Tuesday, January 1, 2019

ಪೆರ್ವಾಜೆ ಶಾಲಾ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ





 ದಿನಾಂಕ:-08-12-2018 ಶನಿವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಶ್ರೀ ವಿ. ಸುನಿಲ್ ಕುಮಾರ್ ಮಾನ್ಯ ಶಾಸಕರು ಇವರಿಂದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆಗೊಂಡಿತು. ನಂತರ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವವು ನಡೆಯಿತು. ಸಭಾ ವೇದಿಕೆಯಲ್ಲಿ ಅಧ್ಯಕ್ಷರಾಗಿ ಶ್ರೀ ವಿ. ಸುನಿಲ್ ಕುಮಾರ್ ಮಾನ್ಯ ಶಾಸಕರು ಕಾರ್ಕಳ ವಿಧಾನ ಸಭಾ ಕ್ಷೇತ್ರ,             ಶ್ರೀ ಉದಯ ಎಸ್. ಕೋಟ್ಯಾನ್-ಅಧ್ಯಕ್ಷರು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಜಿಲ್ಲಾ ಪಂಚಾಯತ್ ಉಡುಪಿ, ಶ್ರೀ ಪ್ರದೀಪ್ ರಾಣೆ-ಸ್ಥಳೀಯ ಪುರಸಭಾ ಸದಸ್ಯರು, ಶ್ರೀಮತಿ ಹೇಮಲತಾ ಕೆ.-ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ, ಶ್ರೀ ಪ್ರವೀಣ್ ಶೆಟ್ಟಿ-ಸಮನ್ವಯಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ,    ಡಾ| ಮಂಜುನಾಥ ಕೋಟ್ಯಾನ್-ಮಾನ್ಯ ಪ್ರಾಂಶುಪಾಲರು ಶ್ರೀ ಭುವನೇಂದ್ರ  ಕಾಲೇಜು ಕಾರ್ಕಳ,   ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಶ್ರೀಮತಿ ಲಕ್ಷ್ಮೀ ಹೆಗಡೆ- ಮುಖ್ಯೋಪಾಧ್ಯಾಯರು ಪ್ರಾಥಮಿಕ ಶಾಲಾ ವಿಭಾಗ, ಮಾ| ಸೂರಜ್-ಶಾಲಾ ನಾಯಕ, ಶ್ರೀ ಪ್ರಶಾಂತ್-ಅಧ್ಯಕ್ಷರು ಹಳೆವಿದ್ಯಾರ್ಥಿ ಸಂಘ, ಶ್ರೀಮತಿ ಆಲಿಸ್ ಲೋಬೋ-ಉಪಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀ ಸತೀಶ್ ಮಡಿವಾಳ ಸದಸ್ಯರು ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ಕಲ್ಪನಾ ಸದಸ್ಯರು ಶಾಲಾಭಿವೃದ್ಧಿ ಸಮಿತಿ,, ಉಪಸ್ಥಿತರಿದ್ದರು. ಕಲಿಕೆ, ಸಾಂಸ್ಕøತಿಕ, ಕ್ರೀಡಾ ವಿಭಾಗಗಳಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಬಹುಮಾನಿಸಲಾಯಿತು. ಶಾಲಾ ಮಾಸ ಪತ್ರಿಕೆಗಳಾದ ಗೋಮತಿ, ತಿಂಗಳಿಗೊಂದು-ತರಗತಿಗೊಂದು ಅನಾವರಣಗೊಂಡವು. ವಾರ್ಷಿಕ ಸಂಚಿಕೆಗಳಾದ ಜ್ಞಾನದೀವಿಗೆ, ಚಿತ್ರ-ಚಿಂತನ ಅನಾವರಣಗೊಂಡವು. ಶಾಲಾ ಬ್ಲಾಗ್ ಲೋಕಾರ್ಪಣೆಗೊಂಡಿತು. ಶ್ರೀಮತಿ ನಿರ್ಮಲಾ ಗಣಪತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.  ಶ್ರೀ ವಿಜಯರಾಜ್ ಶೆಟ್ಟಿ ಸರ್ವರನ್ನೂ ಸ್ವಾಗತಿಸಿದರು. ಶ್ರೀ ಜಟ್ಟೆಪ್ಪ ಸನದಿ ಸರ್ವರನ್ನೂ ವಂದಿಸಿದರು. ಅಪರಾಹ್ನ ಶಾಲಾ ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 

No comments:

Post a Comment