![]() |
photo:ದ್ವಾರಕಾ ನಿರಂಜನ್ |
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಲತಾ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ ಇವರು ನೆರವೇರಿಸಿದರು. ಶ್ರೀಮತಿ ಜಾನಕಿ ಪಿ. ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಛೇರಿ ಮಂಗಳೂರು ಇವರು ಪರಿಸರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಡಾ| ಭರತೇಶ್-ಮಾಜಿ ಗವರ್ನರ್ ರೋಟರಿ ಜಿಲ್ಲೆ 3180 ಜಲಸಾಕ್ಷರತೆಯ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ| ನಾರಾಯಣ ಶೆಣೈ ಪ್ರಾಧ್ಯಾಪಕರು ಸಿವಿಲ್ ವಿಭಾಗ ಮತ್ತು ಡೀನ್ ಎಮ್.ಐ.ಟಿ ಮಣಿಪಾಲ ಇವರು ಭಗವಹಿಸಿ ಪ್ರಾತ್ಯಕ್ಷಿಕೆ ರಸಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳ ಹಸಿರು ಜ್ಞಾನವನ್ನು ಹೆಚ್ಚಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ| ನಾರಾಯಣ ಶೆಣೈ ಪ್ರಾಧ್ಯಾಪಕರು ಸಿವಿಲ್ ವಿಭಾಗ ಮತ್ತು ಡೀನ್ ಎಮ್.ಐ.ಟಿ ಮಣಿಪಾಲ ಇವರು ಭಗವಹಿಸಿ ಪ್ರಾತ್ಯಕ್ಷಿಕೆ ರಸಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳ ಹಸಿರು ಜ್ಞಾನವನ್ನು ಹೆಚ್ಚಿಸಿದರು. ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಇಕೋ ಕ್ಲಬ್‍ನ ಮಾರ್ಗದರ್ಶಕ ಶಿಕ್ಷಕರಾದ ಶ್ರೀ ಜೋನ್ ಗೋಲ್ಬರ್ಟ್ ಮಿನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ| ದಿನಕರ ಶೆಟ್ಟಿ ಹಿರಿಯ ಭೂ ವಿಜ್ಞಾನಿ ಜಿಲ್ಲಾ ಅಂತರ್ಜಲ ಕಛೇರಿ ಉಡುಪಿ, ಸ್ವಾಗತಿಸಿದರು, ಕಾರ್ಯಕ್ರಮವನ್ನು ಕು| ಅನಘ ನಿರೂಪಿಸಿದರು, ಹಿರಿಯ ಶಿಕ್ಷಕರಾದ ಶ್ರೀ ಕಾಳಿದಾಸ್ ಇವರು ಸರ್ವರನ್ನೂ ವಂದಿಸಿದರು.
10-01-2019
ಗುರುವಾರ
No comments:
Post a Comment