
Friday, January 25, 2019
ಪೆರ್ವಾಜೆಶಾಲೆಗೆ ಅತ್ಯುತ್ತಮ ಮತದಾರ ಸಾಕ್ಷರತಾ ಕ್ಲಬ್ ಪ್ರಶಸ್ತಿ

Thursday, January 24, 2019
ನೇತಾಜಿಯವರ ಜನ್ಮ ದಿನಾಚರಣೆ
Wednesday, January 23, 2019
ಪೆರ್ವಾಜೆ ಶಾಲೆಯ ತರಕಾರಿ ತೋಟ


ಬೇಳೆ/ಕಾಳನ್ನು ಬಳಕೆಯನ್ನು ಕಡ್ಡಾಯಗೊಳಿಸಿದೆ. ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸಲು ಪೆರ್ವಾಜೆ ಶಾಲೆಯಲ್ಲಿ ತರಕಾರಿ ತೋಟವನ್ನು ನಿರ್ವಹಿಸಲಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವೇದಾವತಿಯವರು ಮುಖ್ಯಶಿಕ್ಷಕರ ಮಾರ್ಗದರ್ಶನ ಮತ್ತು ಶಾಲೆಯ ಶಿಕ್ಷಕ ವೃಂದದ ಬೆಂಬಲ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮೂಲಕ ತರಕಾರಿ ತೋಟವನ್ನು ನಿರ್ವಹಿಸುತ್ತಿದ್ದಾರೆ.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
12-01-2019 ಶನಿವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಶ್ರೀ ನಂಜ ನಾಯ್ಕ-ಸಬ್‍ಇನ್ಸ್‍ಪೆಕ್ಟರ್ ಕಾರ್ಕಳ ನಗರ ಪೊಲೀಸ್ ಠಾಣೆ ಇವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸಾಧನೆ ಮತ್ತು ಆದರ್ಶ ಗುಣಗಳ ಕುರಿತು ತಿಳಿಸಿದರು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಹಿರಿಯ ಶಿಕ್ಷಕರಾದ ಶ್ರೀ ಕಾಳಿದಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವೇಕಾನಂದರ ಜೀವನ ಉದಾತ್ತ ವಿಚಾರಗಳ ಕುರಿತು ಮಾತನಾಡಿದರು. ಕಾರ್ಕಳ ನಗರ ಪೊಲೀಸ್ ಠಾಣೆ ವತಿಯಿಂದ ಉತ್ತಮವಾಗಿ ಮಾತನಾಡಿದ ಮಕ್ಕಳನ್ನು ಬಹುಮಾನಿಸಲಾಯಿತು. ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Thursday, January 17, 2019
ವಿಜ್ಞಾನ ರಂಗೋಲಿ
ಹತ್ತನೆಯ ತರಗತಿಯ
ವಿಜ್ಞಾನ ಪುಸ್ತಕದಲ್ಲಿರುವ ಪರೀಕ್ಷಾ ಪ್ರಾಮುಖ್ಯತೆಯನ್ನು ಹೊಂದಿರುವ ಚಿತ್ರಗಳನ್ನು ದಿನಕ್ಕೊಂದರಂತೆ
ರಂಗೋಲಿ ಹಾಕಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು
![]() |
ನೀರಿನ ವಿದ್ಯದ್ವಿಭಜನೆ |
![]() |
ಸಸ್ಯದ ಸಂತಾನೋತ್ಪಾದಕ ಭಾಗ |
![]() |
ವಿಸರ್ಜನಾಂಗ ವ್ಯೂಹ |
![]() |
ಪತ್ರರಂದ್ರ |
![]() |
ಹೃದಯ |
ಜೀರ್ಣಾಂಗವ್ಯೂಹ |
ಪರಾಗದ ಮೊಳಕೆ |
![]() |
ಸಸ್ಯದ ಸಂತಾನೋತ್ಪಾದಕ ಭಾಗ |
![]() |
ಮೆದುಳು |
![]() |
ನ್ಯೂರಾನ್ |
![]() |
ಹೃದಯ |
Thursday, January 10, 2019
ಜಲಸಾಕ್ಷರತೆ ಕಾರ್ಯಗಾರ
![]() |
photo:ದ್ವಾರಕಾ ನಿರಂಜನ್ |
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಲತಾ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ ಇವರು ನೆರವೇರಿಸಿದರು. ಶ್ರೀಮತಿ ಜಾನಕಿ ಪಿ. ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಛೇರಿ ಮಂಗಳೂರು ಇವರು ಪರಿಸರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಡಾ| ಭರತೇಶ್-ಮಾಜಿ ಗವರ್ನರ್ ರೋಟರಿ ಜಿಲ್ಲೆ 3180 ಜಲಸಾಕ್ಷರತೆಯ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ| ನಾರಾಯಣ ಶೆಣೈ ಪ್ರಾಧ್ಯಾಪಕರು ಸಿವಿಲ್ ವಿಭಾಗ ಮತ್ತು ಡೀನ್ ಎಮ್.ಐ.ಟಿ ಮಣಿಪಾಲ ಇವರು ಭಗವಹಿಸಿ ಪ್ರಾತ್ಯಕ್ಷಿಕೆ ರಸಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳ ಹಸಿರು ಜ್ಞಾನವನ್ನು ಹೆಚ್ಚಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ| ನಾರಾಯಣ ಶೆಣೈ ಪ್ರಾಧ್ಯಾಪಕರು ಸಿವಿಲ್ ವಿಭಾಗ ಮತ್ತು ಡೀನ್ ಎಮ್.ಐ.ಟಿ ಮಣಿಪಾಲ ಇವರು ಭಗವಹಿಸಿ ಪ್ರಾತ್ಯಕ್ಷಿಕೆ ರಸಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳ ಹಸಿರು ಜ್ಞಾನವನ್ನು ಹೆಚ್ಚಿಸಿದರು. ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಇಕೋ ಕ್ಲಬ್‍ನ ಮಾರ್ಗದರ್ಶಕ ಶಿಕ್ಷಕರಾದ ಶ್ರೀ ಜೋನ್ ಗೋಲ್ಬರ್ಟ್ ಮಿನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ| ದಿನಕರ ಶೆಟ್ಟಿ ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಛೇರಿ ಉಡುಪಿ, ಸ್ವಾಗತಿಸಿದರು, ಕಾರ್ಯಕ್ರಮವನ್ನು ಕು| ಅನಘ ನಿರೂಪಿಸಿದರು, ಹಿರಿಯ ಶಿಕ್ಷಕರಾದ ಶ್ರೀ ಕಾಳಿದಾಸ್ ಇವರು ಸರ್ವರನ್ನೂ ವಂದಿಸಿದರು.
10-01-2019
ಗುರುವಾರ
Wednesday, January 9, 2019
10ನೇ ತರಗತಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರ
ಉದ್ಘಾಟನೆ |
Tuesday, January 1, 2019
ಪೆರ್ವಾಜೆ ಶಾಲಾ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ

ದಿನಾಂಕ:-08-12-2018 ಶನಿವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಶ್ರೀ ವಿ. ಸುನಿಲ್ ಕುಮಾರ್ ಮಾನ್ಯ ಶಾಸಕರು ಇವರಿಂದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆಗೊಂಡಿತು. ನಂತರ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವವು ನಡೆಯಿತು. ಸಭಾ ವೇದಿಕೆಯಲ್ಲಿ ಅಧ್ಯಕ್ಷರಾಗಿ ಶ್ರೀ ವಿ. ಸುನಿಲ್ ಕುಮಾರ್ ಮಾನ್ಯ ಶಾಸಕರು ಕಾರ್ಕಳ ವಿಧಾನ ಸಭಾ ಕ್ಷೇತ್ರ, ಶ್ರೀ ಉದಯ ಎಸ್. ಕೋಟ್ಯಾನ್-ಅಧ್ಯಕ್ಷರು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಜಿಲ್ಲಾ ಪಂಚಾಯತ್ ಉಡುಪಿ, ಶ್ರೀ ಪ್ರದೀಪ್ ರಾಣೆ-ಸ್ಥಳೀಯ ಪುರಸಭಾ ಸದಸ್ಯರು, ಶ್ರೀಮತಿ ಹೇಮಲತಾ ಕೆ.-ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ, ಶ್ರೀ ಪ್ರವೀಣ್ ಶೆಟ್ಟಿ-ಸಮನ್ವಯಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ, ಡಾ| ಮಂಜುನಾಥ ಕೋಟ್ಯಾನ್-ಮಾನ್ಯ ಪ್ರಾಂಶುಪಾಲರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಶ್ರೀಮತಿ ಲಕ್ಷ್ಮೀ ಹೆಗಡೆ- ಮುಖ್ಯೋಪಾಧ್ಯಾಯರು ಪ್ರಾಥಮಿಕ ಶಾಲಾ ವಿಭಾಗ, ಮಾ| ಸೂರಜ್-ಶಾಲಾ ನಾಯಕ, ಶ್ರೀ ಪ್ರಶಾಂತ್-ಅಧ್ಯಕ್ಷರು ಹಳೆವಿದ್ಯಾರ್ಥಿ ಸಂಘ, ಶ್ರೀಮತಿ ಆಲಿಸ್ ಲೋಬೋ-ಉಪಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀ ಸತೀಶ್ ಮಡಿವಾಳ ಸದಸ್ಯರು ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ಕಲ್ಪನಾ ಸದಸ್ಯರು ಶಾಲಾಭಿವೃದ್ಧಿ ಸಮಿತಿ,, ಉಪಸ್ಥಿತರಿದ್ದರು. ಕಲಿಕೆ, ಸಾಂಸ್ಕøತಿಕ, ಕ್ರೀಡಾ ವಿಭಾಗಗಳಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಬಹುಮಾನಿಸಲಾಯಿತು. ಶಾಲಾ ಮಾಸ ಪತ್ರಿಕೆಗಳಾದ ಗೋಮತಿ, ತಿಂಗಳಿಗೊಂದು-ತರಗತಿಗೊಂದು ಅನಾವರಣಗೊಂಡವು. ವಾರ್ಷಿಕ ಸಂಚಿಕೆಗಳಾದ ಜ್ಞಾನದೀವಿಗೆ, ಚಿತ್ರ-ಚಿಂತನ ಅನಾವರಣಗೊಂಡವು. ಶಾಲಾ ಬ್ಲಾಗ್ ಲೋಕಾರ್ಪಣೆಗೊಂಡಿತು. ಶ್ರೀಮತಿ ನಿರ್ಮಲಾ ಗಣಪತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ವಿಜಯರಾಜ್ ಶೆಟ್ಟಿ ಸರ್ವರನ್ನೂ ಸ್ವಾಗತಿಸಿದರು. ಶ್ರೀ ಜಟ್ಟೆಪ್ಪ ಸನದಿ ಸರ್ವರನ್ನೂ ವಂದಿಸಿದರು. ಅಪರಾಹ್ನ ಶಾಲಾ ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ರಾಷ್ಟ್ರ ಮಟ್ಟದ ಕರಾಟೆ ಕುವರಿ
ಪುಣೆಯ ಭಾರತಿ ವಿದ್ಯಾಭವನದಲ್ಲಿ ದಿನಾಂಕ:-25-12-2018 ಮತ್ತು 26-12-2018ರಂದು ಐಕೆಕೆಎಐ ಅವರು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿದ್ದು ಕಾರ್ಕಳ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ಕು| ನಿರೀಕ್ಷಾ ಅಮೀನ್ 9ನೇ ತರಗತಿ ವಿದ್ಯಾರ್ಥಿನಿ ಇವರು 17 ವರ್ಷದ ಒಳಗಿನ ವಯೋಮಿತಿಯ ಕರಾಟೆಯ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕಬುಡೊದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಇವಳು ಶ್ರೀ ಚಂದ್ರೇಶ ಕೆ. ಅಮೀನ್ ಮತ್ತು ಶ್ರೀಮತಿ ಪ್ರತಿಮಾ ಇವರ ಸುಪುತ್ರಿ. ಇವಳು ಶ್ರೀ ರಂಜಿತ್ ಎಸ್. ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Subscribe to:
Posts (Atom)