Wednesday, January 9, 2019

10ನೇ ತರಗತಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರ


 ಉದ್ಘಾಟನೆ
07 ಜನವರಿ 2019, ಸೋಮವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಕಾರ್ಕಳ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ, ರೋಟರಿ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ 10ನೇ ತರಗತಿ ವಿದ್ಯಾರ್ಥಿಗಳ ಪ್ರೇರಣಾ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಿ. ಸುನಿಲ್ ಕುಮಾರ್ ಮಾನ್ಯ ಶಾಸಕರು ಕಾರ್ಕಳ ಇವರು ನೆರವೇರಿಸಿದರು. ಶ್ರೀಮತಿ ಹೇಮಲತಾ-ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ, ಶ್ರೀ ಪ್ರಕಾಶ್ ರಾವ್ ಇನ್ನಾ-ಅಧ್ಯಕ್ಷರು ಕಾರ್ಕಳ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಶ್ರೀ ಶೈಲೇಂದ್ರ ರಾವ್-ಅಧ್ಯಕ್ಷರು ರೋಟರಿ ಕ್ಲಬ್ ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಶ್ರೀ ಪ್ರವೀಣ್ ಗುಡಿ-ಸಂಪನ್ಮೂಲ ವ್ಯಕ್ತಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ರಾಜೇಂದ್ರ ಭಟ್ ನಿರೂಪಿಸಿದರು.

No comments:

Post a Comment