

ದಿನಾಂಕ:-23-01-2019 ಬುಧವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನೇತಾಜಿ ಸುಭಾಸ್‍ಚಂದ್ರ ಭೋಸ್‍ರ 122ನೇ ಜನ್ಮ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಮುನಿರಾಜ ರೆಂಜಾಳ-ಮುಖ್ಯೋಪಾಧ್ಯಾಯರು ಜೈನ ಪ್ರೌಢಶಾಲೆ ಮೂಡಬಿದ್ರೆ, ಶ್ರೀ ಕೃಷ್ಣಕಾಂತ್-ಎ.ಎಸ್.ಪಿ. ಕಾರ್ಕಳ ನಗರ ಪೊಲೀಸ್ ಠಾಣೆ, ಶ್ರೀ ಸುರೇಶ್ ಮಡಿವಾಳ-ಸಂತೂರ್ ಡಿಸ್ಟ್ರಿಬ್ಯೂಟರ್, ಶ್ರೀ ಶೇಕ್ ಮುಸ್ತಾಫ, ಶ್ರೀ ಶಶಿಧರ ಹೆಚ್.-ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಎಸ್.ಡಿ.ಎಂ.ಸಿ., ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಹಿರಿಯ ಶಿಕ್ಷಕರಾದ ಶ್ರೀ ಕಾಳಿದಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಮತ್ತು ವಿದ್ಯಾರ್ಥಿಗಳು ನೇತಾಜಿಯವರ ಜೀವನ, ಸ್ವಾತಂತ್ರ್ಯ ಹೋರಾಟ, ಕ್ರಾಂತಿಕಾರಿ ಬದುಕು, ಉದಾತ್ತ ವಿಚಾರಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಓದಿದ ಪುಸ್ತಕಗಳ ಅನಿಸಿಕೆಗಳ ಸಂಗ್ರಹ ‘ಸಂಕಲ್ಪ’, ಶಾಲಾ ಮಾಸಿಕ ಪತ್ರಿಕೆ ‘ಗೋಮತಿ’ ಮತ್ತು 7 ತರಗತಿಗಳ ಮಾಸಿಕ ಪತ್ರಿಕೆಗಳನ್ನು ಅನಾವರಣಗೊಳಿಸಲಾಯಿತು. ಉತ್ತಮ ಅನಿಸಿಕೆ ಬರೆದ ವಿದ್ಯಾರ್ಥಿಗಳನ್ನು ಬಹುಮಾನಿಸಲಾಯಿತು. ಸಂತೂರ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರನ್ನು, ಆರೋಗ್ಯ ಇಲಾಖೆ ನಡೆಸಿದ್ದ ಪ್ರಬಂಧ ಸ್ಪರ್ಧೆ ವಿಜೇತರನ್ನು ಬಹುಮಾನಿಸಲಾಯಿತು. ಕು| ರಕ್ಷಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕು| ಸಂಧ್ಯಾ ಸರ್ವರನ್ನೂ ವಂದಿಸಿದರು. ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





No comments:
Post a Comment