿಸಿ” ಎಂದು ಪಾಠ ಹೇಳಿದರು. ಶಂಕರನಿಗೆ ಗುರುಗಳು ಹೇಳಿದ ಮಾತು ಸರಿ ಅನಿಸಿತು. ತನ್ನ ಹೊಲದಲ್ಲಿ ಹುಣಸೇಮರ ,ಮಾವಿನ ಮರ ಬೆಳೆಸಬೇಕೆಂದು ಯೋಚಿಸಿದ. ತಂದೆಗೂ ಈ ವಿಚಾರ ತಿಳಿಸಿದ ರಂಗಪ್ಪನಿಗೆ ಮಗನ ವಿಚಾರ ಹಿಡಿಸಿತು. ಮರುದಿನವೇ ಶಂಕರನು ತಂದೆಯೊಂದಿಗೆ ಹೊಲಕ್ಕೆ ಹೋದನು. ಸರಿಯಾದ ಅಂತರ ಬಿಟ್ಟು ಗುಳಿ ತೋಡಿದ, ಗೊಬ್ಬರ ಹಾಕಿದ ಉತ್ತಮ ತಳಿಯ ಮಾವಿನ ಸಸಿ, ತೆಂಗು, ಹುಣಸೆ ಸಸಿ, ಪೇರಲ ಸಸಿ, ಚಿಕ್ಕು, ಬಾಳೆ ಸಸಿಗಳನ್ನು ನೆಟ್ಟನು.ನಡು ನಡುವೆ ಕರಿಬೇವಿನ ಸಸಿಗಳನ್ನುಹಚ್ಚಿದ. ಸಸಿಗಳು ಹಾಳಾಗದಂತೆ ಸುತ್ತ ಬೇಲಿ ಕಟ್ಟಿದ. ಸಮೀಪದ ಹಳ್ಳದಿಂದ ನೀರು ತಂದು ಉಣಿಸಿದ,ದಿನಗಳೆದಂತೆ ಎಲ್ಲ ಸಸಿಗಳೂ ಬೆಳೆದು ದೊಡ್ಡದಾದವು.ಹಣ್ಣು ಕೂಡ ತೊಡಗಿದವು.ಕರಿಬೇವು ಬೆಳೆದು ನಿಂತಿತು. ಶಂಕರನ ತಂದೆ ಹಣ್ಣು ಕಾಯಿಗಳನ್ನು ಪೇಟೆಗೆ ತೆಗೆದುಕೊಂಡು ಹೋಗಿ ಮಾರ ಹತ್ತಿದನು. ತುಂಬ ಹಣ ಬರತೊಡಗಿತು. ರಂಗಪ್ಪನ ಬಡತನ ದೂರವಾಯಿತು. ಶಂಕರನೂ ತಂದೆ-ತಾಯಿಗಳಿಗೆ ಸಹಾಯ ಮಾಡುತ್ತ ತನ್ನ ಓದು ಮುಂದುವರೆಸಿ ಜಾಣನಾದನು.
ಕು. ತನ್ವಿ 8ನೇ ಎ ತರಗತಿ
ತಂದೆಗೆ ತಕ್ಕ ಮಗ
ಸಾಮಾನ್ಯವಾಗಿ ಮಕ್ಕಳು ಸಣ್ಣದಿರುವಾಗ ತಂದೆ-ತಾಯಿಯರು ಮಕ್ಕಳಿಗೆ ಗದರುವುದು ಸಹಜ. ಅದು ಯಾವಾಗಲು ಮಕ್ಕಳಿಗೆ ಒಳಿತಾಗಿರುತ್ತದೆ. ಅಂತಹುದೇ ಒಂದು ತಂದೆ ಮತ್ತು ಮಗನ ಕಥೆ.
ಒಂದು ಹಳ್ಳಿಯಲ್ಲಿ ಒಬ್ಬ ತಂದೆಯು ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದನು. ತಂದೆಯು ಬಹಳ ಶ್ರಮಜೀವಿ . ತನ್ನಂv ಮಗನು ಶ್ರಮಜೀವಿಯಾಗಿರಬೇಕು ಎಂದು ಬಯಸಿದ್ದನು. ಅವನು ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದನು. ಸಮಯ ಪರಿಪಾಲನೆ, ಶಿಸ್ತು, ಜಾಗೃತೆ, ನಯ, ವಿನಯ, ದುಂದು ವೆಚ್ಚ ಮಾಡದಿರುವುದು ಇವುಗಳನೆಲ್ಲವನ್ನೂ ಮಗನಿಗೆ ತಿಳಿ ಹೇಳುತ್ತಿದ್ದನು. ಯಾವಾಗಲೂ ಅದರ ಬಗ್ಗೆ ತಂದೆ ಹೇಳುವಾಗ ಮಗನಿಗೆ ಕಿರಿಕಿರಿಯಾಗುತ್ತಿತ್ತು. ಮನೆ ಬಿಟ್ಟು ಓಡಿ ಹೋಗಬೇಕೆಂದು ಎನಿಸುತ್ತಿದ್ದನು. ಆದರೂ ಸಹಿಸಿಕೊಂಡಿದ್ದನು. ತಂದೆಯ ಕನಸಿನಂತೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದನು. ನಂತರ ಅವನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸ ಹುಡುಕ ತೊಡಗಿದನು. ಸರಿಯಾದ ಕೆಲಸ ಸಿಗದೆ ನಿರಾಶನಾದನು. ಹೀಗೆಯೇ ಸಮಯಗಳು ಉರುಳಿದವು. ಕೊನೆಗೆ ಒಂದು ದಿನ ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎಂಬ ಜಾಹಿರಾತನ್ನು ನೋಡಿ ಪಟ್ಟಣಕ್ಕೆ ಹೊರಟನು. ಅದೊಂದು ದೊಡ್ಡ ಕಂಪೆನಿಯಾಗಿತ್ತು. ಆ ಕಂಪೆನಿ ಎದುರು ಒಂದು ದೊಡ್ಡದಾದ ಗೇಟಿತ್ತು. ಅದು ತೆರೆದಿತ್ತು. ಇವನು ಒಳಗೆ ಬಂದು ಗೇಟನ್ನು ಮುಚ್ಚಿದನು. ಹಾಗೆಯೇ ಮುಂದೆ ಬರುವಾಗ ಅಲ್ಲೊಂದು ಹೂ ತೋಟವಿತ್ತು. ಹೂ ತೋಟಕ್ಕೆ ಬಿಡುವ ಪೈಪಿನಲ್ಲಿ ನೀರು ಪೋಲಾಗುತ್ತಿದ್ದನ್ನು ನೋಡಿ ನೀರಿನ ನಳ್ಳಿಯನ್ನು ಬಂದ್ ಮಾಡಿದನು. ನಂತರ ಕಂಪೆನಿ ಒಳಗೆ ಬಂದನು ಅಲ್ಲಿ ವಿಶಾಲವಾದ ಕೊಟಡಿಯಿತ್ತು. ಜನರಿಲ್ಲದಿದ್ದರೂ ಫ್ಯಾನ್‍ಗಳು ತಿರುಗುತ್ತಿದ್ದವು. ಅಲ್ಲಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನು ಗಮನಿಸಿದ ಇವನು ಫ್ಯಾನ್ಗಳನ್ನು ಬಂದ್ ಮಾಡಿ ಕುರ್ಚಿಗಳನ್ನು ಜೋಡಿಸಿಟ್ಟನು. ಇಷ್ಟೆಲ್ಲಾ ಕೆಲಸವು ತಂದೆ ಸಣ್ಣದಿಂದ ಗದರಿಸಿ ಹೇಳಿಕೊಟ್ಟ ಪರಿಣಾಮವಾಗಿತ್ತು. ಒಬ್ಬ ಗುಮಸ್ತನು ಬಂದು ಇವನನ್ನು ಒಳಗೆ ಕರೆದನು. ಇವನು ಒಳನಡೆದನು. ಅಲ್ಲಿ ಎರಡು ಮೂರು ಜನ ದೊಡ್ಡ ವ್ಯಕ್ತಿಗಳು ಸಾಲಾಗಿ ಕೂತಿದ್ದರು. ಅವರು ನಿನ್ನ ಹೆಸರೇನೆಂದು ಕೇಳಿದಾಗ ಇವನು ಹೆಸರಿನ ಜೊತೆಗೆ ತನ್ನ ವಿದ್ಯಾರ್ಹತೆಯನ್ನು ತಿಳಿಸಿದನು. ಅವರು ಇವನ ಕುಲುಕುತ್ತಾ “ಯು ಆರ್ ಸೆಲೆಕ್ಟೆಡ್” ಎಂದರು. ಇವನಿಗೆ ಆಶ್ಚರ್ಯವಾಯಿತು. ಇವನು ಆಶ್ಚರ್ಯದಿಂದ “ಹ್ಞಾಂ ನೀವು ನನ್ನನ್ನು ಪರೀಕ್ಷಿಸದೆ ಹೇಗೆ ಸೆಲೆಕ್ಟ್ ಮಾಡಿದಿರಿ’’? ಎಂದನು. ಅದಕ್ಕೆ ಅವರು “ನಾವು ನಿನ್ನನ್ನು ಗೇಟಿನ ಮೂಲಕ ಒಳಗೆ ಬರುವಾಗಿನಿಂದ ನಿನ್ನನ್ನು ಸಿ.ಸಿ. ಟಿವಿಯಲ್ಲಿ ಗಮನಿಸುತ್ತದ್ದೇವೆ. ನಿನ್ನಂತವನು ನಮ್ಮ ಆಫೀಸಿನಲ್ಲಿ ಇದ್ದರೆ ನಮ್ಮ ಕಂಪೆನಿ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ. ನಾಳೆಯಿಂದಲೇ ಕೆಲಸಕ್ಕೆ ಬಾ” ಎಂದರು.
ಅವನು ಅಲ್ಲಿಂದ ಹೊರಬಂದಾಗ ಅವನ ಕಣ್ಣುಗಳು ತುಂಬಿ ಬಂದಿದ್ದವು. ನನ್ನ ಈ ನಡತೆಗೆ ನನ್ನ ಅಪ್ಪನೇ ಕಾರಣ. ಅವರು ನನಗೆ ಸಣ್ಣದಿನಿಂದ ಗದರಿಸಿ ಹೇಳಿಕೊಟ್ಟ ಮಾತುಗಳು ನನ್ನ ಜೀವನವನ್ನೇ ಬದಲಾಯಿಸಿದವು ಎಂದುಕೊಂಡು ಮನೆಗೆ ಬಂದು ತಂದೆಯನ್ನು ಬಿಗಿದಪ್ಪಿ ಕೊಂಡನು.
ಈ ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ ತಂದೆ ತಾಯಿಯರನ್ನು ಗೌರವಿಸಬೇಕು. ಅವರು ಹೇಳಿಕೊಟ್ಟ ಮಾತಿನಂತೆ ನಾವು ನಡೆಯಬೇಕು.
ಸಂಗ್ರಹ:- ವರ್ಷಾ 8ನೇ ‘ಎ’
ಪ್ರವಾಸ ಕಥನ
ಜನವರಿಯಲ್ಲಿ ಹೊಸ ವರ್ಷ ಆಯಿತು. ಫೆಬ್ರವರಿಯಲ್ಲಿ ಶಾಲಾ ಪಾಠಗಳು ಮುಗಿದವು. ಮಾರ್ಚ್ನಲ್ಲಿ ಶಾಲಾ ಪರೀಕ್ಷೇಗಳು. ಎಪ್ರಿಲ್ನಲ್ಲಿ ರಜೆ ಸಿಕ್ಕಿತು. ಆದರೆ ನಮ್ಮ ಹಾಸ್ಟೆಲ್ನಲ್ಲಿ ಒಂದು ದಿನದ ಪ್ರವಾಸವನ್ನು ಆಯೋಜಿಸಿದ್ದರು. ಇದು ನಾನು ಕರ್ನಾಟಕದಲ್ಲಿ ಹೋದಂತಹ ಮೊದಲ ಪ್ರವಾಸ. ಹಾಸ್ಟೆಲ್‍ನ ಎಲ್ಲಾ ಮಕ್ಕಳು ನಮ್ಮ ಮಾಮ ಹಾಗೂ ಅತ್ತೆಯವರ ಜೊತೆ ಬೆಳಗ್ಗೆ 6:00 ಗಂಟೆಗೆ ಎಲ್ಲರೂ ಒಟ್ಟಾಗಿ ಹೋದೆವು. ನಾವು ಮೊದಲು ಹೋದದ್ದು ಶೃಂಗೇರಿಯ ಶಾರಾದ ಪೀಠಕ್ಕೆ. ಅಲ್ಲಿ ದೇವರಲ್ಲಿ ಪ್ರಾರ್ಥಿಸಿ ತಿಂಡಿ ಮಾಡಿದೆವು. ನಂತರ ನಮ್ಮ ಪ್ರಯಾಣ ಸಾಗಿದ್ದು ಹನುಮಾನ್ ಗುಂಡಿ ಬೀಚ್ ಹತ್ತಿರ, ಅಲ್ಲಿ ಎಲ್ಲರೂ ಆಟವಾಡಿದೆವು. ನಂತರ ನಾವು ಕಾಪು ಬೀಚ್ಗೆ ಹೋದೆವು. ಅಲ್ಲಿ ಆಟವಾಡಿ, ದೀಪ ಸ್ತಂಭ ಹತ್ತಿದೆವು ನಂತರ ಸಂಜೆ 4:00 ಗೆ ಮನೆಗೆ ಬಂದೆವು. ನಾನು ತುಂಬಾ ಖುಷಿ ಪಟ್ಟೆನು.
ರಚನೆ:- ಗೈ ಫಾಂಗ್ ಮೈ 10ನೇ ‘ಬಿ’
ತಾಯಿಯ ಋಣ
ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲಾರಳು. ತಾಯಿಗೆ ಮಕ್ಕಳು ಎಷ್ಟು ಕೇಡು ಮಾಡಿದರೂ ಕೂಡ ತನೆನ ಮಕ್ಕಳಿಗೆ ಸದಾ ಒಳ್ಳೆಯದೇ ಆಗಲೆಂದು ಆಶಿಸುತ್ತಾಳೆ. ಹೆಣ್ಣು ಕೇವಲ ಅಮ್ಮನಾಗಿರದೆ, ವಿವಿಧ ರೀತಿಯ ಪಾತ್ರಗಳನ್ನು ಪ್ರತಿದಿನವೂ ನಿಭಾಯಿಸುತ್ತಿರುತ್ತಾಳೆ. ಗೆಳತಿಯಾಗಿ, ಹೆಂಡತಿಯಾಗಿ, ಅಕ್ಕ – ತಂಗಿ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾಳೆ. ಇದಲ್ಲದೆ ಸಮಾಜ ದಲ್ಲಿ ದುಡಿಯುವ ವರ್ಗದಲ್ಲೂ ಭಾಗಿಯಾಗಿರುವ, ಅತ್ತ ಕಚೇರಿ, ಇತ್ತ ಕುಟುಂಬ ಇವೆರಡನ್ನೂ ಸರಿದೂಗಿಸುತ್ತಾ ದಿನನಿತ್ಯದ ಜಂಜಾಟಗಳ ನಡುವೆ ಬದುಕನ್ನು ಮುನ್ನಡೆಸುತ್ತಾಳೆ. ತನ್ನ ಮಗುವಿಗಾಗಿ ತಾಯಿ ಮಾಡುವ ತ್ಯಾಗದ ಎದುರು ಜಗತ್ತಿನ ಎಲ್ಲಾ ಸುಖ - ಸಂಪತ್ತು ನಗಣ್ಯವೆನಿಸುತ್ತದೆ.
‘ಹೆಣ್ಣು ಸಮಾಜದ ಕಣ್ಣು’ ಎಂದು ಹೇಳಿದ್ದಾರೆ ತಿಳಿದವರು. ಸಮಾಜದಲ್ಲಿ ಹೆಣ್ಣಿಗೆ ಸದಾ ಗೌರವ, ಘನತೆ ಇದ್ದೇ ಇದೆ. ಅದು ಇಮ್ಮಡಿಯಾಗುವುದು ಅವಳು ಅಮ್ಮನೆಂದು ಸಮಾಜದಲ್ಲಿ ಗುರುತಿಸಿಕೊಂಡಾಗ. ಹೆಣ್ಣು . . . ಅಕ್ಕ, ತಂಗಿ, ಗೆಳತಿ, ಹೆಂಡತಿ, ತಾಯಿ, ಮಗಳು ಹೀಗೆ ಹಲವು ಪಾತ್ರಗಳಲ್ಲಿ ಪ್ರತಿ ಮನೆಯಲ್ಲೂ ಒಂದಲ್ಲೊಂದು ಪಾತ್ರಗಳಿಗಿಂತಲೂ ಮುಖ್ಯವಾದ ಪಾತ್ರವೆಂದರೆ ತಾಯಿ. ಈ ತಾಯಿ ತನ್ನ ಮಕ್ಕಳಿಗೆ ಮಾತ್ರ ತಾಯಿಯಾಗಿರದೇ, ಇಡೀ ಸಮಾಜಕ್ಕೆ ತಾಯಿಯಾಗಿರುತ್ತಾಳೆ ಎನ್ನಬಹುದು.
ಅಮ್ಮ, ತಾಯಿ, ಅವ್ವ, ಮಾತೆ, ಜನನಿ ಇನ್ನೂ ಹಲವಾರು ರೀತಿಯಿಂದ ಕರೆಯಲ್ಪಡುವ ಈಕೆ ಹೆಣ್ಣು, ಈ ಭೂಮಿಯಲ್ಲಿ ಜನ್ಮ ತಾಳುವ ಪ್ರತಿಯೊಂದು ಶಿಶುವಿನ ಬಾಯಿಯಿಂದ ಮೊದಲು ಬರುವ ಪದವೇ ‘ಅಮ್ಮಾ’ ಎಂದೇ ಕರೆಯುತ್ತದೆ. ಮಕ್ಕಳು ತಮ್ಮ ತಾಯಂದಿರನ್ನು ಅವ್ವ, ಅಮ್ಮ, ಎಂದು ಕರೆಯುವಾಗಿನ ಧ್ವನಿಯು ಯಾವಾಗಲೂ ಇಂಪಾಗಿಯೇ ಕೇಳುತ್ತದೆ.
“ಉಪ್ಪಿಗಿಂತ ರುಚಿ ಬೇರೆಯಿಲ್ಲ” “ತಾಯಿಗಿಂತ ಬಂಧುವಿಲ್ಲ” “ಕಾಣದ ದೇವರು ಊರಿಗೆ ನೂರು, ಕಾಣುವ ತಾಯಿಯೇ ಪರಮಗುರು” – ಮುಂತಾದ ತಾಯಿಯ ಬಗೆಗಿನ ಮಾತುಗಳು ಅದೆಷ್ಟು ಅರ್ಥಪೂರ್ಣವಾದವು. ನಮಗೆ ನಿತ್ಯ ಬೆಳಕು ನೀಡುವ ಸೂರ್ಯನಂತೆ ದಿನವು ನಮ್ಮ ಕಣ್ಣಿಗೆ ಕಾಣುವ ನಮ್ಮನ್ನು ಪ್ರೀತಿಯಿಂದ ಅಕ್ಕರೆಯಿಂದ ಮುದ್ದಾಡಿ, ಲಾಲಿಸಿ, ಪಾಲಿಸಿದ ನಮ್ಮ ಕಷ್ಟವನ್ನು ಕಷ್ಟವೆನ್ನುವ ನಮ್ಮ ಯಶಸ್ಸನ್ನು ಕಂಡು ಸಂತೋಷಗೊಳ್ಳುವ ನಮ್ಗಾಗಿ ಸದಾ ದೇವರಲ್ಲಿ ಪ್ರಾರ್ಥಿಸುವ ನಮ್ಮ ತಾಯಿಗಿಂತ ಮಿಗಿಲಾದ ದೇವರು, ಬಂಧುಗಳು ಯಾರಿರಲು ಸಾಧ್ಯ?
“ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲಗುರುವು” ಜನನಿಯಿಂದ ಪಾಠ ಕಲಿತ ನಾವೇ ಧನ್ಯರು ಎನ್ನುವಂತೆ ಪ್ರತಿಯೊಬ್ಬ ತಾಯಿಯು ಸಹ ತನ್ನ ಮಗುವಿಗೆ ಅ ಅಕ್ಷರದಿಂದಲೇ ಅಕ್ಷರಾಭ್ಯಾಸ ಮಾಡಿಸುತ್ತಾಳೆ. ಮಾತ್ರವಲ್ಲದೇ ರಾಮಾಯಣ, ಮಹಾಭಾರತ ಮುಂತಾದ ಕಥೆಗಳ ಮೂಲಕ ಒಳ್ಳೆಯ ವಿದ್ಯೆ, ಬುದ್ಧಿ, ಸಂಸ್ಕøತಿ, ಸಂಸ್ಕಾರವನ್ನು ಕಲಿಸುವ ತಾಯಿ, ಮಕ್ಕಳಿಗೆ ದಾರಿದೀಪವಾಗುತ್ತಾಳೆ.
ಅಮ್ಮ ಎಂದರೆ ಹರುಷ ಅಲ್ವಾ? ಆ ಎರಡಕ್ಷರದ ಪದದಲ್ಲಿ ಅದೇನು ಚೈತನ್ಯ ತುಂಬಿದೆ. ಅಮ್ಮನನ್ನು ವರ್ಣಿಸಲು ಯಾರೂ ಶಕ್ತರಲ್ಲ. ಅವಳ ಬಗ್ಗೆ ಬರೆಯಲು ಎಷ್ಟು ಪುಟಗಳಿದ್ದರೂ ಸಾಲದು. ತಾನು ತಾಯಿಯಾಗಲು ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊರುತ್ತಾಳೆ. ಪೂಜೆ, ಪುರಸ್ಕಾರ, ಉಪವಾಸಗಳನ್ನು ಕೈಗೊಳ್ಳುತ್ತಾಳೆ.
ತಾನು ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ಅವಳಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ತನ್ನ ಕುಟುಂಬ ನಿರ್ವಹಣೆಯೊಂದಿಗೆ ಒಡಲಲ್ಲಿರುವ ಕಂದಮ್ಮನ ಆರೈಕೆ, ಔಷದೋಪಚಾರ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾಳೆ. ತನಗೆ ಎಷ್ಟೇ ಸಂಕಟ ನೋವುಗಳಿದ್ದರೂ ಅದನ್ನು ತಾಳಿಕೊಂಡು ತನ್ನ ಮಗುವಿಗಾಗಿ, ತನ್ನವರಿಗಾಗಿ ಜೀವನ ನಡೆಸುತ್ತಾಳೆ. ತನಗೆ ತಿನ್ನಲು ಒಂದು ತುತ್ತು ಅನ್ನವಿಲ್ಲದಿದ್ದರೂ ಕೂಡ ಹೇಗಾದರೂ ಮಾಡಿ ತನ್ನ ಮಗುವಿನ ಹೊಟ್ಟೆ ತುಂಬಿಸುತ್ತಾಳೆ.
‘ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು’ ಎಂ ನಾಣ್ನುಡಿಯೇ ಇದೆ. ಜನ್ಮ ನೀಡಿದ ತಾಯಿ ಹಾಗು ಭೂಮಿ ತಾಯಿಯ ಋಣವನ್ನು ತೀರಿಸುವುದು ಬಹಳ ಕಷ್ಟ. ಭೂಮಿ ತಾಯಿಯು ಸಕಲ ಜೀವರಾಶಿಗಳನ್ನು ಪೊರೆಯುವಂತೆ ನಮ್ಮ ತಾಯಿ ಕೂಡ ತನ್ನ ಮಕ್ಕಳನ್ನು ಪೊರೆಯುತ್ತಾಳೆ. ತಾಯಿಯು ಭೂಮಿಗಿಂತ ಭಾರ, ತಂದೆಯು ಗಗನಕ್ಕಿಂತ ಎತ್ತರ ಎಂಬ ಮಾತಿನಂತೆ ಭೂಮಿಯನ್ನು ಎಲ್ಲರೂ ತಾಯಿ ಎಂದು ಸಂಬೋಧಿಸುತ್ತಾರೆ. ಆದರೆ ಆಕಾಶವನ್ನು ತಂದೆ ಎಂದು ಯಾರೂ ಕರೆಯುವುದಿಲ್ಲ. ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಈ ನುಡಿಯಲ್ಲಿ ಮೊದಲ ಸ್ಥಾನ ತಾಯಿಗೆಯೇ.
ಮಕ್ಕಳು ತಂದೆ ತಾಯಿಯರನ್ನು ಜೀವವಿದ್ದಾಗ ಗಮನಿಸದೇ ಅವರು ಮರಣ ಹೊಂದಿದಾಗ ಮೊಸಳೆ ಕಣ್ಣೀರು ಸುರಿಸುವುದರೊಂದಿಗೆ ಉತ್ತರಕ್ರಿಯೆಗಳನ್ನು ವಿಜೃಂಭಣೆಯಿಂದ ಪ್ರದರ್ಶಿಸುವುದು ಇಂದಿನ ಆಧುನಿಕತೆಯ ಲಕ್ಷಣವೆನ್ನಬಹುದು. ತಾಯಿಯ ಋಣವನ್ನು ಏಳೇಳು ಜನ್ಮಗಳೆತ್ತಿದ್ದರೂ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಆಧುನಿಕತೆಯ ಭರಾಟೆಯಲ್ಲಿ ತಂದೆ – ತಾಯಿಯರನ್ನು ಮರೆಯದೆ ಕೇವಲ ತಾಯಂದಿರ ದಿನದಂದು ಮಾತ್ರ ಗೌರವ ಸಲ್ಲಿಸದೆ ಸದಾ ತಂದೆ – ತಾಯಿಯರಿಗೆ ಆಸರೆಯಾಗಿದ್ದು ಸೇವೆ ಮಾಡಿದಾಗಲೇ ಹೆತ್ತ ಮಕ್ಕಳು ಎಂಬ ಪದ ಅರ್ಥವಾಗಿರುತ್ತದೆ.
“ಅಮ್ಮ ಅಂದು ಹೇಳುತ್ತಿದ್ದಳು ಮಗಾ ಊಟ ಮಾಡೋ ಎಂದು. ಆದರೆ ಇಂದು ಹೇಳುತ್ತಿದ್ದಾಳೆ ಊಟಾ ಹಾಕೋ ಎಂದು. ಆದರೆ ಇಂದು ಹೇಳಿತ್ತಿದ್ದಾಳೆ ಊಟಾ ಹಾಕೋ ಎಂದು”
ಇಂದಿನ ಮಕ್ಕಳು ಇಂತಹ ವಾತಾವರಣವನ್ನು ನಮ್ಮ ಸಮಾಜದಲ್ಲಿ ಸೃಷ್ಟಿಸದೆ ಹೆತ್ತ ತಂದೆ – ತಾಯಿಯವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಗೌರವಿಸುತ್ತಾ ನಮ್ಮ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸಲಿ ಎಂಬುದೇ ಆಶಯ.
ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯ ಕಳಕೊಂಡ ಮ್ಯಾಲೆ ಮತ್ತೆ ಸಿಗುವಳೇನೊ ತಮ್ಮ ಮರಳಿ ಬರುವಳೇನೋ
ಎಷ್ಟು ಸತ್ಯವಾದ ಸಾಲುಗಳು ಅಲ್ಲವೇ ಇವು?
ಸಂಗ್ರಹ:- ಅನಿಕಾ ದೇವಿ 10ನೇ ‘ಎ’
ಅರಸನ ಭೇರಿ ಕಥೆ
ಒಂದು ಮಧ್ಯಾಹ್ನ ಅಡವಿಯಲ್ಲಿ ಓಡಾಡುತ್ತಿದ್ದ ಫಿಕ್ಸಿ ಎನ್ನುವ ನರಿ ಒಂದು ದೊಡಡ ಮರದ ಮೇಲೆ ಜೇನುಗೂಡೊಂದನ್ನು ನೋಡಿತು.
ಅದಕ್ಕೆ ಜೇನನ್ನು ಸವಿಯಲು ಇಷ್ಟವಿತ್ತು. ಆದರೆ ಅದಕ್ಕೆ ಮರವನ್ನೇರಲು ಬರುತ್ತಿರಲಿಲ್ಲ. ಅದಕ್ಕಾಗಿ ಅದು ತನ್ನ ಸ್ನೇಹಿತ ಬಾಲ್ಡಿ ಎನ್ನುವ ಕರಡಿಯ ಹಾದಿ ಕಾಯ ತೊಡಗಿತು. ಅಷ್ಟರಲ್ಲಿ ಕ್ವಿಜ್ಜಿ ಎನ್ನುವ ಮಂಗ ಅಲ್ಲಿಗೆ ಬಂದಿತು. ಕ್ವಿಜ್ಜಿ ಒಮ್ಮೆ ಫಿಕ್ಸಿಗೆ ಮೋಸ ಮಾಡಿತ್ತು. ಇದರಿಂದ ಫಿಕ್ಸಿ ಸೇಡು ತೀರಿಸಿಕೊಳ್ಳಲು ಸಮಯ ಕಾಯುತಿತ್ತು. ಇದ್ದಕ್ಕಿದ್ದಂತೆ ನರಿಗೊಂದು ವಿಚಾರ ಹೊಳೆಯಿತು. ಅದು ತನ್ನ ದೊಡ್ಡ ಕೋಲನ್ನು, ಬಂದೂಕಿನಂತೆ ಹೆಗಲಮೇಲೆ ಇಟ್ಟುಕೊಂಡು “ಎಡ, ಬಲ! ಎಡ, ಬಲ!” ಎನ್ನತ್ತಾ ಮೇಲೆ ಕೆಳಗೆ ಓಡಾಡತೊಡಗಿತು. ಇದನ್ನು ನೋಡಿದ ಕ್ವಿಜ್ಜಿ ಅಚ್ಚರಿಯಾಯಿತು. ಅದು ನರಿಯನ್ನು “ಮಿತ್ರಾ ಇದೇನು! ಇಲ್ಲೇನು ಮಾಡುತ್ತಿರುವೆ?” ಎಂದು ಕೇಳಿತು. ನರಿ ಗರ್ವದಿಂದ, “ನಾನು ಅರಸನ ಭೇರಿಯನ್ನು ಕಾಯುತ್ತಿದ್ದೇನೆ. ದೂರ ಹೋಗು. ನನಗೆ ಇಲ್ಲಿ ಕೆಲಸವಿದೆ” ಎಂದಿತು
ಕ್ವಿಜ್ಜಿ ಚಕಿತಗೊಂಡಿತು.
ಅದು, “ಭೇರಿಯೆಲ್ಲಿ?” ಎಂದು ಕೇಳಿತು.
ಫಿಕ್ಸಿ ಏನೂ ಅರಿಯದವರಂತೆ ಜೇನುಗೂಡನ್ನು ತೋರಿಸಿ, “ಇದು ಅರಸನ ಭೇರಿ. ಅರಸನ ಹೊರತು ಯಾರೂ ಅದನ್ನು ಮುಟ್ಟಬಾರದು” ಎಂದಿತು. ಕ್ವಿಜ್ಜಿಗೆ ಅರಸನ ಭೇರಿಯ ವಿಚಾರ ತಿಳಿಯುವ ಕುತೂಹಲ ಉಂಟಾಯಿತು. ಅದು ಭೇರಿಯನ್ನು ಪರೀಕ್ಷೀಸಲು ಹೊರಟಿತು. ಆಗ ಫಿಕ್ಸಿ, “ನಿಲ್ಲು; ನೀನುಭೇರಿಯ ಹತ್ತಿರ ಹೋಗಬಾರದು” ಎಂದು ಕೂಗಿತು.
ಕ್ವಿಜ್ಜಿಯ ಕುತೂಹಲ ಇನ್ನೂ ಹೆಚ್ಚಾಯಿತು. ಅದು ಫಿಕ್ಸಿಯ ಹತ್ತಿರ ಹೋಗಿ “ನಾವಿಬ್ಬರು ಒಳ್ಳೆಯ ಸ್ನೇಹಿತರಲ್ಲವೇ?” ಎಂದು ಕೇಳಿತು. ಅದಕ್ಕೆ ಫಿಕ್ಸಿ, “ಸಂಶಯವಿಲ್ಲ” ಎಂದಿತು ಆಗ ನರಿ “ಸಾಧ್ಯವಿಲ್ಲ! ಯಾವ ಕಾಲಕ್ಕೂ ನಾನು ಅರಸನ ಆಜ್ಞೆಯನ್ನು ಮೀರಲಾರೆ. ಊಹಿಸು ನೀನು ಅರಸನ ಭೇರಿಯನ್ನು ಕೋಲಿನಿಂದ ಬಾರಿಸಲು ಸಾಧ್ಯವೇ ಇಲ್ಲ!” ಎಂದು ತಿಳಿಸಿತು. ಅದಕ್ಕೆ ಕ್ವಿಜ್ಜಿ, “ನಾನು ಕೋಲನ್ನು ಉಪಯೋಗಿಸಿವುದಿಲ್ಲ” ಎಂದತು.
ಮಂಗ, “ಕೈಗಳಿಂದ! ಮಿತ್ರಾ! ನಾವು ಒಳ್ಳೇ ಸ್ನೇಹಿತರಾದ ಕಾರಣ ದಯವಿಟ್ಟು ಅರಸನ ಭೇರಿಯನ್ನು ಬಾರಿಸಲು ಒಮ್ಮೆ ಅವಕಾಶ ಮಾಡಿಕೊಡು!” ಎಂದು ಅಂಗಲಾಚಿತು. ಆಗ ಫಿಕ್ಸಿ, “ಸರಿ ಹಾಗೇ ಮಾಡ. ಆದರೆ ಭೇರಿಯನ್ನು ಒಮ್ಮೆ ಮಾತ್ರ ಬಾರಿಸು” ಎಂದಿತು. ಕ್ವಿಜ್ಜಿ ಸಂತೋಷದಿಂದ ಹಾರಿ ಮರವನ್ನೇರಿ ಜೇನುಗೂಡಿನ ಹತ್ತಿರ ಹೋಯಿತು. ನಂತರ ಶಕ್ತಿಯನ್ನೆಲ್ಲ ಉಪಯೋಗಿಸಿ ಜೋರಾಗಿ ‘ಅರಸನ ಭೇರಿ’ಯನ್ನು ಬಡಿಯಿತು. ಆ ಭೇರಿಯಿಂದ ‘ಗುಯ್’ ಎನ್ನುವ ದೊಡ್ಡ ಶಬ್ದ ಕೇಳಿಸಿತು. ಸಾವಿರಾರು ಜೇನ್ನೋಣಗಳು ದಾಳಿಯಿಂದ ಹೆದರಿ ಮರದಿಂದ ಹಾರಿ ನೋವಿನಿಂದ ನರಳುತ್ತಾ ಅಡವಿಯೊಳಗೆ ಓಡಿತು. ಫಿಕ್ಸಿ ಜೋರಾಗಿ ನಗುತ್ತಾ, “ಏ ಕ್ವಿಜ್ಜಿ ಅರಸನ ಭೇರಿ ಹೇಗಿದೆ? ಹಾ! ಹಾ” ಎಂದು ಕೂಗಿತು.
ಅದಕ್ಕೆ ನಕ್ಕು ನಕ್ಕು ಪಕ್ಕೆಗಳೆಲ್ಲಾ ನೋಯತೊಡಗಿತು.
ನವಿಲು ಮತ್ತು ಕೊಕ್ಕರೆ
ಒಂದು ಕೊಳದ ಪಕ್ಕದಲ್ಲಿ ಒಂದು ಕೊಕ್ಕರೆ ವಾಸಿಸುತ್ತಿದ್ದವು. ನವಿಲಿಗೆ ಅಂದವಾದ ಗರಿಗಳಿದ್ದವು. ತನ್ನ ಗರಿಗಳನ್ನು ನೋಡಿಕೊಂಡು ನವಿಲು ಯಾವಾಗಲೂ ಜಂಭ ಪಟ್ಟುಕೊಳ್ಳುತ್ತಿತ್ತು. ಕೊಕ್ಕರೆಯ ಬಳಿ ಮತ್ತು ಕಪ್ಪಗಿನ ಗರಿಗಳನ್ನು ನೋಡಿ ನಗುತ್ತಿತ್ತು. “ನಿನ್ನ ರೆಕ್ಕೆಗಳಲ್ಲಿ ಬಣ್ಣವಿಲ್ಲ. ನನ್ನ ಗರಿಗಳನ್ನು ನೋಡು! ಬಣ್ಣ ಬಣ್ಣವಾಗಿ ಎಷ್ಟು ಅಂದವಾಗಿದೆ ! ನಿನಗೆ ನನ್ನಂಥ ಗರಿಗಳು ಬೇಕೆಂದು ಆಸೆಯಾಗುವುದಿಲ್ಲವೇ ?” ಎಂದು ಒಂದು ದಿನ ನವಿಲು ಕೊಕ್ಕರೆಯಲ್ಲಿ ಕೇಳಿತು. “ಛೆ! ಛೆ! ಇಲ್ಲವೇ ಇಲ್ಲ. ನಿಜ ಹೇಳಬೇಕೆಂದರೆ, ನನ್ನನ್ನು ಕಂಡು ನಿನಗೆ ಹೊಟ್ಟೆ ಕಿಚ್ಚು ಉಂಟಾಗಬೇಕು. ಯಾಕೆ ಹೇಳು? ನನ್ನ ರೆಕ್ಕೆಗಳ ಮೂಲಕ ನಾನು ಆಕಾಶದಲ್ಲಿ ಎತ್ತರಕ್ಕೆ ಹಾರಬಲ್ಲೆ. ಆದರೆ ನೀನು ನಿನ್ನ ಗರಿಗಳನ್ನು ಧೂಳಿನಲ್ಲಿ ಎಳೆದುಕೊಂಡು ನಡೆಯಬೇಕು ಅಷ್ಟೆ” ಎಂದು ಕೊಕ್ಕರೆಯು ಉತ್ತರಿಸಿತು. ನವಿಲಿಗೆ ಏನು ಹೇಳಬೇಕೆಂದು ತೋಚದೆ ಸುಮ್ಮನೆ ನಿಂತುಬಿಟ್ಟಿತು.
ಸಂಗ್ರಹ:- ದೀಕ್ಷಾ ಪೂಜಾರಿ 8 ನೆ ‘ಎ’
ಅಪ್ಪ ಎಂದರೆ ಆಕಾಶ
ನಾನು ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ನಾನು ಮೆಚ್ಚಿದ ಪುಸ್ತಕ ಅಪ್ಪ ಎಂದರೆ ಆಕಾಶ. ಈ ಪುಸ್ತಕವನ್ನು ಬರೆದವರು ಎ . ಆರ್ . ಮಣಿಕಾಂತ್. ಈ ಪುಸ್ತಕದಿಂದ ನಾನು ಹಲವಾರು ವಿಷಯಗಳನ್ನು ಕಲಿತುಕೊಂಡೆ, ಪ್ರೀತಿ, ವಾತ್ಸಲ್ಯ, ಕರುಣೆ, ತ್ಯಾಗ, ನೋವು, ಸಂತೋಷ ಹೀಗೆ ಹಲವಾರು ವಿಷಯಗಳನ್ನು ಕಲಿತುಕೊಂಡೆ. ಈ ಪುಸ್ತಕದಲ್ಲಿ ನನಗೆ ಇಷ್ಟವಾದ ಕಥೆಯೆಂದರೆ ಹಾಡಿನ ಮೂಲಕ 500 ಮಕ್ಕಳ ಜೀವ ಉಳಿಸಿದ್ದಾಳೆ ಪಲಕ್! ಇವಳು ಬಿ . ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿದ್ದಳು. ಹಲವಾರು ಕಡೆಯಲ್ಲಿ ಕಾರ್ಯಕ್ರಮ ಕೊಟ್ಟಿದ್ದಾಳೆ. ಇವಳು ಒಬ್ಬ ಒಳ್ಳೆ ಗಾಯಕಿ, ದೇಶಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಹಾಗೂ ಭಜನೆಗಳನ್ನು ಹಾಡುತ್ತಾಳೆ. ಇವಳು ಹಾಡಿದಾಗ ಸಿಕ್ಕ ಹಣದಿಂದ ಬಡವರ ಮನೆಯ 564 ಮಕ್ಕಳ ಹೃದಯದ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಿದ್ದಾಳೆ. ಈಕೆಯು ಬರೀ ಭಾರತದ ಮಕ್ಕಳಲ್ಲದೆ ಪಾಕಿಸ್ತಾನದ ಮಕ್ಕಳಿಗೂ ಸಹಾಯ ಮಾಡಿದ್ದಾಳೆ. ಇದರಿಂದ ನಾವು ತಿಳಿಯ ಬಹುದು ಹೆಣ್ಣಿಂದ ಏನು ಮಾಡಲು ಸಾಧ್ಯ ಎಂದು ಇದರಿಂದ ನಾನು ಹೇಳುವುದೇನೆಂದರೆ ನಾವು ಕೂಡ ಬೇರೆಯವರಿಗೆ ಸಹಾಯ ಮಾಡಬೇಕು. ಆಗ ಅದರ ಫಲ ಅದೇ ಕ್ಷಣಕ್ಕೆ ಸಿಗದಿದ್ದರೂ ನಮ್ಮ ಕ್ಷಣ ಕಾಲದಲ್ಲಿ ಸಿಗುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ.
ಧನ್ಯವಾದಗಳು,
ಸಂಗ್ರಹ:- ಸಹನಾ . ಶಿಂಧೆ 10ನೇ ‘ಎ’
ಶತ್ರುವನ್ನು ಪ್ರೀತಿಸುವುದು ಹೇಗೆ?
ಈ ಜಗತ್ತಿನಲ್ಲಿ ಅನೇಕ ಮುಖ್ಯ ಗುಣಗಳಲ್ಲಿ ಪ್ರೀತಿಯೂ ಒಂದು, ಪ್ರೀತಿಯನ್ನು ಆಧರಿಸಿ ಈ ಜಗತ್ತು ಬಾಳುತ್ತಿದೆ. ಮಿತ್ರರನ್ನು, ಬಂಧು ಬಳಗವನ್ನು, ಸ್ವ- ಜಾತಿ ಬಾಂಧವರನ್ನು, ಉಪಕಾರ ಮಾಡಿದವರನ್ನು ಎಲ್ಲರೂ ಪ್ರೀತಿಸುತ್ತಾರೆ. ಏಕೆಂದರೆ ಅವರನ್ನು ಪ್ರೀತಿಸುವುದು ಬಹಳ ಸುಲಭ.
ಆದರೆ ಶತ್ರುವನ್ನು, ಮಿತ್ರನಲ್ಲದ ವ್ಯಕ್ತಿಯನ್ನು, ಅಪಕಾರ ಮಾಡಿದವರನ್ನು, ದ್ವೇಷ ಮಾಡಿದವರನ್ನು, ಮೋಸ ಮಾಡಿದವರನ್ನು ಪ್ರೀತಿಸುವುದು ಬಹಳ ಕಷ್ಟ. ಆದರೆ ಸಾಧುಗಳು, ಸಂತರು, ಮಹಾತ್ಮರು ಆ ಕೆಲಸವನ್ನೂ ಮಾಡಬಲ್ಲರು. ಇಸ್ಲಾಂ ಧರ್ಮದ ಆಶಯಗಳಿಗನುಸಾರವಾಗಿ ಬದುಕುತ್ತಿದ್ದ ಸಂತ ಮುಲ್ಲಾ ನಸ್ರುದ್ದೀನರ ಬದುಕಿನಲ್ಲಿ ಇಂತಹ ಅನೇಕ ಪ್ರಸಂಗಗಳು ದೊರೆಯುತ್ತದೆ. ಮುಲ್ಲಾ ನಸ್ರುದ್ದೀ ಆರ್ಥಿಕವಾಗಿ ಅತ್ಯಂತ ಹಿಂದುಳಿದವರು. ಸರಳವಾದ ಜೀವನ, ಉನ್ನತವಾದ ಚಿಂತನ ಎಂಬ ಶ್ರೇಣಿಗೆ ಸೇರಿದವರು. ಒಮ್ಮೆ ಅವರ ಮನೆಗೆ ಕಳ್ಳರು ನುಗ್ಗಿದರು. ರಾತ್ರಿ ವೇಳೆಯಾಗಿತ್ತು. ಸಂತ್ರು ಗಾಢ ನಿದ್ರೆಯಲ್ಲಿದ್ದರು. ಕಳ್ಳರು ಮನೆಯಿಡೀ ಹುಡುಕಾಡಿದರು. ಅವರಿಗೆ ದಾನ – ಧರ್ಮ ಮಾಡುವ ಈ ಮುಲ್ಲಾನ ಮನೆಯಲ್ಲಿ ದಾರಿದ್ರ್ಯ ತಾಂಡವ ಆಡುತ್ತಿದೆ ಎಂದು ತಿಳಿದಿರಲಿಲ್ಲ. ಮನೆಯಲ್ಲಿ ಏನೂ ಇಲ್ಲದ್ದನ್ನು ನೋಡಿ ಆ ಕಳ್ಳರಿಗೆ ಸಿಟ್ಟು ಬಂತು. ಪೆಟ್ಟಿಗೆಗಳನ್ನು ತೆರೆದು ಹುಡುಕಾಡಿದರು. ಒಳಗಿದ್ದ ವಸ್ತುಗಳನ್ನು ಹೊರಗೆ ಎಸೆದರು. ಈ ಸದ್ದಿಗೆ ಮುಲ್ಲಾರಿಗೆ ನಿದ್ರಾಭಂಗವಾಯಿತು.
ಇಷ್ಟರಲ್ಲಿ ಕಳ್ಳರಿಗೂ ನಾಲ್ಕಾರು ಪಾತ್ರೆ ಪರಡಿಗಳು ದೊರೆತವು. ಅಷ್ಟಾದರೂ ಪರವಾಗಿಲ ಸಿಕ್ಕಿದ್ದನ್ನು ಒಯ್ಯೋಣ ಎಂದು ಭಾವಿಸಿ ಕಳ್ಳರು ಹೊರಟರು. ಹಾಗೆ ಹೊರಟ ಕಳ್ಳರನ್ನು ನಸ್ರುದ್ದೀನ್ ನೋಡಿದರು. ತಟ್ಟನೆ ಎದ್ದು ಅವರನ್ನು ಹಿಂಬಾಲಿಸಿದರು. ಮನೆ ಮಾಲೀಕನು ಹಿಂಬಾಲಿಸುವುದನ್ನು ನೋಡಿ ಕಳ್ಳರು ಗಾಬರಿಯಾದರು. ಅವರು ವೇಗವಾಗಿ ಧಾವಿಸ ತೊಡಗಿದರು. ಮುಲ್ಲಾ ನಸ್ರುದ್ದೀ ನ್ ಬೊಬ್ಬಿಟ್ಟರು “ಎಲೈ ತಮ್ಮಂದಿರ ನೀವು ಇಷ್ಟು ಜೋರಾಗಿ ಓಡಿದರೆ ಹೇಗೆ? ನಾನು ಪ್ರಾಯದ ಮುದುಕ. ನಾನು ನಿಮ್ಮನ್ನು ಹೇಗೆ ಹಿಬಾಲಿಸಲಿ?”
ಕಲ್ಳರು ಪ್ರಶ್ನಿಸಿದರು, “ ನೀವೇಕೆ ನಮ್ಮನ್ನು ಹಿಂಬಾಲಿಸಬೇಕು?” ಮುಲ್ಲಾ ನಸ್ರುದ್ದೀನರ ಸರಳ ಉತ್ತರ ಹೀಗಿತ್ತು, “ಅಯ್ಯಾ ಮಕ್ಕಳೆ, ನನ್ನ ಮನೆಯಲ್ಲಿರುವ ನಾಲ್ಕಾರು ಪಾತ್ರೆಗಳನ್ನು ನೀವು ಒಯ್ದರೆ ನಾನೆಂತು ಬದುಕಲಿ? ನಾನು ನಿಮ್ಮ ಮನೆಗೆ ಬಂದು ಬಿಡುತ್ತೇನೆ. ಹಿಂದಿನಿಂದ ನನ್ನ ಪತ್ನಿ ಫಾತಿಮಾ ಬೀಬಿ ಕೂಡ ಬರುತ್ತಿದ್ದಾಳೆ. ನಾವಿಬ್ಬರು ನಿಮ್ಮ ಮನೆಯಲ್ಲೇ ತಂದೆ ತಾಯಿಯಂತೆ ಇದ್ದು ಬಿಡುತ್ತೇವೆ. ಅದಕ್ಕಾಗಿ ಹಿಂಬಾಲಿಸುತ್ತಿದ್ದೇವೆ.” ಈ ವಾತ್ಸಲ್ಯಪೂರಿತವಾದ ಮಾತನ್ನ ಕೇಳಿದಾಗ ಕಳ್ಳರಿಗೆ ಅಚ್ಚರಿಯೆನಿಸಿತು. ಒಂದು ಕ್ಷಣ ಅವರು ಕಿಂಕರ್ತವ್ಯ ವಿಮೂಢರಾದರು. ಬಳಿಕ ಸಾವರಿಸಿಕೊಂಡು ಹಿಂದಿರುಗಿ ಬಂದು, ಮುಲ್ಲಾ ನಸ್ರುದ್ದೀನರ ಕಾಲಿಗಡ್ಡ ಬಿದ್ದು ಕ್ಷಮೆಯಾಚಿಸಿದರು. ಸಂತರು ನಡೆಯುವ ದಾರಿಯಿದು. ಅವರು ಮಿತ್ರರನ್ನೂ ಶತ್ರುಗಳನ್ನೂ, ಸುಖವನ್ನೂ – ದುಃಖವನ್ನೂ, ಉಪಕಾರಿಯನ್ನೂ – ಅಪಕಾರಿಯನ್ನೂ, ಸಮಾನ ಭಾವದಿಂದ ನೋಡಬಲ್ಲರು. ವಾತ್ಸಲ್ಯ ಭಾವದಿಂದ ಪ್ರೀತಿಸ ಬಲ್ಲರು. ಅದಕ್ಕಾಗಿ ಅವರ ಬಗ್ಗೆ ‘ವಸುದೈವ ಕುಟುಂಬಕಮ್’ ಅನ್ನುತ್ತಾರೆ. ಇಂತಹ ಉದಾರ ಭಾವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ, ಇಡೀ ಜಗತ್ತೇ ಎಷ್ಟೊಂದು ಸುಂದರವಾಗ ಬಲ್ಲದು!
ಸಂಗ್ರಹ:- ಸುಶ್ಮಿತಾ 8ನೇ ‘ಬಿ’
ಯಾರು ದೊಡ್ಡವರು?
ಒಬ್ಬ ಕ್ರಿಶ್ಚಿಯನ್ ಪಾದ್ರಿ ಯಾವಾಗಲೂ ಗುರುಗಳೊಡನೆ ವಾದಕ್ಕಿಳಿಯುತ್ತಿದ್ದನು. ಒಂದು ದಿನ ಬಿಯಸ್ ರೈಲ್ವೆ ನಿಲ್ದಾಣದಲ್ಲಿ ಇಳಿದ ನಂತರ ಪಾದ್ರಿಯು ಗುರುಗಳಿಗೆ ‘ನಿಮಗೊಂದು ಪ್ರಶ್ನೆ ಕೇಳಬೇಕೆಂದಿರುವೆ’ ಎಂದನು. ಗುರುಳಿಗೆ ಪಾದ್ರಿಗೆ ಅವರು ಇಚ್ಛೆಪಟ್ಟ ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಎಂದು ತಿಳಿಸಿದ. ನಂತರ ಪಾದ್ರಿ, “ ಗುರುನಾನಕ್, ಕಬೀರ ಮತ್ತು ಬಾಬಾ ಜೈಮಲ್ಸಿಂಗ್ ಇವರುಗಳಲ್ಲಿ ಶ್ರೇಷ್ಠರು ಎಂದು ಕೇಳಿದನು. ಗುರುಗಳು “ಅವರೆಲ್ಲರನ್ನು ನನ್ನ ಮುಂದೆ ಕರೆದುಕೊಂಡು ಬಾ, ನಂತರ ನಿನ್ನ ಪ್ರಶ್ನೆಗೆ ಉತ್ತರಿಸುವೆನು” ಎಂದರು. “ನಾನು ಅದನ್ನು ಮಾಡಲಾರೆ, ನನ್ನಿಂದ ಅದು ಸಾಧ್ಯವಿಲ್ಲ” ಎಂದು ಪಾದ್ರಿ ಉತ್ತರಿಸಿದನು. ಗುರುಗಳು “ನಾನು ಬಾಬಾಜಿಯವರನ್ನು ಮಾತ್ರ ನೋಡಿರುವೆನು. ಎಲ್ಲರೂ ಒಂದೇ ಸ್ಥಳದಲ್ಲಿ ಬಂದಿರುತ್ತಾರೆ. ಅವರನ್ನ ಹೋಲಿಸುವ ಪ್ರಶ್ನೆಯೇ ಬರುವುದಿಲ್ಲ”.
ಪಾದ್ರಿಗೆ ಗುರುಗಳ ಇಂಗಿತ ತಿಳಿಯಿತು. ವಾದ ಮಾಡುವುದನ್ನು ಬಿಟ್ಟು ಎಲ್ಲ ಸಂತರನ್ನು ಆದರದಿಂದ ಕಾಣಲು ಆಭ್ಯಾಸ ಮಾಡಿಕೊಂಡ.
ಎಲ್ಲಿದೇ ಶಕ್ತಿ?
ಒಮ್ಮೆ ಸ್ವರ್ಗದಲ್ಲಿ ದೇವತೆಗಳ ಮಧ್ಯೆ ಒಂದು ಚರ್ಚೆ ಸಾಗುತ್ತಿತ್ತು. ಚರ್ಚೆಯ ವಿಷಯ ಒಂದು ಅದ್ಭುತ ಶಕ್ತಿಯನ್ನು ಎಲ್ಲಿ ಹುದುಗಿಡುವುದು ಎಂದು. ಅದಿ ಎಂತಹ ಶಕ್ತಿಯೆಂದರೆ ಮನುಷ್ಯನು ಅದರಿಂದ ಯಾವ ಕಾರ್ಯವನ್ನು ಬೇಕಾದರೂ ಸರಾಗವಾಗಿ ಸಾಧಿಸಬಹುದು. ಅಂತಹ ಶಕ್ತಿಯನ್ನು ಸಾಗರದ ಆಳದಲ್ಲಿ ಇಡಬೇಕೆಂದು ಒಬ್ಬ ದೇವರು ಸೂಚಿಸಿದ. ಪರ್ವತಗಳ ಶಿಖರದಲ್ಲಿ ನಿಕ್ಷೇಪಿಸಬೇಕೆಂದು ಇನ್ನೊಬ್ಬ ದಟ್ಟ ಕಾಡಿನಲ್ಲಿ ನಿಕ್ಷೇಪಿಸಬೇಕೆಂದು ಮಗದೊಬ್ಬ, ಹೀಗೆ ಹಲವಾರು ಯೋಚನೆಗಳು ಬರುತ್ತಿದ್ದವು. ಅವರಲ್ಲಿ ಬುದ್ಧಿವಂತನೊಬ್ಬ, “ ಆ ಅದ್ಭುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಬಚ್ಚಿಡಬೇಕು, ಬಾಲ್ಯದಿಂದಲೂ ಮನುಷ್ಯ ಸದಾ ಹೊರ ಪ್ರಪಂಚದಲ್ಲಿ ಮನಸ್ಸನಿಡುತ್ತಾನೆ. ತನ್ನೊಳಗಿನ ಅದ್ಭುತ ಶಕ್ತಿಯನ್ನು ಅವನೆಂದೂ ಪರಿಗಣಿಸುವುದಿಲ್ಲ. ಎಲ್ಲೊ ಬುದ್ಧಿವಂತರು ತಮ್ಮೊಳಗಿನ ಶಕ್ತಿಯನ್ನರಿತು ಮಹಾತ್ಮರಾಗುವರು,” ಎಂದು ಹೇಳಿದ. ಇದಕ್ಕೆ ಎಲ್ಲಾ ದೇವತೆಗಳೂ ಒಪ್ಪಿದರು.
ಈಗ ತಿಳಿಯಿತೆ, ಮನುಷ್ಯನಿಗಿರುವ ವಿಶೇಷತೆ ಅವನ ಮನಸ್ಸಿನದು. ಒಬ್ಬನಿಗೆ ತನ್ನಲ್ಲಿರುವ ಶಕ್ತಿಯ ಅರಿವು ಇರತ್ತದೆ, ಮತ್ತೊಬ್ಬನಿಗೆ ಅದರ ಅರಿವಿರುವುದಿಲ್ಲ. ಇದರಿಂದ ತಿಳಿದುಕೊಳ್ಳಬಲ್ಲ ವಿಷಯವೇನೆಂದರೆ, ತನ್ನ ಮನಸ್ಸಿನಲ್ಲಿ ಅಡಗಿರುವ ಮಹತ್ತರ ಅದ್ಭುತ ಶಕ್ತಿಯನ್ನು ಉಪಯೋಗಿಸಿದ ಮನುಷ್ಯನು ಮಹಾತ್ಮನಾಗುತ್ತಾನೆ.”
ಸಂಗ್ರಹ:- ರೀಷ್ಮಾ 8 ನೇ ‘ಎ’
ಸಂಗ್ರಹ:– ಅನನ್ಯ ಶೆಟ್ಟಿ 8ನೇ ಬಿ
ಅನಂತಯ್ಯನ ಮಾತ್ರೆ ವೈಕುಂಠ ಯಾತ್ರೆ
ಬೇರೆ ಬೇರೆ ಊರುಗಳಲ್ಲಿ ವೈದ್ಯಕೀಯ ಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿ ರೋಗಿಗಳಿಗೆ ಅತ್ಯಂತ ಸಮರ್ಪಕವಾದ ಚಿಕಿತ್ಸೆಯನ್ನು ನೀಡುವ ವೈದ್ಯರು ಇರುತ್ತಾರೆ. ಅರ್ಧಂಬರ್ಧ ತಿಳಿದುಕೊಂಡ ಅಥವಾ ತಿಳಿಯದೆ ಪಂಡಿತರ ಸೋಗಿನಲ್ಲಿ ಔದ ನೀಡುವ ವಂಚಕರೂ ಇರುತ್ತಾರೆ. ಕಾಯಿಲೆ ಬಂದಾಗ ಪರಿಣತರೂ, ಪ್ರಾಮಾಣಿಕರೂ ಆದ ವೈದ್ಯರಲ್ಲಿಗೆ ಹೋಗುವುದು ಸುರಕ್ಷಿತ.
ಅಮಾಯಕರೂ, ಮುಗ್ಧರೂ ಆದ ರೋಗಿಗಳನ್ನು ತಮ್ಮ ಮಾತುಗಳಿಂದ ಮರುಳು ಮಾಡಿ ಮಾತ್ರೆಗಳ ಮೂಲಕ ಗುಣಪಡಿಸುವುದಾಗಿ ನಂಬಿಸಿ ಮೋಸ ಮಾಡುವ ನಕಲಿ ವೈದ್ಯನನ್ನು ಲೇವಡಿಮಾಡುವ ಗಾದೆಯೊಂದು ‘ಅನಂತಯ್ಯನ ಮಾತ್ರೆ ವೈಕುಂಠ ಯಾತ್ರೆ’ ಎನ್ನುತ್ತೇವೆ.
ಒಂದು ಊರಿನಲ್ಲಿ ಅನಂತಯ್ಯನೆಂಬ ನಕಲಿ ವೈದ್ಯನಿದ್ದು ಅವನು ನಾನಾ ಬಗೆಯ ಮಾತ್ರೆಗಳ ಮೂಲಕ ಆಕಷ್ಮಿಕವಾಗಿ ಕೆಲಮಂದಿ ರೋಗಿಗಳು ಗುಣಮುಖರಾದರೂ ಹೆಚ್ಚಿನವರು ಜೀವ ಕಳೆದುಕೊಳ್ಳುತ್ತಿದ್ದರಂತೆ. ಈತನ ಮಾತ್ರೆಗಳನ್ನು ಯಾರು ಸೇವಿಸುತ್ತಾರೋ ಅವರಿಗೆ ಪರಲೋಕ ಯಾತ್ರೆಯೇ ಗತಿಯೆಂದು ಅನುಭವಿಗಳು ಎಚ್ಚರಿಕೆ ಕೊಡುತ್ತಿದ್ದರು.
ಸಂಗ್ರಹ:- ಪೃಥ್ವಿ 8 ನೇ ‘ಎ’
ಬಡವ ಶ್ರೀಮಂತ
ತಂದೆ ಬಡತನ ಹೇಗಿರುವುದೆಂಬುದನ್ನು ಮಗನಿಗೆ ತೋರಿಸಬೇಕೆಂದು ಅವನನ್ನು ಕರೆದುಕೊಂಡು ನಗರದಿಂದ ಹಳ್ಳಿಗೆ ಹೋದನು.ಅಲ್ಲಿ ಎರಡು ದಿನ ಬಡವರ ಮಧ್ಯದಲ್ಲಿದ್ದರು. ತಂದೆ ಮಗನನ್ನು ಕುರಿತು, “ಮಗನೇ ಹಳ್ಳಿಯಲ್ಲಿ ಬಡವರನ್ನು ನೋಡಿದಿಯಾ? ಅವರಿಂದ ನೀನು ಏನು ಕಲಿತೆ?” ಎಂದು ಕೇಳಲು ಮಗ ಹೇಳಿದ “ಹೌದು ಅಪ್ಪಾಜೀ, ನಮ್ಮ ಬಳಿ ಒಂದು ನಾಯಿ ಇದೆ. ಅವರ ಬಳಿ ನಾಲ್ಕು ನಾಯಿಗಳಿವೆ. ನಮ್ಮ ಬಳಿ ಒಂದು ಈಜು ಕೊಳ ಇದೆ. ಅವರ ಬಳಿ ನೀರಿನಿಂದ ತುಂಬಿದ ಕೆರೆಯೇ ಇದೆ. ನಾವು ಪ್ರತಿಯೊಂದು ವಸ್ತುವನ್ನು ಪೇಟೆಯಿಂದ ಕೊಂಡು ತಂದು ತಿನ್ನುತ್ತೇವೆ. ಅವರು ಸ್ವಯಂ ಬೆಳೆದು ತಿನ್ನುತ್ತಾರೆ. ನಮಗೆ ಎ.ಸಿ.ಯಲ್ಲೂ ನಿದ್ರೆ ಬರುವುದಿಲ್ಲ.ಅವರು ಎಲ್ಲಾದರೂ ಸರಿ ಮಲಗಿ ಬಿಡುತ್ತಾರೆ. ಅವರೇ ನಮಗಿಂತ ಎಷ್ಟೊಂದು ಶ್ರೀಮಂತರು! ಅಪ್ಪ ನಾವು ಹಳ್ಳಿಗೆ ಹೋದುದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನಾವು ಬಡವರೆಂಬುದು ನಮಗೆ ಗೊತ್ತಾಗುತ್ತಲೇ ಇರಲಿಲ್ಲ” ಎಂದನು ಮತ್ತು ಅವರಿಬ್ಬರೂ ಮಾತಾನಾಡುತ್ತ ಮುಂದುವರೆದರು.
ಸಂಗ್ರಹ:- ಕಾವ್ಯಶ್ರೀ 9ನೇ ‘ಎ’
ಕತ್ತೆಯ ಸಾಹಸ
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಎಲ್ಲ ಜನರು ಮತ್ತು ಪ್ರಾಣಿಗಳು ಪರಸ್ಪರ ಸಹಬಾಳ್ವೆಯಿಂದ ಇದ್ದರು. ಇಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಒಳ್ಳೆ ಪ್ರೀತಿಯಿಂದ ನೋಡುತ್ತದ್ದರು. ಅಲ್ಲಿ ಒಂದು ಕತ್ತೆ ಇತ್ತು. ಅದನ್ನು ಯಾರು ತಮ್ಮ ಒಟ್ಟಿಗೆ ಸೇರಿಸುತ್ತಿರಲಿಲ್ಲ. ಅದಕ್ಕೆ ಆ ಕತ್ತೆಯು ತನ್ನನ್ನು ಯಾವ ಪ್ರಯೋಜನಕ್ಕೆ ಬಾರದೆಂದು ತಿಳಿದು ಸಾಯಲು ಹೊರಟಿತು. ಇದೇ ಸಮಯಕ್ಕೆ ಆ ಊರಿಗೆ ಒಬ್ಬ ಶಿಲ್ಪಿ ಬಂದ. ಅವನು ಆ ಊರಿನಲ್ಲಿ ಒಂದು ದೇವಾಸ್ಥಾನ ಸ್ಥಾಪಿಸುವ ಉದ್ದೇಶದಿಂದ ಬಂದಿದ್ದನು. ದೇವಾಲಯದ ನಿರ್ಮಾಣದ ನಂತರ ಒಂದು ವಿಗ್ರಹದ ಸ್ಥಾಪನೆಗಾಗಿ ಒಂದು ಕಲ್ಲಿನ ಅವಶ್ಯಕತೆ ಇತ್ತು. ಇದಕ್ಕಾಗಿ ಒಂದು ಕಲ್ಲನ್ನು ಹುಡುಕಿದರು. ಅದನ್ನು ಅಲ್ಲಿಂದ ಹೊರತೆಗೆಯಲು ಎಲ್ಲ ಜನರು ಯತ್ನಿಸಿದರು. ಆದರೆ ಆಗಲಿಲ್ಲ. ಅಲ್ಲಿಯ ಆ ಕತ್ತೆ ನಾನು ಒಮ್ಮೆ ಯತ್ನಿಸುವೆ ಎಂದು ಕೇಳಿತು. ಆ ಕತ್ತೆಗೆ ಎಲ್ಲಾ ಒಪ್ಪಿಗೆ ನೀಡಿದರು. ಇದರ ಫಲವಾಗಿ ಕತ್ತೆಯು ಪ್ರಯತ್ನದಿಂದ ಕಲ್ಲನ್ನು ಹೊರತೆಗೆಯಿತು. ಇದರಿಂದ ನಾವು ತಿಳಿಯುವುದು ಏನೆಂದರೆ ನಮ್ಮ ಆತ್ಮ ವಿಶ್ವಾಸ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು. ನಮ್ಮ ಮೇಲೆ ನಮಗೆ ಆತ್ಮ ವಿಶ್ವಾಸ ಇರಬೇಕು.
ಸಂಗ್ರಹ:- ಶಿಯಾಜ್ 10ನೇ ‘ಎ’
ಹೆಸರಿನಲ್ಲಿ ಏನಿದೆ?
ಮಹಾತ್ಮರಿಗೊಬ್ಬ ಶಿಷ್ಯನಿದ್ದ. ಅವನ ಹೆಸರು ದುಷ್ಟ ಅಂತ. ಆ ಶಿಷ್ಯನಿಗೆ ತನ್ನ ಹೆಸರಿನ ಬಗ್ಗೆ ಅತೀವವಾದ ನೋವಿತ್ತು. ಕೆಟ್ಟ ಕೆಲಸ ಮಾಡದಿದ್ದರೂ ಲೋಕದ ದೃಷ್ಟಿಯಲ್ಲಿ ದುಷ್ಟನಾದೆನಲ್ಲ ಎಂಬ ಕೊರತೆ ಅವನನ್ನು ಕಾಡುತ್ತಿತ್ತು ಒಂದು ದಿನ ಆತ ಗುರುಗಳ ಬಳಿ ಹೋದ. ತನ್ನ ಸಂಕಟವನ್ನು ತೋಡಿಕೊಂಡು. ಗುರುಗಳು ನಕ್ಕು ನುಡಿದರು. “ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ ಯಾರ ಹೆಸರು ಹೇಗಿದೆ ಎಂಬುದನ್ನು ತಿಳಿದು ಕೊಂಡು ಬಾ” ಎಂದರು.
ಆ ಶಿಷ್ಯನೊಬ್ಬ ಕುತೂಹಲದಿಂದ ನಿಮ್ಮ ಹೆಸರೇನು ಎಂದು ಪ್ರಶ್ನಿಸುತ್ತಾನೆ. ಆ ಯುವಕ ತನ್ನ ಹೆಸರು ಆನಮದ ಎನ್ನುತ್ತಾನೆ. ಅದೇ ದಿನ ಗುರುಗಳು ಶಿಷ್ಯನ ಕಣ್ಮುಂದೆಯೇ ರಾಜಾಜ್ಞೆಯಂತೆ ಒಬ್ಬನನ್ನು ಮರವೊಂದಕ್ಕೆ ನೇಣು ಹಾಕುತ್ತಾರೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಹೆಸರು ಚಿರಂಜೀವಿ ಎಂತಾಗಿರುತ್ತಾರೆ.
ದೃತಿಗೆಟ್ಟ ಶಿಷ್ಯ ಗುರುಗಳ ಬಳಿ ಹಿಂದಿರುಗುತ್ತಾನೆ. “ಏನಯ್ಯಾ ಶಿಷ್ಯ ದಾರಿಯಲ್ಲಿ ಯಾವ್ಯಾವ ಹೆಸರಿನವರನ್ನು ಸಂದಿಸಿದೆ? ಯಾರಾ ಹೆಸರನ್ನು ಇಟ್ಟು ಕೊಳ್ಳಲು ಬಯಸುತ್ತೀಯಾ” ಎಂದು ಗುರುಗಳು ಪ್ರಶ್ನೆ ಮಾಡುತ್ತಾರೆ.
“ಇಲ್ಲಾ ಗುರುಗಳೇ ನಾನೀಗ ಮನಸ್ಸು ಬದಲಿಸಿಕೊಂಡಿದ್ದೇನೆ. ಕೇವಲ ಹೆಸರನ್ನು ಇಟ್ಟುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ.”
ನೀತಿ :- ಹೆಸರಿನಿಂದ ಯಾರನ್ನು ಅಳೆಯಲೂ ಸಾಧ್ಯವಿಲ್ಲ.
ಕಾನೂನು ಪಾಲನೆಗೆ ಮೆಚ್ಚುಗೆ
“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆ ಮಾತಿಗೆ ಉತ್ತಮ ನಿರ್ದೇಶನವಾಗಿದ್ದವರೆಂದರೆ; ನಮ್ಮ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ಅವರು ಜವಾಹರ್‍ಲಾಲ್ ನೆಹರೂ ಅವರ ಬಳಿಕ ಭಾರತದ ಪ್ರಧಾನ ಮಂತ್ರಿಯಂಥ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಸರಳ ಜೀವನ, ಉತ್ಕøಸ್ಟ ಚಿಂತನ ಎಂಬ ಆದರ್ಶಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದರು.
ಅವರು ಉತ್ತರ ಪ್ರದೇಶ ರಾಜ್ಯದಲ್ಲಿ ಗೃಹ ಮಂತ್ರಿಗಳಾಗಿದ್ದಾಗ ನಡೆದ ಒಂದು ಘಟನೆ ಹೀಗಿದೆ.
ಲಖನೋ ನಗರದಿಂದ ಆಗ್ರಾಕ್ಕೆ ಹೊರಟಿದ್ದರು. ಆಗಾ ರೈಲ್ವೆ ಸ್ಟೇಶನ್ನಿನಲ್ಲಿ ಗೃಹ ಮಂತ್ರಿಗಳನ್ನು ಸ್ವಾಗತಿಸಲು ಅಧಿಕಾರಿಗಳೂ ಅವರ ಪಕ್ಷದ ನಾಯಕರೂ ಕಾದಿದ್ದರು. ಅದಕ್ಕಾಗಿ ಆ ಜನರು ಪ್ರಥಮ ದರ್ಜೆಯ ಗೇಟಿನ ಬಳಿ ಕಾದಿದ್ದಾಗ, ವೈಭವ ಆಡಂಬರಗಳನ್ನು ಇಷ್ಟ ಪಡದ ಶಾಸ್ತ್ರಿಯವರು ತೃತೀಯ ದರ್ಜೆ ಗೇಟಿನ ಮೂಲಕ ಹೋಗ ಬಯಸಿದರು.
ಅಲ್ಲಿದ್ದ ಪೋಲಿಸನೊಬ್ಬ ತಡೆಗಟ್ಟಿದ. ಅವನು ಶಾಸ್ತ್ರಿಯವರನ್ನು ನೋಡಲೇ ಇರಲಿಲ್ಲ. “ಎಲ್ಲಿಗೆ ಹೋಗ್ತಿದ್ದೀಯಾ? ನಮ್ಮ ರಾಜ್ಯದ ಗೃಹಮಂತ್ರಿಗಳು ಬರಲಿದ್ದಾರೆ. ನಿಮ್ಮಂತಹ ಸಾಮನ್ಯ ಜನರು ಈ ಪರಿಸರದಲ್ಲಿ ಓಡಾಡುವಂತಿಲ್ಲ.” ಎಂದು ಶಾಸ್ತ್ರಿಯವರನ್ನು ಗದರಿಸಿದ. ಆಗ ಇನ್ನೊಬ್ಬ ಪೋಲಿಸ್ ಅಧಿಕಾರಿ ಕಣ್ ಸನ್ನೆಯಿಂದ “ಇವರೇ ಗ್ರಹ ಮಂತ್ರಿಗಳು” ಎಂದು ಸೂಚಿಸಿದಾಗ, ಆತ ಶಾಸ್ತ್ರಿಯವರ ಬಳಿಗೆ ಹೋಗಿ “ತಪ್ಪಾಯಿತು ಸರ್, ನನಗೆ ನೀವೇ ಗ್ರಹ ಮಂತ್ರಿಗಳೆಂದು ಗೊತ್ತಿಲ್ಲದೆ ತಡೆಗಟ್ಟಿದೆ. ನನ್ನನ್ನು ಕ್ಷಮಿಸಿ” ಎಂದು ಬೇಡಿಕೊಂಡ. ಶಾಸ್ತ್ರಿಯವರು ಆತನನ್ನು ಕ್ಷಮಿಸಿದ್ದು ಮಾತ್ರವಲ್ಲದೇ, ನಿರ್ದಾಕ್ಷಿಣ್ಯವಾಗಿ ಕಾನೂನು ಪಾಲನೆ ಮಾಡಿದ ಬಗ್ಗೆ ವಿಶೇಷ ಬಹುಮಾನ ನೀಡುವಂತೆ ಶಿಫಾರಸ್ಸು ಮಾಡಿದ್ದರು.
ಸಾಮಾಜಿಕ ಜೀವನದಲ್ಲಿ ದೈನಂದಿನ ವ್ಯವಹಾರದಲ್ಲಿ ನಿಯಮ – ಕಾನೂನುಗಳನ್ನು, ರೀತಿ – ರಿವಾಜುಗಳೆಲ್ಲವೂ ಪಾಲನರಗಾಗಿರುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಆದ್ದರಿಂದಲೇ ನ್ಯಾಯ ಪಾಲನೆಯ ತಕ್ಕಡಿಯನ್ನು ಹಿಡಿದಿರುವ ನ್ಯಾಯ ದೇವತೆಯ ಕಣ್ಣುಗಳ ಮೇಲೊಂದು ಬಟ್ಟೆಯನ್ನು ಕಟ್ಟಿರುತ್ತಾರೆ. ಇದರಿಂದಾಗಿ “ಇವರು ನಮ್ಮವರು ಅವರು ಪರಕೀಯರು” ಎಂಬ ಭೇದ ಭಾವಿಲ್ಲದೆ ಸರ್ವರಿಗೂ ಸಮಾನ ರೀತಿಯಲ್ಲಿ ಯೋಗ್ಯ ವಿಧಾನದಲ್ಲಿ ನ್ಯಾಯ ವಿತರಣೆ ಮಾಡಲು ಸಾಧ್ಯ ಆಗುತ್ತದೆ.
ಇಂಥ ನ್ಯಾಯ ಪಕ್ಷಪಾತಿಗಳು ಯಾವಾಗಲೂ ಕಾನೂನು ಪಾಲನೆಗೆ ವಿಶೇಷ ಮಹತ್ವ ನೀಡುತ್ತಾರೆ. ತಮ್ಮ ವೈಯಕ್ತಿಕ ಲಾಭ ಮತ್ತು ವ್ಯಕ್ತಿ ಗೌರವಕ್ಕಿಂತಲೂ ಸಾಮಾಜಿಕ ಹಿತಕ್ಕೆ ಆದ್ಯತೆಯನ್ನು ನೀಡುತ್ತಾರೆ. ಅಂಥ ಕಾನೂ ಪಾಲಕರನ್ನು ಮೆಚ್ಚಿಕೊಳ್ಳುತ್ತಾರೆ ಹಾಗೂ ಕಾನೂನು ಭಂಜಕರಿಂದ ದೂರ ಇರಲು ಬಯಸುತ್ತಾರೆ.
ಇಂತಹ ಉತ್ಕøಷ್ಟ ಗುಣ ಸ್ವಭಾವವುಳ್ಳವರು ನಾಡಿನ ಜನತೆಯ ಪಾಲಿಗೆ ಶ್ರೇಷ್ಟ ಮಾರ್ಗದರ್ಶಕರೆನಿಸುತ್ತಾರೆ. ಇಂಥವರನ್ನು ಅನುಸರಿಸುವುದರಿಂದ ನಮ್ಮ ದೇಶದ ಜನರು ಉತ್ತಮ ನಾಗರಿಕರಾಗಿ ರೂಪುಗೊಳ್ಳುವುದು ಖಂಡಿತ.
ನಮ್ಮ ದೇಶದಲ್ಲಿ ಇಂಥ ನಾಗರಿಕರ ಸಂಖ್ಯೆ ಹೆಚ್ಚಲೆಂದೇ ನಮ್ಮೆಲ್ಲರ ಹಂಬಲವಾಗಿದೆ.
ಸಂಗ್ರಹ:- ಸುಶ್ಮಿತಾ 8ನೇ ‘ಬಿ’ ತರಗತಿ
ಕಾಯಕದಲ್ಲಿ ನಿರತವಾಗೂ
ಒಬ್ಬನು ಮಹರ್ಷಿಯೊಬ್ಬರ ಬಳಿಗೆ ಹೋಗಿ ನಮಸ್ಕರಿಸಿ “ಸ್ವಾಮಿ, ನಾನು ಅತ್ಯಂತ ಬಡವ. ದೇವರು ನನ್ನಲ್ಲಿ ಕರುಣೆಯೇ ತೋರಿಸಲಿಲ್ಲ. ಬೇರೆಯವರಿಗೆಲ್ಲಾ ಸಂಪತ್ತನ್ನು ಮತ್ತೆ ಮತ್ತೆ ಕೊಡುತ್ತದ್ದಾನೆ. ನನಗೆ ಮಾತ್ರ ಏನೂ ಕೊಡಲಿಲ್ಲ. ನನಗೆ ಐಶ್ವರ್ಯ ದೊರೆಯುವಂತೆ ಆಶೀರ್ವಾದ ಮಾಡಬೇಕು” ಎಂದನು. ಅದನ್ನು ಕೇಳಿದ ಮಹರ್ಷಿ, “ನಿನ್ನಲ್ಲಿರುವುದನ್ನು ಮಾರಿ ಹಣ ಮಾಡಿಕೊ! ನಿನಗೆ ಸಾಕಷ್ಟು ಹಣ ದೊರೆಯುತ್ತದೆ” ಎಂದರು. ಅದಕ್ಕೆ ಅವನು, “ನನ್ನ ಮಾರಿ ಹಣ ಪಡೆಯಲು ಏನೂ ಇಲ್ಲವಲ್ಲ” ಎಂದನು. ಅದಕ್ಕೆ ಆ ಮಹರ್ಷಿ ಹೇಳಿದರು, “ನಿನ್ನ ಒಂದು ಕಣ್ಣು ಮಾರಿ ಬಿಡು. ಅದರಿಂದ ನಿನಗೆ ಹತ್ತು ಸಾವಿರ ರುಪಾಯಿ ಬರುವಂತೆ ಮಾಡಿತ್ತೇನೆ.” ಎಂದನು. ಅದಕ್ಕೆ ಅವನು ಸಿದ್ಧನಾಗಲಿಲ್ಲ. ಅನಂತರ ಅವನ ಕೈ, ಕಾಲು, ಮೂಗು, ನಾಲಗೆ ಎಂದು ಒಂದೊಂದಾಗಿ ಹೇಳಿ ಅವುಗಳನ್ನು ಮಾರುವಂತೆ ಹೇಳುತ್ತಲೇ ಬಂದರು.
ಆ ಒಂದೊಂದು ಅಂಗಕ್ಕೆ ಹತ್ತು ಸಾವಿರ ಕೊಡುವುದಾಗಿ ಅವರು ಹೇಳಿದರು. ಅವನು ಮಾತ್ರ ಯಾವ ಅಂಗವನ್ನು ಕಳೆದುಕೊಳ್ಳಲು ಸಿದ್ಧನಾಗಲಿಲ್ಲ! ಆಗ ಮಹರ್ಷಿಗಳು ಹೇಳಿದರು, “ನಾನೇ ನಿನ್ನ ಬಳಿ ಪ್ರತಿಯೊಂದು ಅಂಗಕ್ಕೂ ಹತ್ತು ಸಾವಿರ ರುಪಾಯಿ ಕೊಡುವುದಾಗಿ ಹೇಳಿದ್ದೇನೆ. ಹತ್ತು ಸಾವಿರ ರುಪಾಯಿ ಬೆಲೆಯ ಹತ್ತು ವಸ್ತುಗಳನ್ನು ಕೇಳಿದ್ದೇನೆ. ಹೀಗಾಗಿ ನಿನ್ನ ಬಳಿ ಒಂದು ಲಕ್ಷ ರುಪಾಯಿ ಬೆಲೆಯ ವಸ್ತುಗಳಿಲ್ಲವೇ? ಹೀಗಿರುವಾಗ ನೀನು ಅದೇಕೆ ಬಡವ ಎಂದು ಕೆರದಯಕೊಳ್ಳತ್ತೀಯ? ಅಮೂಲ್ಯವಾದ ಸಂಪತ್ತುಳ್ಳ ಈ ದೇಹವನ್ನು ದೇವರು ನಿನಗೆ ದಯಪಾಲಿಸಿದ್ದಾನಲ್ಲವೇ? ಅದನ್ನು ಕಾಯಕದಲ್ಲಿ ತೊಡಗಿಸು! ಕಷ್ಟಪಟ್ಟು ಸಂಪಾದಿಸಿ ತೃಪ್ತಿಯಿಂದ ಇರು! ದೇಹವೆಂಬ ಈ ನವರತ್ನಕೋಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವವನು ಎಂದಿಗೂ ಬಡವನಾಗುವುದುಲ್ಲ!” ಎಂದರು.
ಸಂಗ್ರಹ:- ನಿರೀಕ್ಷಾ 8ನೇ ‘ಎ’
ಧರ್ಮಬುದ್ಧಿ - ಪಾಪಬುದ್ಧಿ
ಒಂದಾನೊಂದು ಊರಿನಲ್ಲಿ ಧರ್ಮಬುದ್ಧಿ ಮತ್ತು ಪಾಪಬುದ್ಧಿ ಎಂಬ ಗೆಳೆಯರಿದ್ದರು. ಪಾಪಬುದ್ಧಿಗೆ ವ್ಯಾಪಾರಕ್ಕಾಗಿ ಪ್ರಯಾಣ ಮಾಡುವ ಯೋಚನೆ ಬಂತು. “ನಾನು ಬಡವನಾಗಿದ್ದೇನೆ, ಪ್ರಪಂಚದ ರೀತಿ ನಿಯಮಗಳು ನನಗೆ ತಿಳಿದಿಲ್ಲ. ನನ್ನೊಡನೆ ದೂರದ ಊರುಗಳಿಗೆ ವ್ಯಾಪಾರಕ್ಕಾಗಿ ಪ್ರಯಾಣ ಮಾಡಲು ಧರ್ಮಬುದ್ಧಿಯನ್ನು ಒಪ್ಪಿಸಿದರೆ ಅವನ ಚಾತುರ್ಯ ಮತ್ತು ವ್ಯವಹಾರ ಕುಶಲತೆಯಿಂದ ನಾನು ಕೂಡ ಧನಾರ್ಜನೆ ಮಾಡಬಹುದು. ಅ ಬಳಿಕ ಹೇಗಾದರೂ ಅವನ ಸೊತ್ತನ್ನು ಲಪಟಾಯಿಸಿ ನಾನು ಶ್ರೀಮಂತನಾಗುತ್ತೇನೆ’’ ಎಂದು ಅವನು ಯೋಚಿಸಿದ. ಹೀಗೆ ಯೋಚಿಸುತ್ತ ಅವನು ಧರ್ಮಬುದ್ಧಿಯ ಬಳಿಗೆ ಹೋದ. “ಧರ್ಮಬುದ್ಧಿ, ನಮಗೆ ವಯಸ್ಸಾಗುತ್ತ ಬಂತು. ನಾವು ಈಗಲೇ ಪ್ರಪಂಚ ಸುತ್ತಿ ಬಾರದಿದ್ದರೆ ನಾಳೆ ನಮ್ಮ ಮಕ್ಕಳಿಗೆ ಜಗತ್ತಿನ ಅದ್ಭುತಗಳ ಬಗ್ಗೆ ಹೇಗೆ ಹೇಳಬಲ್ಲೆವು? ದೇಶಾಟನೆ ಮಾಡದಿದದ್ದವನು, ಬೇರೆಬೇರೆ ಭಾಷೆಗಳನ್ನು ಕಲಿತು, ಬೇರೆ ದೇಶಗಳ ರೀತಿ ನೀತಿಗಳನ್ನು ತಿಳಿದುಕೊಳ್ಳದವನು ಬದುಕಿದ್ದು ವ್ಯರ್ಥ ಎಂದು ಹಿರಿಯರು ಹೇಳುತ್ತಾರೆ. ದೇಶಾಟನೆ ಮಾಡಿದರೆ ಹಣ ಸಂಪಾದನೆಯ ಜೊತೆಗೆ ಜ್ಞಾನವನ್ನೂ ಬೆಳೆಸಲು ಸಾಧ್ಯವಿದೆ. ಅದಕ್ಕಾಗಿ ನಾವಿಬ್ಬರೂ ಬೇರೆ ಊರುಗಳನ್ನು ಸುತ್ತಾಡಿ, ವ್ಯಾಪಾರ ಮಾಡಿ ಬರೋಣ ಮಾಡಿ ಬರೋಣ” ಎಂದು ಹೇಳಿದ. ಧರ್ಮ ಬುದ್ಧಿಗೆ ಅವನ ಸಲಹೆ ಹಿಡಿಸಿತು. ಗುರು ಹಿರಿಯರ ಆಶೀರ್ವಾದ ಪಡೆದು, ಪಾಪ ಬುದ್ಧಿಯೊಡನೆ ದೇಶಟನೆಗೆ ಹೊರಟ. ಇಬ್ಬರೂ ದೇಶ ಸುತ್ತಿ, ವ್ಯಾಪಾರ ಮಾಡಿ ಸಾಕಷ್ಟು ಧನ ಸಂಪಾದನೆ ಮಾಡಿದರು. ಒಂದು ವರ್ಷದ ಬಳಿಕ ಅವರು ತಮ್ಮ ಊರಿಗೆ ಮರಳಿದರು. ಊರು ಪ್ರವೇಶಿಸುವಾಗ ಪಾಪ ಬುದ್ಧಿ ಗೆಳೆಯನನ್ನು ತಡೆದು “ನಾವು ಇಷ್ಟೆಲ್ಲ ಹಣ ಹಿಡಿದುಕೊಂಡು ಊರಿಗೆ ಹೋಗುವುದು ಸರಿಯಲ್ಲ. ನಮ್ಮಲ್ಲಿ ಹಣ ಇದೆ ಎಂದು ತಿಳಿದು ಬಂಧು ಮಿತ್ರರು ಸಹಾಯ ಯೋಚಿಸಲು ಬರುತ್ತಾರೆ. ಹಣ ನೋಡಿದರೆ ಸಂತರೂ ಬಾಯಿ ಬಿಡುತ್ತಾರೆ. ನಾವು ನಮ್ಮ ಸಂಪತನ್ನ ಒಂದು ಗುಪ್ತಸ್ಥಾನದಲ್ಲಿ ಬಚ್ಚಿಟ್ಟು ಹೋಗೋಣ. ನಮಗೆ ಅಗತ್ಯ ಬಿದ್ದಾಗ ಇದನ್ನು ತೆಗೆದುಕೊಂಡು ಹೋಗಬಹುದು” ಎಂದ. ಧರ್ಮಬುದ್ಧಿ ಅದಕ್ಕೆ ಒಪ್ಪಿದ. ಇಬ್ಬರೂ ಕಾಡಿನ ಒಂದು ಮರದ ಕೆಳಗೆ ನೆಲ ಅಗೆದು, ತಮ್ಮ ಹಣವನ್ನೆಲ್ಲ ಅದರಲ್ಲಿ ಬಚ್ಚಿಟ್ಟು ಖಾಲಿ ಕೈಯಲ್ಲಿ ಊರಿಗೆ ಹೋದರು ಪಾಪಬುದ್ಧಿ ಆ ರಾತ್ರಿ ಒಬ್ಬನೇ ಆ ಜಾಗಕ್ಕೆ ಹೋದ. ಗುಂಡಿ ಅಗೆದು ಹನವನ್ನೆಲ್ಲ ಕದ್ದು ಮನೆಗೆ ಒಯ್ದ.
ಸಂಗ್ರಹ: ಅನ್ವಿತಾ ಶೆಟ್ಟಿ 9ನೇ ‘ಬಿ’
ತಂದೆಗೆ ತಕ್ಕ ಮಗ
ಸಾಮಾನ್ಯವಾಗಿ ಮಕ್ಕಳು ಸಣ್ಣದಿರುವಾಗ ತಂದೆ-ತಾಯಿಯರು ಮಕ್ಕಳಿಗೆ ಗದರುವುದು ಸಹಜ. ಅದು ಯಾವಾಗಲು ಮಕ್ಕಳಿಗೆ ಒಳಿತಾಗಿರುತ್ತದೆ. ಅಂತಹುದೇ ಒಂದು ತಂದೆ ಮತ್ತು ಮಗನ ಕಥೆ.
ಒಂದು ಹಳ್ಳಿಯಲ್ಲಿ ಒಬ್ಬ ತಂದೆಯು ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದನು. ತಂದೆಯು ಬಹಳ ಶ್ರಮಜೀವಿ . ತನ್ನಂv ಮಗನು ಶ್ರಮಜೀವಿಯಾಗಿರಬೇಕು ಎಂದು ಬಯಸಿದ್ದನು. ಅವನು ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದನು. ಸಮಯ ಪರಿಪಾಲನೆ, ಶಿಸ್ತು, ಜಾಗೃತೆ, ನಯ, ವಿನಯ, ದುಂದು ವೆಚ್ಚ ಮಾಡದಿರುವುದು ಇವುಗಳನೆಲ್ಲವನ್ನೂ ಮಗನಿಗೆ ತಿಳಿ ಹೇಳುತ್ತಿದ್ದನು. ಯಾವಾಗಲೂ ಅದರ ಬಗ್ಗೆ ತಂದೆ ಹೇಳುವಾಗ ಮಗನಿಗೆ ಕಿರಿಕಿರಿಯಾಗುತ್ತಿತ್ತು. ಮನೆ ಬಿಟ್ಟು ಓಡಿ ಹೋಗಬೇಕೆಂದು ಎನಿಸುತ್ತಿದ್ದನು. ಆದರೂ ಸಹಿಸಿಕೊಂಡಿದ್ದನು. ತಂದೆಯ ಕನಸಿನಂತೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದನು. ನಂತರ ಅವನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸ ಹುಡುಕ ತೊಡಗಿದನು. ಸರಿಯಾದ ಕೆಲಸ ಸಿಗದೆ ನಿರಾಶನಾದನು. ಹೀಗೆಯೇ ಸಮಯಗಳು ಉರುಳಿದವು. ಕೊನೆಗೆ ಒಂದು ದಿನ ಪತ್ರಿಕೆಯಲ್ಲಿ ಕೆಲಸ ಖಾಲಿಯಿದೆ ಎಂಬ ಜಾಹಿರಾತನ್ನು ನೋಡಿ ಪಟ್ಟಣಕ್ಕೆ ಹೊರಟನು. ಅದೊಂದು ದೊಡ್ಡ ಕಂಪೆನಿಯಾಗಿತ್ತು. ಆ ಕಂಪೆನಿ ಎದುರು ಒಂದು ದೊಡ್ಡದಾದ ಗೇಟಿತ್ತು. ಅದು ತೆರೆದಿತ್ತು. ಇವನು ಒಳಗೆ ಬಂದು ಗೇಟನ್ನು ಮುಚ್ಚಿದನು. ಹಾಗೆಯೇ ಮುಂದೆ ಬರುವಾಗ ಅಲ್ಲೊಂದು ಹೂ ತೋಟವಿತ್ತು. ಹೂ ತೋಟಕ್ಕೆ ಬಿಡುವ ಪೈಪಿನಲ್ಲಿ ನೀರು ಪೋಲಾಗುತ್ತಿದ್ದನ್ನು ನೋಡಿ ನೀರಿನ ನಳ್ಳಿಯನ್ನು ಬಂದ್ ಮಾಡಿದನು. ನಂತರ ಕಂಪೆನಿ ಒಳಗೆ ಬಂದನು ಅಲ್ಲಿ ವಿಶಾಲವಾದ ಕೊಟಡಿಯಿತ್ತು. ಜನರಿಲ್ಲದಿದ್ದರೂ ಫ್ಯಾನ್‍ಗಳು ತಿರುಗುತ್ತಿದ್ದವು. ಅಲ್ಲಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನು ಗಮನಿಸಿದ ಇವನು ಫ್ಯಾನ್ಗಳನ್ನು ಬಂದ್ ಮಾಡಿ ಕುರ್ಚಿಗಳನ್ನು ಜೋಡಿಸಿಟ್ಟನು. ಇಷ್ಟೆಲ್ಲಾ ಕೆಲಸವು ತಂದೆ ಸಣ್ಣದಿಂದ ಗದರಿಸಿ ಹೇಳಿಕೊಟ್ಟ ಪರಿಣಾಮವಾಗಿತ್ತು. ಒಬ್ಬ ಗುಮಸ್ತನು ಬಂದು ಇವನನ್ನು ಒಳಗೆ ಕರೆದನು. ಇವನು ಒಳನಡೆದನು. ಅಲ್ಲಿ ಎರಡು ಮೂರು ಜನ ದೊಡ್ಡ ವ್ಯಕ್ತಿಗಳು ಸಾಲಾಗಿ ಕೂತಿದ್ದರು. ಅವರು ನಿನ್ನ ಹೆಸರೇನೆಂದು ಕೇಳಿದಾಗ ಇವನು ಹೆಸರಿನ ಜೊತೆಗೆ ತನ್ನ ವಿದ್ಯಾರ್ಹತೆಯನ್ನು ತಿಳಿಸಿದನು. ಅವರು ಇವನ ಕುಲುಕುತ್ತಾ “ಯು ಆರ್ ಸೆಲೆಕ್ಟೆಡ್” ಎಂದರು. ಇವನಿಗೆ ಆಶ್ಚರ್ಯವಾಯಿತು. ಇವನು ಆಶ್ಚರ್ಯದಿಂದ “ಹ್ಞಾಂ ನೀವು ನನ್ನನ್ನು ಪರೀಕ್ಷಿಸದೆ ಹೇಗೆ ಸೆಲೆಕ್ಟ್ ಮಾಡಿದಿರಿ’’? ಎಂದನು. ಅದಕ್ಕೆ ಅವರು “ನಾವು ನಿನ್ನನ್ನು ಗೇಟಿನ ಮೂಲಕ ಒಳಗೆ ಬರುವಾಗಿನಿಂದ ನಿನ್ನನ್ನು ಸಿ.ಸಿ. ಟಿವಿಯಲ್ಲಿ ಗಮನಿಸುತ್ತದ್ದೇವೆ. ನಿನ್ನಂತವನು ನಮ್ಮ ಆಫೀಸಿನಲ್ಲಿ ಇದ್ದರೆ ನಮ್ಮ ಕಂಪೆನಿ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ. ನಾಳೆಯಿಂದಲೇ ಕೆಲಸಕ್ಕೆ ಬಾ” ಎಂದರು.
ಅವನು ಅಲ್ಲಿಂದ ಹೊರಬಂದಾಗ ಅವನ ಕಣ್ಣುಗಳು ತುಂಬಿ ಬಂದಿದ್ದವು. ನನ್ನ ಈ ನಡತೆಗೆ ನನ್ನ ಅಪ್ಪನೇ ಕಾರಣ. ಅವರು ನನಗೆ ಸಣ್ಣದಿನಿಂದ ಗದರಿಸಿ ಹೇಳಿಕೊಟ್ಟ ಮಾತುಗಳು ನನ್ನ ಜೀವನವನ್ನೇ ಬದಲಾಯಿಸಿದವು ಎಂದುಕೊಂಡು ಮನೆಗೆ ಬಂದು ತಂದೆಯನ್ನು ಬಿಗಿದಪ್ಪಿ ಕೊಂಡನು.
ಈ ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ ತಂದೆ ತಾಯಿಯರನ್ನು ಗೌರವಿಸಬೇಕು. ಅವರು ಹೇಳಿಕೊಟ್ಟ ಮಾತಿನಂತೆ ನಾವು ನಡೆಯಬೇಕು.
ಸಂಗ್ರಹ:- ವರ್ಷಾ 8ನೇ ‘ಎ’
No comments:
Post a Comment