ಪೆರ್ವಾಜೆ ಶಾಲೆಯ ತರಕಾರಿ ತೋಟ
ಎಲ್ಲ ಸರಕಾರಿ ಶಾಲೆಗಳಲ್ಲೂ ಮದ್ಯಾಹ್ನದ ಉಚಿತ ಬಿಸಿಯೂಟ ಲಭ್ಯವಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.
ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.
ಬೇಳೆ/ಕಾಳನ್ನು ಬಳಕೆಯನ್ನು ಕಡ್ಡಾಯಗೊಳಿಸಿದೆ. ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸಲು ಪೆರ್ವಾಜೆ ಶಾಲೆಯಲ್ಲಿ ತರಕಾರಿ ತೋಟವನ್ನು ನಿರ್ವಹಿಸಲಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವೇದಾವತಿಯವರು ಮುಖ್ಯಶಿಕ್ಷಕರ ಮಾರ್ಗದರ್ಶನ ಮತ್ತು ಶಾಲೆಯ ಶಿಕ್ಷಕ ವೃಂದದ ಬೆಂಬಲ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮೂಲಕ ತರಕಾರಿ ತೋಟವನ್ನು ನಿರ್ವಹಿಸುತ್ತಿದ್ದಾರೆ.
No comments:
Post a Comment