
ಎಲ್ಲಿಂದಲೋ ಬಂದ ಶಿಕ್ಷಕರು, ಎಲ್ಲಿಂದಲೋ ಬರುತ್ತಿರುವ ವಿದ್ಯಾರ್ಥಿಗಳು, ಎಲ್ಲಿಂದೆಲ್ಲಿಂದಲೋ ಆರ್ಥಿಕ ಸಹಾಯವನ್ನು ನೀಡಿ ಸಂಸ್ಥೆಯನ್ನು ಬೆಳೆಸುತ್ತಿರುವ ದಾನಿಗಳು, ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ಪೋಷಕರು, ವಿವಿಧ ಸಂಘ-ಸಂಸ್ಥೆಗಳು ಹೀಗೆ ಎತ್ತಣಿಂದೆತ್ತ ಸಂಬಂಧದಿಂದ ರೂಪುಗೊಂಡ ನಮ್ಮ ಈ ಪೆರ್ವಾಜೆ ಪರಿವಾರವು ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆಯಾಗಿದೆ.
ತಾಯಿ ತಂದೆ ಗುರುಗಳ ಉದ್ದೇಶವು ಮಕ್ಕಳನ್ನು ಪ್ರೀತಿಯಿಂದ ಪೋಷಿಸುವುದರೊಂದಿಗೆ ಸರ್ವತೋಮುಖ ಬೆಳವಣಿಗೆಯತ್ತ ಕೊಂಡೊಯ್ಯುವುದಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಪ್ರಗತಿಯತ್ತ ಕೊಂಡೊಯ್ಯವಲ್ಲಿ ಅನವರತ ಶ್ರಮಿಸುತ್ತಿರುವ ನಮ್ಮ ವಿದ್ಯಾಸಂಸ್ಥೆಯು ತನ್ನ ಪಾಲಿನ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದೆ. ಆದರ್ಶ ಸಮಾಜವನ್ನು ರೂಪಿಸಬಲ್ಲ, ಸಮರ್ಥ, ಸಶಕ್ತ, ಆರೋಗ್ಯ, ಸುಶಿಕ್ಷಿತ, ಸದೃಢ, ಪರಿಪೂರ್ಣ ಯುವಜನತೆಯನ್ನು (ಪ್ರಜೆಯನ್ನು) ನಾಡಿಗೆ ನೀಡುವಲ್ಲಿ, ತನ್ನನ್ನು ತೊಡಗಿಸಿಕೊಂಡಿರುವ; ನಮ್ಮ ಸಂಸ್ಥೆಯ ನೈಜ ಸಾಧನೆಯು ಈ ಕೆಳಕಂಡ ಅಂಶಗಳಿಂದ ಸ್ಪಷ್ಟವಾಗುತ್ತದೆ. ಉತ್ಪ್ರೇಕ್ಷೆಯಲ್ಲದ ನಮ್ಮ ಸಾಧನೆಯ ಪಕ್ಷಿನೋಟ ಇದೀಗ ನಿಮ್ಮ ಮುಂದೆ.........
ಅತ್ಯುತ್ತಮ ಸಾಧನೆ :
2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 121 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಅದರಲ್ಲಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು 92% ಫಲಿತಾಂಶ ಪಡೆದಿದೆ. 13 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಿಕ್ಷಣ ಇಲಾಖೆಯಿಂದ ತಾಲೂಕಿನಲ್ಲಿ ನಮ್ಮ ಸಂಸ್ಥೆಯಿಂದಲೇ 2 ವಿದ್ಯಾರ್ಥಿಗಳು ಪ್ರಥಮ ಹಾಗೂ ಒಬ್ಬಳು ದ್ವಿತೀಯ ಸ್ಥಾನ ಪಡೆದು ಆ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡುವ 3 ಲ್ಯಾಪ್‍ಟಾಪ್‍ಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ.
“ಗೋಮತಿ” ನಮ್ಮ ಶಾಲಾ ಮಕ್ಕಳ ಮಾಸಿಕ ಪತ್ರಿಕೆಯು ಐದು ವರ್ಷದ ಮಗುವಾಗಿದ್ದು ಪ್ರತೀ ತಿಂಗಳಿನ ನಮ್ಮ ಸಂಸ್ಥೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು ಬೇರೆ ಬೇರೆ ಅತಿಥಿಗಳಿಂದ ಅನಾರವಣಗೊಳ್ಳುತ್ತಿದೆ. ಮಕ್ಕಳ ಸಂಪಾದಕ ಮಂಡಳಿಯು ಕನ್ನಡ ಶಿಕ್ಷಕಿಯವರಾದ ಶ್ರೀಮತಿ ನಿರ್ಮಲಾ ಗಣಪತಿ ಭಟ್ ಇವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಲಹೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ “ಜ್ಞಾನ ದೀವಿಗೆ” ವಾರ್ಷಿಕ ಸಂಚಿಕೆ
ಶ್ರೀ ಜಟ್ಟೆಪ್ಪ ಸನದಿ ಇವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸಹಾಯಕರಾಗಿ ಕುಮಾರಿ ಸುಪ್ರಿಯಾ, ಶ್ರೀ ಸುಶಾಂತ್ ಮತ್ತು 9ನೇ ಎ ತರಗತಿಯ ಭಾರ್ಗವ, ರಿಶಾನ್, ಅರ್ಜು
ನ್, ಶೋಧನ್ ಕುಮಾರ್ ಈ ವಿದ್ಯಾರ್ಥಿಗಳಿಂದ ಸಿದ್ಧಗೊಳಿಸಲಾಗಿದೆ. ವಿದ್ಯಾರ್ಥಿಗಳು ಓದಿದ ಪುಸ್ತಕದ ಅನಿಸಿಕೆಗಳ ಸಂಗ್ರಹ ‘ಸಂಕಲ್ಪ’ ಶ್ರೀ ಕಾಳಿದಾಸ ಇವರ ಮಾರ್ಗದರ್ಶನದಲ್ಲಿ ಸಿದ್ಧವಾಗುತ್ತಿದೆ. ಸಾಹಿತ್ಯ ಸಂಘದ ಆಶ್ರಯದಲ್ಲಿ “ಸಾಹಿತ್ಯೋಪಾಸನಾ” ಮಕ್ಕಳ ಹಸ್ತ ಪತ್ರಿಕೆಯು ಅನಾವರಣಕ್ಕಾಗಿ ಸಿದ್ಧಗೊಂಡಿರುತ್ತದೆ. ಶ್ರೀಮತಿ ನಿರ್ಮಲಾ ಗಣಪತಿ ಭಟ್ ಇವರ ಮಾರ್ಗದರ್ಶನದಲ್ಲಿ ಮಕ್ಕಳ ಚಿತ್ರಕಲಾ ಸಂಕಲನವಾದ ‘ಚಿತ್ರ - ಚಿಂತನ’ ಹೊತ್ತಿಗೆಯು ಸಿದ್ಧವಾಗಿರುತ್ತದೆ. ಪ್ರಸ್ತುತ ವರ್ಷದಿಂದ ಪ್ರತಿ ತರಗತಿಯ ವಿದ್ಯಾರ್ಥಿಗಳು ಆ ತರಗತಿಯ ಮಾಹಿತಿ ಮತ್ತು ಅವರ ಪ್ರತಿಭೆಯನ್ನು ಪ್ರತಿನಿಧಿಸುವಂತೆ ‘ತಿಂಗಳಿಗೊಂದು-ತರಗತಿಗೊಂದು’ ಮಾಸಿಕ ಹಸ್ತ ಪತ್ರಿಕೆಯನ್ನು ಪ್ರಕಟ ಪಡಿಸುತ್ತಿದ್ದಾರೆ.
ಸಾಂಸ್ಕøತಿಕ ಹಾಗೂ ಇತರ ಸ್ಪರ್ಧಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಹತ್ತರ ಸಾಧನೆಗಳನ್ನು ಕೈಗೊಂಡಿದ್ದಾರೆ.
ಕ್ಲಸ್ಟರ್‍ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ, ತೃತೀಯ ಸ್ಥಾನಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದು ಸಾಣೂರು ಕ್ಲಸ್ಟರ್‍ನಲ್ಲಿ ಅತ್ಯಧಿಕ ಬಹುಮಾನ ಗಳಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಗೆ. ತಾಲೂಕು ಮಟ್ಟದಲ್ಲಿಯೂ ವಿಶೇಷ ಸಾಧನೆಗೈದು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ವಿಜ್ಞಾನ ನಾಟಕ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುತ್ತಾರೆ.
ಅಭಿವೃದ್ಧಿ ಕೆಲಸ ಮತ್ತು ದಾನಿಗಳ ಆರ್ಥಿಕ ನೆರವು

ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಚೆಂಡೆ, ಡೊಳ್ಳುಕುಣಿತ, ಯಕ್ಷಗಾನ, ಕರಾಟೆ, ಯೋಗ, ಜಾನಪದ ನೃತ್ಯ, ಕ್ರಾಫ್ಟ್ ಮತ್ತು ಕ್ಲೇ ಮಾದರಿ ಈ ಮೊದಲಾದ ತರಬೇತಿಗಳನ್ನು ಶಾಲಾಭಿವೃದ್ಧಿ ಸಮಿತಿಯವರ ಆರ್ಥಿಕ ಸಹಾಯದಿಂದ ನಡೆಸಲಾಗುತ್ತಿದೆ.
ಶ್ರೀ ಬಿ.ಆರ್.ಶೆಟ್ಟಿ ದುಬೈ ಇವರ ವತಿಯಿಂದ ಸೋಲಾರ್ ಪಾನೆಲ್ ಮತ್ತು ಸೋಲಾರ್ ಶಕ್ತಿಯಿಂದ ಪಾಠೋಪಕರಣವಾಗಿ 1 ಟಿ.ವಿ.ಯನ್ನು ನೀಡಿರುತ್ತಾರೆ.
2018-19ನೇ ಸಾಲಿನ ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ನಮ್ಮ ಸಂಸ್ಥೆಯ ಕ್ರೀಡಾ ಕ್ಷೇತ್ರಕ್ಕೆ ರೂ.1 ಲಕ್ಷದ ಅನುದಾನವನ್ನು ಪಡೆಯಲಾಗಿದೆ. ಇದಕ್ಕಾಗಿ ಸಹಕಾರ ನೀಡಿದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾನ್ಯ ಶ್ರೀ ಉದಯ ಎಸ್. ಕೋಟ್ಯಾನ್ ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

ಶಿಕ್ಷಣ ಇಲಾಖೆಯ ನೆರವು :
ಪ್ರಸ್ತುತ ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಒಟ್ಟು 342 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯ ಪುಸ್ತಕ, ಡೈರಿ, ಶೂ ಭಾಗ್ಯ ಯೋಜನೆ, ಅಲ್ಲದೆ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿಯು ದೊರೆತಿರುತ್ತದೆ. ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್ ಸೌಲಭ್ಯ ದೊರೆಯಲಿದೆ.
ಅಕ್ಷರ ದಾಸೋಹ ಯೋಜನೆಯಡಿ ಸಂಯುಕ್ತ ಶಾಲೆಯ 850 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ, ಕ್ಷೀರ ಭಾಗ್ಯ ಯೋಜನೆ, ಕಬ್ಬಿಣಾಂಶದ ಮಾತ್ರೆ, ಜಂತು ಹುಳು ನಿವಾರಕ ಮಾತ್ರೆ, ಹೆಣ್ಣು ಮಕ್ಕಳಿಗೆ ಶುಚಿ ನಾಪ್ಕಿನ್‍ಗಳ ಯೋಜನೆ ಜಾರಿಯಲ್ಲಿದೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ.) ಯೋಜನೆಯಡಿ ಶಾಲೆಗೆ ಪಠ್ಯ ಸಂಬಂಧಿ ಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ 75 ಸಾವಿರ ರೂಪಾಯಿಗಳು ಶಾಲಾನುದಾನ ದೊರೆತಿದ್ದು ಸಮರ್ಪಕವಾಗಿ ಬಳಕೆಯಾಗುತ್ತಿದೆ.
9ನೇ ತರಗತಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರ ಹೆಸರಿನಲ್ಲಿ ಇಲಾಖೆಯು ನಿಖರ ಮೊತ್ತದ ನಿರಖು ಠೇವಣಿಯನ್ನು ಇಟ್ಟಿರುತ್ತದೆ.
ದತ್ತಿ ನಿಧಿ :
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಮ್ಮ ಸಂಸ್ಥೆಯ ಅಭಿಮಾನಿಗಳು ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ. ಆ ಮಹನೀಯರುಗಳೆಂದರೆ :–
ಶ್ರೀ ಅಂಡಾರು ರಾಮದಾಸ್ ಕಿಣಿ, ಶ್ರೀ ಸುನಿಲ್ ಕುಮಾರ್ ಶೆಟ್ಟಿ, ಶ್ರೀ ಶೇಕ್ ಮುಸ್ತಾಫ್, ಶ್ರೀ ಅರುಣ್ ಪುರಾಣಿಕ್, ಶ್ರೀಮತಿ ಸರಳಾ ಉದಯ್, ಶ್ರೀ ಜಗದೀಶ್ ಹೆಗ್ಡೆ, ಶ್ರೀ ಆಸಿಫ್ ಶುಕೂರ್ ಮತ್ತು ಶಾಲೆಯ ಶಿಕ್ಷಕಿಯವರಾದ ಶ್ರೀಮತಿ. ಕೆ. ಹರ್ಷಿಣಿ, ಶ್ರೀಮತಿ ಸುನಂದಾ. ಎಲ್. ಎಸ್, ಶ್ರೀಮತಿ ನಿರ್ಮಲಾ ಗಣಪತಿ ಭಟ್. ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀ ಬಿ. ರಘುರಾಮ ಕಾಮತ್ ಇವರು ತಮ್ಮ ಹುಟ್ಟುಹಬ್ಬದ ನೆನಪಿಗಾಗಿ 1 ಲಕ್ಷ ರೂಪಾಯಿಯನ್ನು ನಿಯತ ಖಾತೆಯಲ್ಲಿರಿಸಿ ಅದರ ಬಡ್ಡಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತಿದ್ದಾರೆ. ಶ್ರೀ ಜಗದೀಶ್ ಹೆಗ್ಡೆ ಇವರು ರೂ.20,000/- ನಿಯತ ಖಾತೆಯಲ್ಲಿ ತೊಡಗಿಸಿರುತ್ತಾರೆ. ಈ ಎಲ್ಲಾ ದತ್ತಿನಿಧಿಗಳ ಬಡ್ಡಿ ಮೊತ್ತವನ್ನು ಸುಮಾರು ರೂ.50,000/-ವನ್ನು ಅರ್ಹ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಪ್ರತಿ ವರ್ಷ ‘ಪ್ರತಿಭಾ ಪುರಸ್ಕಾರ’ದಂದು ವಿತರಿಸಲಾಗುತ್ತದೆ. ಅಲ್ಲದೇ ಎಲ್ಲಾ ಶಿಕ್ಷಕರು ಅವರವರ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ವಿತರಿಸುತ್ತಾರೆ.
ವಿದ್ಯಾರ್ಥಿ ವೇತನ :
ಶಾಲೆಯ ಬಹುಪಾಲು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಹಿಂದುಳಿದ ವರ್ಗಗಳ ಇಲಾಖೆಯಿಂದ ವಿದ್ಯಾರ್ಥಿವೇತನ ದೊರೆಯುತ್ತಿದೆ. ಜಿ.ಎಸ್.ಬಿ ವಿದ್ಯಾರ್ಥಿವೇತನ, ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ, ವಿವಿಧ ಸಂಘ ಸಂಸ್ಥೆಗಳ ಹಾಗೂ ಬೀಡಿ ಕಾರ್ಮಿಕ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ದೊರೆಯುತ್ತಿದೆ. ರೋಟರಿ ಮತ್ತು ರೋಟರ್ಯಾಕ್ಟ್ ಕಾರ್ಕಳ ಇವರ ವತಿಯಿಂದ ಆರ್ಥಿಕವಾಗಿ ಹಿಂದುಳಿದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಬಸ್ ನೌಕರರ ಸಂಘದಿಂದ 10 ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ.
ಶಿಕ್ಷಣ ಇಲಾಖೆಯಿಂದ 10ನೇ ತರಗತಿಯಲ್ಲಿ 75%, ಮತ್ತು 60% ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ, 7,500/-ರೂಪಾಯಿಗಳು ಪ್ರೋತ್ಸಾಹಕರ ವಿದ್ಯಾರ್ಥಿವೇತನ ದೊರೆಯುತ್ತಿದೆ.
ವಿವಿಧ ಪರೀಕ್ಷೆಗಳು :
ವಿದ್ಯಾರ್ಥಿಗಳ ಜ್ಞಾನವನ್ನು ಉತ್ತಮಗೊಳಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯ ವಿಕಾಸಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರ ಮಾರ್ಗದರ್ಶನದಲ್ಲಿ ಕೆಲವು ಮೌಲ್ಯಾಧಾರಿತ ಪರೀಕ್ಷೆಗಳನ್ನು ಪ್ರತಿವರ್ಷ ನಡೆಸಲಾಗುವುದು.
ಶ್ರೀಮತಿ ನಿರ್ಮಲಾ ಗಣಪತಿ ಭಟ್‍ರವರ ಮಾರ್ಗದರ್ಶನದಲ್ಲಿ ‘ಭಾರತ ಸಂಸ್ಕøತಿ ಪ್ರತಿಷ್ಠಾನ’ ದವರು ನಡೆಸುವ ರಾಮಾಯಣ ಪರೀಕ್ಷೆಯಲ್ಲಿ 17 ಮತ್ತು ಮಹಾಭಾರತ ಪರೀಕ್ಷೆಯಲ್ಲಿ 29 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ನೇತೃತ್ವದಲ್ಲಿ ಶಾಂತಿವನ ಟ್ರಸ್ಟ್ ಮೂಲಕ ನಡೆಯುವ ‘ಜ್ಞಾನ ತುಂಗೆ’ ಪುಸ್ತಕ ಆಧಾರಿತವಾಗಿ ನಡೆಸುವ ವಿವಿಧ ಸ್ಪರ್ಧೆಗಳಲ್ಲಿ ಶ್ರೀಮತಿ ವೀಣಾ ಎ. ಇವರ ಮಾರ್ಗದರ್ಶನದಲ್ಲಿ 340 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
2018-19ನೇ ಸಾಲಿನಲ್ಲಿ ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ದ್ವಿತೀಯ ಪಿ.ಯು.ಸಿ.ಯವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ಪ್ರಸ್ತುತ ವರ್ಷದಲ್ಲಿ ಎನ್.ಎಮ್.ಎಮ್.ಎಸ್. ಪರೀಕ್ಷೆಗೆ 47 ಮತ್ತು ಎನ್.ಟಿ.ಎಸ್.ಸಿ. ಪರೀಕ್ಷೆಗೆ 74 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ.
ಕ್ರಿಯಾಶೀಲ ಶಾಲಾ ಸಂಘಗಳು :
ವಿದ್ಯಾರ್ಥಿಗಳನ್ನು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲು, ಸಭಾ ಕಂಪನವನ್ನು ಹೋಗಲಾಡಿಸಲು, ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸಹಾಯಕವಾಗುವಂತೆ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ 12 ಸಂಘಗಳನ್ನು ರಚಿಸಲಾಗಿದೆ. ಪ್ರತೀ ಸಂಘದ ಆಶ್ರಯದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಸಂಸ್ಥೆಯಲ್ಲಿ ನೀಡಲಾಗುವ ವಿಶೇಷ ತರಗತಿಗಳು :
1. ಮಣಿಪಾಲ ಮಹಮ್ಮಾಯ ಫೌಂಡೇಶನ್ ಇವರಿಂದ 9ನೇ ಮತ್ತು 10ನೇ ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಗಿiಡಿಣuಚಿಟ ಅಟಚಿss. ಕನ್ನಡ ಮಾಧ್ಯಮದವರಿಗೆ ಗಿiಡಿಣuಚಿಟ ಅಟಚಿss ಸ್ಟುಡಿಯೋವನ್ನು ಆರಂಭಗೊಳಿಸಲಾಗಿದೆ. ಇಲ್ಲಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 14 ಸಂಸ್ಥೆಗಳಿಗೆ ಪಾಠ ಪ್ರವಚನಗಳು ಪ್ರಸಾರವಾಗುತ್ತಿವೆ. ಜೊತೆಗೆ 7ನೇ ತರಗತಿಯ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ ಗಿiಡಿಣuಚಿಟ ಅಟಚಿss ಮೂಲಕ ಬೋಧನೆಯ ಸೌಲಭ್ಯವಿದೆ.
ಪಠ್ಯೇತರ ಚಟುವಟಿಕೆಗಳು :
ಕ್ರೀಡಾ ಕ್ಷೇತ್ರ :
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ದೈಹಿಕ ಶಿಕ್ಷಕಿ ಶ್ರೀಮತಿ ವೇದಾವತಿ ಇವರ ಅವಿರತ ಮಾರ್ಗದರ್ಶನ ಹಾಗೂ ಪೆÇ್ರೀತ್ಸಾಹದಿಂದಾಗಿ, ಕ್ರೀಡಾಕ್ಷೇತ್ರದಲ್ಲಿ ಕಾರ್ಕಳ ತಾಲೂಕು ಮಟ್ಟದಲ್ಲಿ 17 ವರ್ಷದ ಒಳಗಿನ ಬಾಲಕರ ತಂಡ ಪ್ರಶಸ್ತಿಯನ್ನು ಸಾಧಿಸಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
1. ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 16 ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದು ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕು. ನಿರೀಕ್ಷಾ ಪ್ರಥಮ ಸ್ಥಾನ ಪಡೆದು ಗದಗದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಕು. ದೀಕ್ಷಾ ಹೆಗ್ಡೆ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
2. ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಹುಡುಗಿಯರ ತಂಡ ಪ್ರಥಮ ಸ್ಥಾನ, ಹುಡುಗರ ತಂಡ ದ್ವಿತೀಯ ಸ್ಥಾನ ಗಳಿಸಿರುತ್ತದೆ.
3. ತಾಲೂಕು ಮಟ್ಟದ ಬಾಲ್‍ಬ್ಯಾಡ್ಮಿಂಟನ್ ಹುಡುಗಿಯರ ತಂಡ ಮತ್ತು ಹುಡುಗರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಹುಡುಗರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ.
4. ತಾಲೂಕು ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಹುಡುಗಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮಂಡ್ಯದಲ್ಲಿ ನಡೆದ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
5. ಕರಾಟೆ ಎಸೋಸಿಯೇಶನ್‍ರವರು ಶಿವಮೊಗ್ಗ, ಉಡುಪಿ, ಕಟಪಾಡಿ ಇಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಾ| ಸಮೃತ್, ಮಾ| ಆಕಾಶ್ ಇವರು ಕಟಾ ಮತ್ತು ಪೈಟಿಂಗ್ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
6. ಮಾ| ಸಮೃತ್ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
7. ತಾಲೂಕು ಕ್ರೀಡಾಕೂಟದಲ್ಲಿ 22 ಬಹುಮಾನ ಪಡೆದಿದ್ದು ಜಿಲ್ಲಾ ಮಟ್ಟದಲ್ಲಿ 800 ಮೀ. ಓಟದಲ್ಲಿ ಕು.ಶ್ರಾವ್ಯ ಶೆಟ್ಟಿ ತೃತೀಯ, ಮಾ| ಚಿರಾಗ್ ನಡಿಗೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
8. ದಿನಾಂಕ:-17-11-2018ರಂದು ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಆಚರಿಸಲಾಗಿದ್ದು ವಿವಿಧ ಕ್ರೀಡೆಗಳಲ್ಲಿ ಪ್ರತಿಭಾನ್ವಿತರನ್ನು ಗುರುತಿಸಲಾಗಿದೆ. ಮಾ. ಜಿತು ಜಾನಿ, ಮಾ. ಕಿರಣ್, ಮಾ.ಅವಿನಾಶ್, ಕು. ಶರಣ್ಯ, ಕು. ಶ್ರಾವ್ಯ ಶೆಟ್ಟಿ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಇತರ ಸ್ಪರ್ಧೆಗಳಲ್ಲಿನ ವಿಶೇಷ ಸಾಧನೆಗಳು :
1. ಮಾ. ಸುಗಂಧ್ ಕಲಾಶ್ರೀ ಪ್ರಶಸ್ತಿಗಾಗಿ ಸೃಜನಾತ್ಮಕ ಕಲೆ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುತ್ತಾನೆ.
2. ಕು. ಶ್ರೀಲಕ್ಷ್ಮೀ ರಾವ್ ವನ್ಯ ಜೀವಿ ಸಪ್ತಾಹ ಅಂಗವಾಗಿ ಕುದುರೆ ಮುಖ ಅರಣ್ಯ ವಿಭಾಗದವರು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಲಯ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.
ಮಾ| ಯು. ಅದ್ವೈತ್ ಶರ್ಮ ರಸಪ್ರಶ್ನೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಲಯ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.
3. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಮಾ. ಸೃಜನ್ ಮತ್ತು ಮಾ. ಸುಗಂಧ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತಾರೆ.
4. ಎಂ.ವಿ.ಶಾಸ್ತ್ರೀ ಇನ್ನಾ ಇವರು ನಿಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾ| ವಿನುಷ್ ಮತ್ತು ಮಾ| ಅದ್ವೈತ್ ಶರ್ಮಾ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
5. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಾ| ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ‘ನಾನು ಮೆಚ್ಚಿದ ಪುಸ್ತಕ’ ವಿಮರ್ಶೆಯಲ್ಲಿ ಮಾ| ಯು. ಅದ್ವೈತ್ ಶರ್ಮ, ಕು. ರಕ್ಷಾ ಇವರು ಉತ್ತಮವಾಗಿ ಭಾಗವಹಿಸಿರುತ್ತಾರೆ.
ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳು :
ದಿ:16-12-2017ರಂದು ಕಳೆದ ವರ್ಷದ ಶಾಲಾ ವಾರ್ಷಿಕೋತ್ಸವವು ಜರುಗಿತು.
ದಿ:26-12-2017ರಂದು ಉಡುಪಿ ಜಿಲ್ಲಾ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಡೆಯಿತು. ಶ್ರೀ ಶ್ರೀಧರ್ ನಂಬಿಯಾರ್ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದಿ:27-01-2018ರಂದು ನೇತಾಜಿ ಸುಭಾಸ್‍ಚಂದ್ರ ಭೋಸ್‍ರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಓದಿದ ಪುಸ್ತಕಗಳ ಅನಿಸಿಕೆಗಳ ಸಂಗ್ರಹ ‘ಸಂಕಲ್ಪ’ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಅತಿಥಿ ಉಪನ್ಯಾಸಕರಾಗಿ ಶ್ರೀ ವಿನ್ಸೆಂಟ್ ಡಿ’ಕೋಸ್ಟ ಪ್ರಾಂಶುಪಾಲರು ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದಿರೆ ಮತ್ತು ಮುನ್ನುಡಿ ಬರೆದ ಶ್ರೀಮತಿ ಹರ್ಷಿಣಿ ಹೆಗ್ಡೆ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
ಜೆಸಿಐ ಕಾರ್ಕಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಆಚರಿಸಲಾಯಿತು. ಶ್ರೀ ರೋಶನ್ ಜೆಸಿಐ ಅಧ್ಯಕ್ಷರು, ಶ್ರೀ ಸಮದ್ ಖಾನ್, ಶ್ರೀಮತಿ ದಿವ್ಯ ಸ್ಮಿತಾ ಉಪಸ್ಥಿತರಿದ್ದರು.
ಶ್ರೀನಿವಾಸ ಗಣಿತ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅತಿಥಿ ಉಪನ್ಯಾಸಕರಾಗಿ ಡಾ| ವಿರೂಪಾಕ್ಷ ದೇವರಮನಿ ಮನಃಶಾಸ್ತ್ರಜ್ಞರು ಎಂ.ವಿ.ಬಾಳಿಗಾ ಆಸ್ಪತ್ರೆ ಉಡುಪಿ ಇವರು ಆಗಮಿಸಿದ್ದರು.
ದಿ:29-05-2018ರಂದು ಪ್ರಸ್ತುತ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ ಅಡ್ಯಂತಾಯ, ಡಾ| ಶಿಶುಪಾಲ ಇವರು ಆಗಮಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯರಾಜ್ ಶೆಟ್ಟಿ, ಶ್ರೀ ಜಗದೀಶ್ ಹೆಗ್ಡೆ-ಸದಸ್ಯರು ಶಾಲಾಭಿವೃದ್ಧಿ ಸಮಿತಿ, ಶ್ರೀ ಶೇಕ್ ಮುಸ್ತಾಫ್ ಭಾಗವಹಿಸಿದ್ದರು.
ದಿ:01-06-2018ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯ ಸಂಯುಕ್ತ ಆಶ್ರಯದಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಯಿತು.
ದಿ:03-06-2018ರಂದು ತಾಲೂಕು ಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳಿಗೆ ನೀಡುವ ಉಚಿತ ಸೌಲಭ್ಯಗಳ ವಿತರಣೆ ಕಾರ್ಯಕ್ರಮವು ನಡೆಯಿತು.
ಜೂನ್ 18ರಿಂದ 21ರವರೆಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಕೃತಿ ಮತ್ತು ಯೋಗ ವಿಜ್ಞಾನ, ಆಳ್ವಾಸ್ ಕಾಲೇಜು ಇಲ್ಲಿನ ವಿದ್ಯಾರ್ಥಿನಿಯರಾದ ಕು.ಚೈತ್ರಾ, ಕು.ಅಮೃತಾ ಯೋಗ ತರಬೇತಿ ನೀಡಿದರು.
ದಿ:21-06-2018ರಂದು ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಸುಧಾಕರ್ ಇವರು ಐeಚಿಡಿಟಿ ಣo ಐeಚಿಡಿಟಿ ಎಂಬ ತರಬೇತಿಯನ್ನು ನೀಡಿದರು.
ದಿ:22-06-2018ರಂದು ಶಾಲಾ ಸಂಸತ್ ಹಾಗೂ ಎಲ್ಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶ್ರೀ ಪ್ರದೀಪ್- ಪ್ರಾಂಶುಪಾಲರು, ಎಸ್.ಎನ್.ವಿ. ಪದವಿಪೂರ್ವ ಕಾಲೇಜು, ಶಾಲಾ ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿ:28-06-2018ರಂದು ಶಾಲಾ ಯಕ್ಷಕಲಾರಂಗ ಕಾರ್ಕಳ ಇವರು ನಡೆಸುವ ಯಕ್ಷಗಾನ ಶಿಕ್ಷಣದ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀ ಗೋಪಾಲಕೃಷ್ಣ, ಶ್ರೀ ಕಿಶನ್ ಹೆಗ್ಡೆ, ಶ್ರೀ ಪದ್ಮನಾಭ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯರಾಜ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪೋಲೀಸ್ ಮತ್ತು ಕಾರ್ಕಳ ನಗರ ಪೋಲೀಸ್ ಇವರ ಜಂಟಿ ಆಶ್ರಯದಲ್ಲಿ ಸಂಚಾರ ಜಾಗೃತಿ ಮಾಸಾಚರಣೆ ನಡೆಯಿತು. ಶ್ರೀ ನಂಜನಾಯ್ಕ-ಪೋಲೀಸ್ ವರಿಷ್ಠಾಧಿಕಾರಿಗಳು ಕಾರ್ಕಳ ಠಾಣೆ ಇವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಕಾರ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ನಮ್ಮ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಉಳಿಸಿ ಅಭಿಯಾನವನ್ನು ನಡೆಸಲಾಯಿತು. ಶ್ರೀಮತಿ ಮಂಗಳಲಕ್ಷ್ಮೀ ಪಾಟೀಲ್-ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀ ನಾಗೇಶ್ ಶಾನುಭೋಗ-ಅಕ್ಷರದಾಸೋಹ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ದಿ: 28-07-2018ರಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಶಾಲೆಯ ಗಂಗಾಮಾತಾ ಸಾಹಿತ್ಯ ಸಂಘದ ಆಶ್ರಯದಲ್ಲಿ ಅಚ್ಚು ಮೆಚ್ಚಿನ ಪುಸ್ತಕ ವಿಮರ್ಶಾ ಸ್ಪರ್ಧೆ ನಡೆಸಲಾಯಿತು. ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರಭಾಕರ ಕೊಂಡಳ್ಳಿ, ಶ್ರೀಮತಿ ಸಾವಿತ್ರಿ ಮನೋಹರ್, ಶ್ರೀ ದೇವದಾಸ ಕೆರೆಮನೆ, ಶ್ರೀ ರತನ್ ಉಪಸ್ಥಿತರಿದ್ದರು.
ದಿ:01-08-2018ರಂದು ನಮ್ಮ ಸಂಸ್ಥೆಯ ಇಂಟರ್ಯಾಕ್ಟ್ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಕಳ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಶೈಲೇಂದ್ರ ರಾವ್, ರೋ.ವಸಂತ ಎಂ., ರೋ. ನಿರಂಜನ ಜೈನ್, ರೋ.ಜಗದೀಶ್, ರೋ. ಹರಿಶ್ಚಂದ್ರ ಹೆಗ್ಡೆ, ರೋ.ಇಕ್ಬಾಲ್ ಅಹ್ಮದ್, ರೋ. ಕೆ. ಹರ್ಷಿಣಿ, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಾಜೇಂದ್ರ ಭಟ್ ಆಗಮಿಸಿದ್ದರು.
ದಿ:11-08-2018ರಂದು 2017-18ನೇ ಸಾಲಿನಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಯೋಗೀಶ್ ಹೆಗ್ಡೆ ರಿಜಿಸ್ಟ್ರಾರ್ ನಿಟ್ಟೆ, ಶ್ರೀ ಸುನಿಲ್ ಕುಮಾರ್ ಶೆಟ್ಟಿ, ಶ್ರೀ ಶೇಕ್ ಮುಸ್ತಾಫ, ಶ್ರೀ ಪ್ರಕಾಶ್ ರಾವ್, ಶ್ರೀ ಜಗದೀಶ್ ಹೆಗ್ಡೆ, ಶ್ರೀ ವಿಜಯರಾಜ್ ಶೆಟ್ಟಿ, ಮುಖ್ಯ ಶಿಕ್ಷಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ವೃತ್ತ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಭಾಸ್ಕರ್ ಸಮನ್ವಯಾಧಿಕಾರಿಗಳು ಕಾರ್ಕಳ, ಶ್ರೀ ಶಿವಾನಂದ ಇ.ಸಿ.ಓ., ಶ್ರೀ ಕೃಷ್ಣ ಇ.ಸಿ.ಓ., ಶ್ರೀ ಪ್ರವೀಣ್ ಸಂಪನ್ಮೂಲ ವ್ಯಕ್ತಿ ಇವರು ಭಾಗವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ಇವರ ಸಹಯೋಗದಲ್ಲಿ ‘ಸದ್ಭಾವನಾ ದಿವಸ್’ ಆಚರಿಸಲಾಯಿತು. ಶ್ರೀಮತಿ ಜ್ಯೋತಿ ಪೈ, ಶ್ರೀಮತಿ ಸಾವಿತ್ರಿ ಮನೋಹರ್, ಶ್ರೀ ಗಣೇಶ್, ಶ್ರೀ ಹರೀಶ್ ಉಪಸ್ಥಿತರಿದ್ದರು.
ದಿ:28-08-2018ರಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕರ ತರಬೇತಿ ಕಾರ್ಯಕ್ರಮ ನಡೆಯಿತು. ಶ್ರೀ ಪ್ರಭಾಕರ ಮಿತ್ಯಾಂತಾಯ, ಶ್ರೀ ನಾಗರಾಜ್, ಶ್ರೀಮತಿ ಫಾತಿಮಾ, ಶ್ರೀಮತಿ ಪ್ರಮೀಳಾ, ಶ್ರೀ ಶಿವಪ್ರಸಾದ್ ಅಡಿಗ ಉಪಸ್ಥಿತರಿದ್ದರು.
ದಿ:02-10-2018ರಂದು ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ದಿ:01-11-2018ರಂದು 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದು. ರೋ. ಚಂದ್ರಶೇಖರ ಹೆಗ್ಡೆ ಇವರಿಂದ ಶ್ರೀ ಹರೀಶ್ ಇವರ ಮಾರ್ಗದರ್ಶನದ ನಮ್ಮ ಶಾಲೆಯ ‘ಡೊಳ್ಳು ಕುಣಿತ’ ತಂಡದ ಉದ್ಘಾಟನೆಯು ನೆರವೇರಿತು.
2018-19ನೇ ಸಾಲಿನಲ್ಲಿ ಕಲಿಕಾ ಕೊರತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗಾಗಿ ‘ವಿಶ್ವಾಸ ಕಿರಣ’ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಸಮಾರಂಭವನ್ನು ದಿನಾಂಕ:-09-10-2018ರಂದು ನಮ್ಮ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಸಿದ್ದಪ್ಪ, ಶ್ರೀ ಶಿವಾನಂದ ಅತಿಥಿಗಳಾಗಿ ಭಾಗವಹಿಸಿದ್ದರು.
ದಿ:07-11-2018ರಂದು ಶ್ರೀ ರಿತೇಶ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಸೂಡ, ಶ್ರೀ ಪ್ರದೀಪ್ ರಾಣೆ ಸ್ಥಳೀಯ ಪುರಸಭಾ ಸದಸ್ಯರು, ಶ್ರೀ ವಿಜಯರಾಜ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಶಾಲಾ ವಾರ್ಷಿಕ ಕ್ರೀಡೋತ್ಸವ ನಡೆಸಲಾಯಿತು.
ದಿ: 30-11-2018ರಂದು ವಲಯ ಅರಣ್ಯ ಇಲಾಖೆ ವತಿಯಿಂದ ‘ಚಿಣ್ಣರ ವನದರ್ಶನ’ ಕಾರ್ಯಕ್ರಮವು ಸೀತಾನದಿ ತಟದಲ್ಲಿ ಸೋಮೇಶ್ವರ ಅಭಯಾರಣ್ಯದಲ್ಲಿ ನಡೆಯಿತು.
ದಿ :03-12-2018ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಚಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಗಾಂಧಿ ರಂಗ ಪಯಣ ನಾಟಕ ತಂಡದಿಂದ ‘ಪಾಪು-ಬಾಪು’ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಜೀವನ ಕುರಿತು ನಾಟಕ ಪ್ರದರ್ಶನ ನಡೆಯಿತು.
No comments:
Post a Comment