Thursday, November 29, 2018

ಕರಾಟೆಯಲ್ಲಿ ಮಿಂಚಿದ ಪೆರ್ವಾಜೆಯ ಪ್ರತಿಭೆಗಳು


     ಶಿವಮೊಗ್ಗ ರಾಜಾಂಗಣದಲ್ಲಿ ನಡೆದ 4ನೇ ರಾಜ್ಯ ಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧಾಕೂಟದಲ್ಲಿ ಕಾರ್ಕಳ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಶಿಸ್ತು ಬದ್ಧ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಮಾ| ಸಮೃಥ್ 8ನೇ ತರಗತಿ ಫೈಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಇವರು ಸುರೇಶ್ ಆರ್. ಪೂಜಾರಿ ಮತ್ತು ಮಾಲತಿರವರ ಸುಪುತ್ರ,  ಮಾ| ಆಕಾಶ್ 8ನೇ ತರಗತಿ ಕಟಾ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಫೈಟಿಂಗ್ ವಿಭಾಗದಲ್ಲಿ ಬೆಳ್ಳಿಯ ಪದಕ ಗಳಿಸಿರುತ್ತಾರೆ. ಇವರು ಪ್ರವೀಣ್ ಶೆಟ್ಟಿಗಾರ್ ಮತ್ತು ಧನಲಕ್ಷ್ಮೀರವರ ಸುಪುತ್ರ. ಇವರೀರ್ವರು ಶ್ರೀ ರಂಜಿತ್ ಎಸ್. ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

No comments:

Post a Comment