Wednesday, December 5, 2018

ಕನ್ನಡ ವಿಭಾಗ-ಇತರೆ


ರಸ ಪ್ರಶ್ನೆ
1. ಭಾರತದ ಅತಿ ಎತ್ತರದ ಜಲಪಾತ            – ಜೋಗ ಜಲಪಾತ
2. ಭಾರತದ ಅತ್ಯಂತ ದೊಡ್ಡ ಗುಮ್ಮಟ           – ಗೋಲ ಗುಮ್ಮಟ
3. ಕರ್ನಾಟಕದ ದೊಡ್ಡ ನಗರ                 – ಬೆಂಗಳೂರು
4. ಕರ್ನಾಟಕದ ಅತ್ಯಂತ ಎತ್ತರದ ಶಿಖರ          – ಮುಳ್ಳಯ್ಯನ ಗಿರಿ
5. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ            – ಮೈಸೂರು
6. ಕರ್ನಾಟಕದ ದೊಡ್ಡ ಪಕ್ಷಿಧಾಮ              – ರಂಗನತಿಟ್ಟು
7. ಕರ್ನಾಟಕದ ಉದ್ದವಾದ ನದಿ               – ಕಾವೇರಿ
8. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ          – ಪಂಪ ಪ್ರಶಸ್ತಿ

ಸಂಗ್ರಹ:- ಶಿಯಾಜ್ó 10ನೇ ‘
ನಮ್ಮ ಪ್ರಕೃತಿ
ಸುಂದರ ಸುಂದರ ನಮ್ಮ ಪ್ರಕೃತಿ ಸುಂದರ
ಹಲವು ಜೀವರಾಶಿಗಳಿಗೆ ನಮ್ಮ ಪ್ರಕೃತಿ ಜಾವನಾಧಾರ
ಹಸಿರು ತುಂಬಿರುವ  ಪ್ರಕೃತಿ ಮಾತೆಯೇ ಸುಂದರ
ಸುಂದರ ಸುಂದರ ನಮ್ಮ ಪ್ರಕೃತಿ ಸುಂದರ
ಫಿಜಾó
10ನೇ  ತರಗತಿ
 ನಮ್ಮ ಕಾರ್ಕಳ
ನಮ್ಮ ಕಾರ್ಕಳ
ಸ್ವಚ್ಛ ಕಾರ್ಕಳ
ಸುಂದರ ಕಾರ್ಕಳ
ನಮ್ಮೆಲ್ಲರ ಪ್ರೀತಿಯ ಕಾರ್ಕಳ

    ಪ್ರಕೃತಿ
ನಮ್ಮ ಪ್ರಕೃತಿನಮ್ಮೆಲ್ಲರ ಪ್ರಕೃತಿ
ನಮ್ಮ ಪ್ರಕೃತಿಯಲ್ಲಿ ಗಿಡ ಮರ ಹೂಬಳ್ಳಿಗಳು ಬೆಳೆಯುತ್ತದೆ
ಚಿಟ್ಟೆಗಳು ದಂಬಿಗಳು ರಸವನ್ನು ಹೀರಿ
ಪ್ರಕೃತಿಯನ್ನು ಚಂದಗೊಳಿಸುತ್ತದೆ.
ಸಂಗ್ರಹ:- ಪ್ರಥ್ವಿ ರಾವ್ 10ನೇ ‘

ಅಮ್ಮ
ಅಮ್ಮ ಎಂದರೆ ಬರೀ ಪದವಲ್ಲ
ಪದೇ ಪದೇ ಸಿಗುವ ವಸ್ತುವಲ್ಲ
ಅಮ್ಮನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
ಅಮ್ಮನನ್ನು ಒಮ್ಮೆ ಕಳೆದು ಕೊಂಡರೆ
ಜೀವನದಲ್ಲಿ ನೆಮ್ಮದಿಯೇ ಇಲ್ಲ

ಅಮ್ಮ ದೇವರಿಗಿಂತ ಕಡಿಮೆಯಿಲ್ಲ
ಹುಡುಕಿದರೆ ಸಿಗುವುದಿಲ್ಲ
ಬಯಸಿದರೆ ಬರುವವಳಲ್ಲ
ಕಲ್ಲು ಹೃದಯದಲ್ಲೂ ಹೂವರಳಿಸುವಳು
ತನಗೆ ನೋವಿದ್ದರೂ
ಮಕ್ಕಳನ್ನು ನಗಿಸುವಳು
ಸಂಗ್ರಹ:-ಅರ್ಫ ನಾಝ್ 10ನೇ ‘
ವಾಲ್ಮೀಕಿ
         ನಾನು ವಾಲ್ಮೀಕಿ ಎಂಬ ಪುಸ್ತಕವನ್ನು ಓದಿದ್ದೇನೆ ಪುಸ್ತಕವನ್ನು ಬರೆದವರು ಎಲ್.ಎಸ್ಶೇಷಗಿರಿ ಪುಸ್ತಕದಲ್ಲಿ ರಾಮಾಯಣದ ಕಥೆಯಿದೆಇದರಲ್ಲಿ ರಾಮನುಲಕ್ಷ್ಮಣ ಇವರೆಲ್ಲಾ ತಂದೆ ತಾಯಿಯರಿಗೆ ಕೊಡುವ ಗೌರವ ಇಲ್ಲಿ ವ್ಯ ಕ್ತವಾಗುತ್ತದೆ ಮತ್ತು ಗುರುಗಳಿಗೆತಂದೆತಾಯಿಯರನ್ನು ನೋಡಿಕೊಳ್ಳುವ ರೀತಿ ಕೂಡಾ ಇಲ್ಲಿ ವ್ಯಕ್ತವಾಗಿದೆಹಾಗೆಯೇ ರಾಮಲಕ್ಷ್ಮಣರು ಕಾಡಿನಲ್ಲಿ ಕಳೆದ ದಿನಗಳು ಹಾಗೆಯೇ ಅವರು ನಡೆದುಕೊಂಡ ರೀತಿ ಇಲ್ಲಿ ವ್ಯಕ್ತವಾಗಿದೆ ಪುಸ್ತಕವು ಬಹು ಒಳ್ಳೆಯದಾದ ಸಾರಾಂಶವನ್ನು ಹೊಂದಿದೆ.
ಸಂಗ್ರಹ:- ಶರಣ್ಯ . ಆರ್. 10ನೇ ‘

ನನ್ನ ತಾಯಿ
 ನನ್ನ ತಾಯಿಯೇ
ನಿನಗೆ ಎಷ್ಟು ಧನ್ಯವಾದ ಹೇಳಿದರು ಸಾಲದು
ನೀನು ನನ್ನ ಮೊದಲ ಗುರು

ನೀನು ಪ್ರೀತಿಸುವ ಹೃದಯವನ್ನು ನೋಯಿಸಲಾರೆ
ನಾನು ನಿನ್ನ ನೋಯಿಸಲಾರೆ
ನನ್ನಪ್ರೀತಿಯ ತಾಯಿ
ಸಂಗ್ರಹ:- ಸುಷ್ಮಾ ನಾಯಕ್ 10ನೇ ‘

ಯಕ್ಷಗಾನ ಬೆಳೆದು ಬಂದ ದಾರಿ
        ಯಕ್ಷಗಾನ ಇದು ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಜಾನಪದ ಕಲೆಇದಕ್ಕೆ ಸುಮಾರು 600 ವರ್ಷಗಳಷ್ಟು ಇತಿಹಾಸವಿದೆಹಿಂದೆ ದೇವರ ಪೂಜೆಗೆ ಅಷ್ಟಪ್ರಧಾನಗಳಲ್ಲಿ ಯಕ್ಷಗಾನವೂ ಒಂದುಮೊದಲು ಯಕ್ಷಗಾನವು ಪೂಜೆಗೆ ಮಾತ್ರ ಬಳಸಲಾಗುತ್ತಿತ್ತುನಂತರ ಜನರಿಗೆ ಪ್ರದರ್ಶಿಸಲು ಶುರುಮಾಡಿದರುಮೊದಲು ವೇಷಧಾರಿಗಳ ಜೊತೆಗೆ ಹೆಮ್ಮೇಳದವರು ಅಂದರೆ ಭಾಗವತ ಹಾಗೂ ಚೆಂಡೆಮದ್ದಳೆಯನ್ನು ನುಡಿಸುವವರು ನಲಿರುತ್ತಿದ್ದರುನಂತರ ಭಾಗವತರು ಹಾಗೂ ಹಿಮ್ಮೇಳದವರು ನಿಂತು ನುಡಿಸುವ ಪದ್ಧತಿ ಬಂತುತದನಂತರ ಭಾಗವತರು ಹಾಗೂ ಮದ್ದಳೆಗಾರರು ಕುಳಿತು ನುಡಿಸುವುದು ಹಾಗೂ ಚೆಂಡೆ ಹಾಗೂ ಚಕ್ರತಾಳದವರು ನಿಂತು ನುಡಿಸುವ ಪದ್ಧತಿತೆಂಕುತಿಟ್ಟಿನ ಪ್ರಸಂಗವನ್ನು ಬರೆದವರು ಪಾರ್ತಿ ಸುಬ್ಬ ಮಹಾಕವಿತೆಂಕುತಿಟ್ಟಿನ ಪ್ರಸಿದ್ಧ ಪ್ರಸಂಗವಾದ “ದೇವಿ ಮಹಾತ್ಮೆ” ಇದಕ್ಕೆ ಸುಮಾರು 80ಕ್ಕೂ ಹೆಚ್ಚು ವರ್ಷ ಇತಿಹಾಸವಿದೆ ಪ್ರಸಂಗವನ್ನು ಬರೆದವರು ಕೀರ್ತಿಶೇಷ ಯಕ್ಷ ಬ್ರಹ್ಮ ಅಗರಿ ಶ್ರೀನಿವಾಸ ಭಾಗವತರುಇಂದು  ಯಕ್ಷಗಾನ ಲೋಕವು ಸುಬ್ರಾಯ ಹೊಳ್ಳನೆಡ್ಲೆ ನರಸಿಂಹ ಭಟ್ಬಲಿಪ ಭಾಗವತರುಸತೀಶ್ ಪಟ್ಲರವಿಚಂದ್ರ ಕನ್ನಡಿಕಟ್ಟೆಚೈತನ್ಯಗಣಪತಿ ಭಟ್ಇನ್ನಿತರ ದಿಗ್ಗಜರು ಮುಂದುವರಿಸುತ್ತಿದ್ದಾರೆ.

ಸಂಗ್ರಹ:-ಶ್ರೀಮಾನ್ ಜೈನ್10ನೇ ‘
ಅಮ್ಮ
       ಅಮ್ಮ ಎಂದರೆ ಎರಡು ಅಕ್ಷರದ ಪದ.ಆದರೆ ಅದನ್ನು ಹೇಳುವಾಗ ನಮಗಾಗುವ ಅನುಭವಸಂತೋಷಆನಂದ ನಮಗೆ ಯಾವ ಜನುಮದಲ್ಲೂ ಸಿಗದು ಅನುಭವವೇ ಬೇರೆಅಮ್ಮ ಎಷ್ಟೂ ಬೈದರೂ ನಮಗೆ ಬೇಜಾರಾಗದು ಏಕೆಂದರೆ ನಮ್ಮ ಮನಸ್ಸಿನಲ್ಲಿ ಇರುತ್ತದೆಅವರು ನಮ್ಮ ಕಷ್ಟದಲ್ಲಿ ಜೊತೆಯಾಗಿ ಇರುತ್ತಾರೆನಮಗೆ ನಮ್ಮ ಒಳೆಯದಕ್ಕೆ ಹೇಳುತ್ತಾರೆಇವಳು ನಮ್ಮ ಒಳಿತಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿ ಇಡುತ್ತಾಳೆನಮ್ಮನ್ನು 9 ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಮಾತೆಗೆ ನಾವು ದುಃಖ ನೀಡುವುದು ಸರಿಯೇಯೋಚಿಸಿ ಇವಳು ಯಾವ ವೀರ ಮಾತೆಗೂ ಕಡಿಮೆಯಿಲ್ಲಮಾತೆ ದೇಶ ಆಳಲು ಸರಿತೊಟ್ಟೊಲು ತೂಗಲು ಸರಿ.
ಮಾತೆಗೊಂದು ಸಲಾಮ್
ಸಂಗ್ರಹ:- ಅನುಷ್ 10ನೇ ‘

ಜೋಕ್ಸ್
ಬ್ಯಾಂಕ್ನಲ್ಲಿ:-
ಪತ್ನಿ:- ರೀ ಎಲ್ಲಿದ್ದೀರಾ?
ಮಂಕ:- ಬ್ಯಾಂಕ್ಗೆ ಬಂದಿದ್ದೆ.
ಪತ್ನಿ :- ಹೌದಾಹಾಗಾದರೆ ನನಗೋಸ್ಕರ ಒಂದ್ ಹತ್ತು ಸಾವಿರ ಡ್ರಾ ಮಾಡಿ.
ಮಂಕ :- ಬ್ಲೆಡ್ ಬ್ಯಾಂಕ್ನಲ್ಲಿದ್ದೇನೆ ಕಣೇ!

ಏನೂ ಮಾಡಿರಲಿಲ್ಲ:-
ಗೋಪಿ :- ಇವತ್ತು ಟೀಚರು ನನಗೆ ಬೈದರು.
ಅಪ್ಪ :- ಯಾಕೆ ನೀನು ಏನು ಮಾಡಿದೆ?
ಗೋಪಿ :- ಏನೂ ಮಾಡಿರಲಿಲ್ಲ.
ಅಪ್ಪ :- ಏನೂ ಮಾಡದೇ ಟೀಚರ್ ನಿನಗೆ ಬೈದರೆ?
ಗೋಪಿ :- ಹೌದಪ್ಪ ಇವತ್ತು ನಾನು ಹೋಮ್ ವರ್ಕ್ ಏನೂ ಮಾಡಿರಲಿಲ್ಲ.

ಸಂಗ್ರಹ:- ಕಿರಣ್ 10ನೇ ‘ಸಿ




ಜೋಕ್ಸ್
         ಒಂದು ದಿನ ಕಿಟ್ಟು ರಸ್ತೆಯಲ್ಲಿ ಹೋಗತ್ತಿದ್ದಅವನಿಗೆ ರಸ್ತೆ ಪಕ್ಕದ ಗೋಡೆಯಲ್ಲಿ ಏನೋ ಬರೆದ ಹಾಗೇ ಕಾಣಿತುಅವನು ಅದನ್ನು ಓದಿದ . ಅದರಲ್ಲಿ “ಇದನ್ನು ಓದಿದವರು ಮಂಗ” ಎಂದು ಬರೆದಿತ್ತುಕಿಟ್ಟುವಿಗೆ ಬಹಳ ಸಿಟ್ಟು ಬಂತು.ಅವನು ಅದನ್ನು ಅಳಿಸಿ “ಇದನ್ನು ಬರೆದವನು ಮಂಗ” ಎಂದು ಬರೆದಎಂತಹ ಜಾಣನಲ್ಲವೇ ನಮ್ಮ ಕಿಟ್ಟು?

ಸಂಗ್ರಹ:- ಭಾರ್ಗವಸಿಸಾಲಿಯಾನ್ 9ನೇ ‘


ಅಬ್ದುಲ್ ಕಲಾಂಗೊಂದು ಸಲಾಂ
         ಅಬ್ದುಲ್ ಕಲಾಂ ಎಂದಾಕ್ಷಣ ಅವರು ನಮ್ಮ ದೇಶದ ರಾಷ್ಟ್ರಪತಿಳಾಗಿದ್ದರು ಎಂಬುವುದು  ಮಾತ್ರ ನೆನಪಾಗುವುದಲ್ಲವರು ಒಬ್ಬ ಅದ್ಭುತ ವಿಜ್ಞಾನಿಯೂ ಕೂಡ ಆಗಿದ್ದರುಅಷ್ಟೇ ಅಲ್ಲದೆ ಮಗುವಿನಂತಹ ಮನಸ್ಸು ಹೊಂದಿದ್ದ ಅತ್ಯಂತ ಸರಳ ವ್ಯಕ್ತಿತ್ವದವರು ಆಗಿದ್ದರು.
         ಅವರು ತಮ್ಮ ಬಾಲ್ಯದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕ ವಿಷಯದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರುಅವರು ಯಾವಾಗಲೂ ಆಕಾಶದಲ್ಲಿ ಹಾರುವ ಕನಸು ಕಾಣುತ್ತಿದ್ದರುನಾವು ಅವರನ್ನು ನಮ್ಮ ಬಾಳಿನ ಆದರ್ಶ ವ್ಯಕ್ತಿಯನ್ನಾಗಿಸಬೇಕುಏಕೆಂದರೆ ಅವರು ಕನಸು ಕಂಡದ್ದು ಮಾತ್ರವಲ್ಲ ಅದಕ್ಕೆ ಪೂರಕವಾದ ಶ್ರಮವನ್ನು ಹಾಕಿ ರಾಕೆಟ್ ಉಡಾವಣೆ ಮಾಡುವಲ್ಲಿ ಯಶಸ್ವಿಯಾದರುಅಬ್ದುಲ್ ಕಲಾಂ ಒಂದು ಮಾತುನ್ನು ಹೇಳಿದ್ದಾರೆನಿದ್ದೆಯಲ್ಲಿ ಕಾಣುವುದು ಕನಸಲ್ಲ ನಮ್ಮನ್ನು ನಿದ್ದೆ ಮಡಲು ಬಿಡದಿರುವುದೇ ಕನಸುನಾವು ಯಾವತ್ತು ಕನಸನ್ನು ಕಾಣಬೇಕುಕನಸು ಕಾಣುವುದು ಮಾತ್ರವಲ್ಲ
                                                                   ಸಂಗ್ರಹಸೃಷ್ಟಿ 9 ‘’ ನೇ
ಕವನಗಳು
ಕಿರು ನಗೆ :-
ನಿನ್ನ ಕಿರು ನಗೆಯ
ನಾನೊಮ್ಮೆ ಸೆಳೆಯಲೇ?
ನಿನ್ನ ಸನಿಹವಾ
ನಾನೊಮ್ಮೆ ಬಯಸಲೇ?
ಬಯಸಿದ ಬಯಕೆಯ
ಬಳಿ ಬಂದು ಈಡೇರಿಸು
ನೂರು ನೋವ ತಣಿಸಿ
 ಮನವ ಕುಣಿಸಿ?
ನಾವಿಕನ ಕಾಯುವಿಕೆಯಲ್ಲಿ
ದೋಣಿ ಮುಳುಗಬಹುದೇನೋ?
 ಮುಳುಗದ ದೋಣಿಯ ಕಾಯುತಿದೆ
ದಡ ಸೇರಿಸುವ ನಾವಿಕ ಬರಬಹುದೆಂದು!
                                                                   ಸಂಗ್ರಹಸೃಷ್ಟಿ 9 ‘’ ನೇ
                                                                                     
ಸೀರೆ
ನಾನು ಉಡುವೆ ಸೀರೆ
     ಬಣ್ಣಬಣ್ಣದ ಸೀರೆ
ಅಪ್ಪ ತದು ಕೊಡುವ ಸೀರೆ
ಅಮ್ಮ ಡಿಸುವ ಸೀರೆ
                    ಅಮ್ಮ ಉಡುವಳು ಸೀರೆ
                    ಸುಂದರವಾದ ಸೀರೆ
                                  ನನಗೆಲು ಮೆಚ್ಚು  ಸೀರೆ
                    ನಾನು ಇಷ್ಟಪಡುವ ಸೀರೆ
                                                                        ರಚನೆ:-ವೈಷ್ಣವಿ 9ನೇ ‘’                                         

ಒಗಟುಗಳು
1. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ
ಉತ್ತರ:- ಮಲ್ಲಿಗೆ
2. ಗಚ್ಚಿನ ಮನೆಗೆ ಸುತ್ತಲೂ ಬಾಗಿಲು ಇಲ್ಲ
ಉತ್ತರ:- ಮೊಟ್ಟೆ
3. ಹಗಲು ಹೊತ್ತು ಇರುತ್ತಾನೆಇರುಳು ಹೊತ್ತು ಕಾಣೂವುದಿಲ್ಲ
ಉತ್ತರ:- ಸೂರ್ಯ
4. ತಾಯಿ ಸೀರೆ ಮಡಚಲಾರೆತಂದೆ ರೊಕ್ಕ ಎಣಿಸಲಾರೆ
ಉತ್ತರ:-ಆಕಾಶಚುಕ್ಕಿ
5. ಕಲ್ಲು ಅರಳಿ ಹೂವಾಗಿಎಲ್ಲರಿಗೂ ಬೇಕಾಗಿದೇವರ ಶಿಖರಕ್ಕೆ ಬೆಳಕಾಗಿ
ಉತ್ತರ:- ಸುಣ್ಣ
6. ಕುಂಬಾರನಿಗೆ ಒಂದು ವರ್ಷದೊಣ್ಣೆಯ ಕೆಲಸ ಒಂದು ನಿಮಿಷ
ಉತ್ತರ:-ಗಡಿಗೆ ಚೂರು
7. ನಮ್ಮ ಜೊತೆಯಲ್ಲಿರುವ ನೆಂಟನಾರು?
ಉತ್ತರ:- ನೆರಳು
8. ಮಾನವ ಜೀವಿಸಲು ಕ್ಷಣಿಕ ಕಾಲಕ್ಕೂ ಬೇಕಾಗುವ ಮುಖ್ಯ ವಸ್ತು
ಉತ್ತರ:- ಉಸಿರು 
                                                         ಸಂಗ್ರಹಸಾಹಿತ್ಯ 8ನೇ ‘ಬಿ
ನಗೆಹನಿ
ಗುಂಡ:- ಅಜ್ಜಿ ನಿನ್ನ ಹತ್ರ ವಾಟ್ಸಾಪ್ ಇದ್ಯಾ ?
ಅಜ್ಜಿ:- ದೆಂಟಿನ ಸೊಪ್ಪುಮೆಂತ್ಯ ಸೊಪ್ಪುಪಾಲಕ್ ಸೊಪ್ಪು ಎಲ್ಲಾ ಕೇಳಿದ್ದಿನಿ.
      ಇದ್ಯಾವುದ್ಲ ಮೂದೇವಿ ವಾಟ್ಸಾಪ್ಪು ?
                            *****
ಗುಂಡ:- ಏನು ಓದಿದ್ದೀಯಾ ?
ಹುಡುಗ :- ಬಿ.ಸಿ.
ಗುಂಡ :- ಖಾಲಿ ಮೂರೇ ಅಕ್ಷರಾನ ? ಅದು ಕ್ರಮವಾಗಿ ಹೇಳೋಕ್ಕೆ ಬರೋಲ್ಲ. .
ಸರಿಯಾಗಿ ಹೇಳು .ಬಿ.ಸಿ.
                                                                       ಸಂಗ್ರಹಅಚಿಂತ್ಯ 8ನೇ ‘

ಕವನ
ಬೇಲಿ ಕಟ್ಟುತ್ತೇವೆ ನಾವು:-   
ದಲ್ಲಾಳಿ ಮಂಡಿಯಲಿ
ಸಹಕಾರಿ ಬ್ಯಾಂಕಿನಲಿ
ಚಕ್ರಬಡ್ಡಿ ಸಾಲ ತರುತ್ತೇವೆ ನಾವು
ಕರಿಮುಗಿಲ ನಂಬಿ
ಹೊಲ ಹಸನು ಮಾಡಿ
ಗೊಬ್ಬರ ಹಾಕುತ್ತೇವೆ
ಬೀಜ ಬಿತ್ತುತ್ತೇವೆ
ಬೆಳೆ ಬರಲಿಬರದಿರಲಿ
ಹೊಲಕ್ಕೆ ಬೇಲೆ ಕಟ್ಟತ್ತೇವೆ ನಾವು
                                ಸಂಗ್ರಹಮಾನಸ 8ನೇ ‘





ಪ್ರಶ್ನೆಗಳು
1)  ಭಾರತದ ರಾಷ್ಟ್ರೀಯ ಹಣ್ಣು ಯಾವುದು?
ಉತ್ತರ:- ಮಾವು
2) ನಮ್ಮ ರಾಷ್ಟ್ರೀಯ ಮರ ಯಾವುದು?
ಉತ್ತರ:- ಅರಳಿ ಮರ
3)  ನಮ್ಮ ದೇಶದ ರಾಷ್ಟ್ರೀಯ ನದಿ ಎಂದು ಯಾವುದನ್ನು ಕರೆಯುತ್ತಾರೆ?
ಉತ್ತರ:- ಗಂಗಾ ನದಿ
4)  ಭಾರತದಲ್ಲಿ ಮೊದಲು ಸ್ಥಾಪನೆಯಾದ ಚಿಟ್ಟೆ ಪಾರ್ಕ್ ಯಾವ ರಾಜ್ಯದಲ್ಲಿದೆ?
ಉತ್ತರ:- ಕೇರಳ
5) ಕನಕದಾಸರ ಅಂಕಿತ ನಾಮವೇನು?
ಉತ್ತರ:- ಕಾಗಿನೆಲೆ ಆದಿಕೇಶವ
6)  ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಸುವ ದೇಶ ಯಾವುದು?
ಉತ್ತರ:- ಬ್ರೆಜಿಲ್
7) ಯಾವ ಕ್ಷೇತ್ರದ ಸಾಧನೆಗೆ ರಾಮನಾಥ ಗೋಯೆಂಕಾ ಪ್ರಶಸ್ತಿಯನ್ನು ನೀಡಲಾಗುತ್ತದೆ?
ಉತ್ತರ:- ಪತ್ರಿಕೋದ್ಯಮ
8) ಭಾರತದ ದೇವಾಲಯದ ನಗರ ಎಂದು ಯಾವ ನಗರವನ್ನು ಕರೆಯುತ್ತಾರೆ?
ಉತ್ತರ:- ಭುವನೇಶ್ವರ
9) ಕನ್ನಡಇಂಗ್ಲೀಷ್ ನಿಘಂಟನ್ನು ಮೊದಲು ರಚಿಸಿದವರು ಯಾರು?
ಉತ್ತರ:- ಫರ್ಡಿನಾಂಡ್ ಕಿಟ್ಟೆಲ್
10)  ಕನ್ನಡ ಸಾಹಿತ್ಯ ಪರಿಷತ್ ಮೊದಲ ಅಧ್ಯಕ್ಷರು ಯಾರು?
ಉತ್ತರ:-ಹೆಚ್.ವಿನಂಜುಂಡಯ್ಯ
                                                                                 
ಸಂಗ್ರಹ:- ಖುಷಿ 8ನೇ ‘



ಒಗಟುಗಳು
• ಕಪ್ಪು ಕಂಬಳಿ ನೆಂಟ ಎಲ್ಲವನ್ನು ನಾಶ ಮಾಡೋಕೆ ಹೊಂಟ.
ಉತ್ತರ:- ಇಲಿ
• ಅಂಚಿಲ್ಲದ ಎಲೆ.
ಉತ್ತರ:- ಈರುಳ್ಳಿ
• ಒಂದು ಮನೆ ಎರಡು ಬಾಗಿಲು.
ಉತ್ತರ:- ಮೂಗು
• ನನ್ನ ಹಿಂದೆ ಮುಂದೆ ಸಾಗುತ್ತೆನಾ ನಿಂತರೆ ನಿಲ್ಲುತ್ತೆ ಕತ್ತಲಲ್ಲಿ ಕಾಣದಾಗುತ್ತದೆ ಯಾವುದು.
ಉತ್ತರ:- ನೆರಳು
• ಕೈ ಉಂಟು ಕಾಲಿಲ್ಲಕತ್ತುಂಟು ತಲೆಯಿಲ್ಲ.
ಉತ್ತರ:- ಅಂಗಿ
• ನೀಲಿ ಸಾಗರದಲ್ಲಿ  ಬೆಳ್ಳನೆಯ ಮೀನುಗಳು.
ಉತ್ತರ:- ನಕ್ಷತ್ರ
                             
 ಸಂಗ್ರಹ:- ಫಿಜಾ 10ನೇ ‘
                         
ನಗೆಹನಿ
ಹೆಂಡತಿ ಗಂಡನಿಗೆ ಮ್ಯಾಗಜಿನ್ ಕೊಡುತ್ತಾ...........
ಹೆಂಡತಿ:- ನಾವು ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು ಅಂತ  ಪುಸ್ತಕ ಹೇಳ್ತಿದೆ.
ಗಂಡ:- ನಾವು ಎಲ್ಲಿಗೂ ಪ್ರವಾಸ ಹೋಗಬಾರದು ಅಂತ ನನ್ನ ಬ್ಯಾಂಕ್ ಅಕೌಂಟ್   ಪಾಸ್ಸ್ತಕ  ಹೇಳ್ತಿದೆ.

                                             ಸಂಗ್ರಹ:- ಪ್ರಥ್ವಿ ರಾವ್ 10ನೇ ‘

ನುಡಿಮುತ್ತುಗಳು
v ಜೀವನವೆಂಬುದು ನಿನ್ನೆಯ ನೆನಪುನಾಳಿನ ಕನಸುಗಳ ಸಂಗಮ.
v ಸೌಂದರ್ಯ ನಮ್ಮ ಮುಖದ ಮೇಲಿಲ್ಲಅದು ಹೃದಯದ ಬೆಳಕಿನಲ್ಲಿದೆ.
v ಸೂರ್ಯನಂತೆ ಹೊಳೆಯಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು.
v ತಪ್ಪು ಮಾಡದೆ ಹೋದರೆ ಜೀವನದಲ್ಲಿಹೊಸದಾಗಿ ಎಂದಿಗೂ ಏನನ್ನು ಕಲಿಯಲು ಸಾಧ್ಯವಿಲ್ಲ.
v ಮನಸ್ಸು ಇದ್ದರೆ ಮಾರ್ಗ.
v ಅದ್ಭುತ ಸಂಗತಿಗಳು ತಕ್ಷಣದಲ್ಲಿ ಘಟಿಸುವುದಿಲ್ಲಅದಕ್ಕಾಗಿ ತಾಳ್ಮೆಯಿಂದ ಕಾಯುವ ಮನಸಿರಬೇಕು.
v ಪ್ರೀತಿಯನ್ನು ‘ ಗುರಿ’ ಎಂದು ಭಾವಿಸಿದವರಿಗೆ  ಜೀವನ ಎಂಬುದು ‘ಪ್ರಯಾಣ’ ವಾಗಿರುತ್ತದೆ.
v ಪ್ರೀತಿಸುವುದು ಎಂದರೆ ಒಬ್ಬರು ಇನ್ನೋಬ್ಬರನ್ನು ಮುಕ್ತವಾಗಿಸುವುದು.
v ಕ್ರೂರ ಪರಿಸ್ಥತಿಗಳ ಮಧ್ಯೆ ಮೃದು ಹೃದಯ ಹೊಂದಿರುವುದು ದೌರ್ಬಲ್ಯವಲ್ಲ ಅದುವೇ ನಿಜವಾದ ಧೈರ್ಯ.
v ನಮಗೆ  ಪ್ರಕೃತಿ ಎರಡು ಕೈ ಕೊಟ್ಟಿದೆಒಂದು ಕೆಲಸಗಳನ್ನು ಮಾಡುವುದಕ್ಕೆಇನೊಂದು ತರರಿಗೆ ಸಹಾಯ ಮಾಡುವುದಕ್ಕೆ.
                                   
ಸಂಗ್ರಹ:- ಐಶ್ವರ್ಯ 9ನೇ ‘ಬಿ

ಕವನ
ಲಕ್ಸ್ ಸೋಪುಡ್ ಪರಿಮಾಳ ಜಾಸ್ತಿ,
ಕಾಯಿ ಕುಕ್ಕುಡ್ ಸೂನೆ ಜಾಸ್ತಿ,
ಲತ್ ಮುಂಚಿಡ್ ಕಾರ ಜಾಸ್ತಿ,
ಅಂಚನೆ ನಿನ್ನ ಮಿತ್ ಪ್ರೀತಿ ಜಾಸ್ತಿ.
                                         ಸಂಗ್ರಹ:- ಐಶ್ವರ್ಯ 9ನೇ ‘ಬಿ
ಭಕ್ತಿ ಪಥ
ಶಿವ ಶಿವ ಎಂದು ಜನಿಸುವರು ಒಂದು ದಿನ
ಪರ ಜನರ ನಿಂದಿಸಿ ಕಳೆವರು ಕಲವ ಪ್ರತಿದಿನ
ಬಂದಿತೇನು ಇದರಿಂದ ಫಲ ಅರಿತಿಲ್ಲ  ಜನ
ಅರಿತಿದ್ದರೆ ಇರುತಿರಲಿಲ್ಲ  ದೇವನ
ಮರುಕ್ಷಣ ಮರೆವರು  ದೇವಿ ಸಂಭೂತನ
ಒಂದಷ್ಟು ಭಕ್ತಿ ಒಂದಷ್ಟು ಪ್ರೀತಿ ಇಟ್ಟರೆ ಆನನಲ್ಲಿ
ಪ್ರತಿದಿವೂ ಆಗುವುದು ಉಕ್ಕøಷ್ಟ ರಾತ್ರಿ
ಅದೇ ಮಹಾ ಶವರಾತ್ರಿ.
                                          ರಚನೆ:- ಸುಧೀಕ್ಷಾ 8ನೇ ‘

ಒಗಟುಗಳು
1. ಸಾಲು ಸಾಲು ಹಕ್ಕಿ ಸಾವಿರಾರು ಹಕ್ಕಿಕೆಂಡ ಕಂಡರೆ ಬಾಯಿ ಬಿಡೋ ಹಕ್ಕಿ
ಉತ್ತರ:- ಮುಸುಕಿನ ಜೋಳ
2. ಸುದ್ದಿ ಸೂರಪ್ಪ ದೇಶವೆಲ್ಲ ಸುತ್ತಾಡ್ತಾನೆ,
ಜನರನ್ನು ಅಳಸ್ತಾನೆಇಲ್ಲವೇ ನನಗಸ್ತಾನೆಅವನ ಕಿಮ್ಮತ್ತು ಒಂದು ಹಿಡಿ
ಚುರುಮುರಿಯಷ್ಟು ಇಲ್ಲ
ಉತ್ತರ:-ಪೋಷ್ಟ್ ಕಾರ್ಡ್
3. ಸುಟ್ಟಮೋರೆ ಅಜ್ಜಿಎಣ್ಣೆ ಸವರಿಕೊಂಡು  ಬೆಂಕಿ ಕಾಯ್ತಾಳೆ
ಉತ್ತರ:- ದೋಸೆ ಕಾವಲಿ
                                             ಸಂಗ್ರಹ:- ಸುಜನ್ಯ 10 ನೇ ‘

ಹನಿ ಹನಿ ಹಾಸ್ಯ
ಕೊಡುಗೆ :-
ಕನ್ನಡಕ್ಕೆ ಕನ್ನಡಿಗರು
ಅಂಢದ್ದೇನು ಕೊಟದಟಿಲ್ಲ
ನಿಜವಾಗಿ ಕೊಟ್ಟಿದ್ದು
ಆರ್ಮನಿಯ ಕಿಟ್ಟಲ್ಲ.
ಹೊಸ ಗಾದೆ :-
ಚಳಿಗಾಲ ಎಂದರೆ ವಿಂಟರು
ಬೇಸಿಗೆ ಬಂದರೆ ನೆಂಟರು.
ಬೇಸಿಗೆ :-
ಈಗ ಬೇಸಿಗೆ
ದಪ್ಪದ ಹಾಸಿಗೆ
ಬೇದವಂತೆ ಅವರಿಗೆ
ಆದ್ದರಿಂದ
ಮಡದಿಯನ್ನು ತವರಿಗೆ !
ವ್ಯತ್ಯಾಸ :-
ಹೊದ್ದು ಮಲಗುವುದು
ಚಾದರ
ಕದ್ದು ಮಲಗುವುದು
ಹಾದರ !
ರಾಶಿ :-
ಅವಳದ್ದು ಸಿಂಹ ರಾಶ
ಅವನದ್ದು ಮೇಷ ರಾಶಿ
ಮಕ್ಕಳಿಗೆ ಮೈ ತುಂಬ
ಕೇಶ ರಾಶಿ !
ಕಾವೇರಿ ವಿವಾದ :-
ಕಾವೇರಿ
ವಿವಾದಕ್ಕೆ ಕಾರಣ
ನಾವೇರಿ.

ಹೊಸ ಗಾದೆ :-
ತಿಂಗಳ ಮೊದಲಲ್ಲಿ Sಂಐಂಖಙ
ತಿಂಗಳ ಕೊನೆಯಲ್ಲಿ ಸಾಲ-ರೀ !
                                   
 ಸಂಗ್ರಹ:- ಪ್ರಾರ್ಥನಾ 8ನೇ ‘

ನಗೆಹನಿ
ನೋವು-ಖುಷಿ
ಟೀಚರ್:- ನೋವು ಮತ್ತು ಖುಷಿ ನೀಡುವ ಒಂದು ವಸ್ತುವಿನ ಉದಾಹರಣೆ ಕೊಡಿ.
ಎಂಕ:- ಶಾಲೆ ಗಂಟೆ.
ಟೀಚರ್:- ಅದ್ಹೇಗೋ ?
ಎಂಕ:- ಮುಂಜಾನೆ ಪ್ರಾರ್ಥನೆ ಗಂಟೆ ಹೊಡೆದಾಗ ನೋವಾಗುತ್ತದೆ ಅದೇ ಸಂಜೆ ಬಾರಿಸಿದಾಗ ಖುಷಿಯಾಗುತ್ತದೆ.

ಟೀಚರ್:- ನಿಮ್ಮ ಮಗನಿಗೆ ಟಿವಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ತೋರಿಸಬೇಡಿ.ಪೋಷಕರು:- ಯಾಕೆ ಟೀಚರ್?
ಟೀಚರ್:- ನಿಮ್ಮ ಅಪ್ಪ ಯಾರು ಅಂತ ಕೇಳೀದ್ರೆ 4 ಆಯ್ಕೆಗಳನ್ನು ಕೊಡಿ ಅಂತಾನೆ.
ಅಮ್ಮಿ:- ಸದಾ ಚಿಕ್ಕವಳಾಗಿ ಕಾಣಿಸಬೇಕಾದರೆ ಏನು ಮಾಡಬೇಕು?
ಪಮ್ಮಿ:- ಸದಾ ಮುದುಕಿಯರ ಜೊತೆಯಲ್ಲಿಯೇ ಇರಬೇಕು.     
ಸಂಗ್ರಹಚೈತ್ರಶ್ರೀ 8ನೇ ‘
                       
ಗಾದೆಗಳು
1. ಮಾತು ಬೆಳ್ಳಿ ಮೌನ ಬಂಗಾರ.
2. ಕೈ ಕೆಸರಾದರೆ ಬಾಯಿ ಮೊಸರು.
3. ಮಾತು ಬಲ್ಲವನಿಗೆ ಜಗಳವಿಲ್ಲ.
4. ಮನಸ್ಸು ಇದ್ದರೆ ಮಾರ್ಗ.
5. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ.
6. ಒಗ್ಗಟ್ಟಿನಲ್ಲಿ ಬಲವಿದೆ.
7. ಹಸಿರೇ ಉಸಿರು.
8. ಅತಿಯಾಸೆ ಗತಿಗೇಡು.
9. ಕಸ್ತೂರಿಯ ಪರಿಮಳ ಕತ್ತೆಗೇನು ಗೊತ್ತು.
10. ಪ್ರೀತಿಯಿಂದ ಮಾಡಿದ ಕೆಲಸ ಶ್ರಮ ಎನಿಸದು.
11. ನಾಲಿಗೆ ಒಳ್ಳೆದಾದರೂ ನಾಡೆಲ್ಲ ಒಳ್ಳೆಯದು.
12. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
                                   
ಸಂಗ್ರಹ:-ಮೋನಿಷಾ 9ನೇ ‘
ರಸ ಪ್ರಶ್ನೆ
• ಕರ್ನಾಟಕದಲ್ಲಿರುವ ಸಹಕಾರಿ ಬ್ಯಾಂಕುಗಳು ಎಷ್ಟು?
ಉತ್ತರ:- 302
• ಕರ್ನಾಟಕ ರಾಜ್ಯದಲ್ಲಿರು ಗ್ರಾಮಗಳ ಸಂಖ್ಯೆ ಎಷ್ಟು?
ಉತ್ತರ:- 57 ಸಾವಿರ
• ಕರ್ನಾಟಕದಲ್ಲಿರುವ ಗ್ರಾಮ ಪಂಚಾಯ್ತಿಗಳು ಎಷ್ಟು?
ಉತ್ತರ:- 5700
• “ಜ್ಞಾನ ಭಾರತಿ” ಯಾವ ವಿಶ್ವವಿದ್ಯಾನಿಲಯದ ಹೆಸರು?
ಉತ್ತರ:- ಬೆಂಗಳೂರು ವಿ.ವಿ.
• ಕರ್ನಾಟಕದಲ್ಲಿರುವ ಬಿಸಿನೀರಿನ ಬಗ್ಗೆ ಇರುವ ಗ್ರಾಮ ಯಾವುದು?
ಉತ್ತರ:- ಇರ್ದ್ ಗ್ರಾಮ
• ಬಿಜಾಪುರದ ಗೋಳಮಟ್ಟದ ವ್ಯಾಸ ಎಷ್ಟು?
ಉತ್ತರ:- 114 ಅಡಿ
• ‘ಫಿಷರೀಸ್’ ಕಾಲೇಜು ಇರುವುದು ಎಲ್ಲಿ?
ಉತ್ತರ:- ಮಂಗಳೂರು
• ಬೆಂಗಳೂರಿನಲ್ಲಿರುವ ಪ್ರಸಿದ್ಧ ವಿಜ್ಞಾನ ಸಂಸ್ಥೆ ಯಾವುದು?
ಉತ್ತರ:- ಭಾರತೀಯ ವಿಜ್ಞಾನ ಸಂಸ್ಥೆ
• ಕುವೆಂಪು ವಿಶ್ವವಿದ್ಯಾಲಯ ಇರುವುದು ಎಲ್ಲಿ?
ಉತ್ತರ:- ಶಿವಮೊಗ್ಗ ಜಿಲ್ಲೆಯ ಬಿಆರ್ಪ್ರಾಜೆಕ್ಟ್
• ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ರಿಜಿಸ್ಟ್ರಾರ್ ಯಾರು?
ಉತ್ತರ:- ಕೆ.ಕೆ.ಪೈ
                         ಸಂಗ್ರಹರಕ್ಷತಾ 8ನೇ ‘
     ನಕ್ಕು ಬಿಡಿ
   ಟೀಚರ್:- ನಿನ್ ಹೆಸರೇನು?
   ಸ್ಟೂಡೆಂಟ್:- ಚರಣ.ಡಿ
   ಟೀಚರ್:- ಏಯ್ ಇಡಿಯೇಟ್ ಹೆಸ್ರು ಕೇಳಿದ್ರೆ ನಟಕ ಆಡ್ತೀಯ......
   ಸ್ಟೂಡೆಂಟ್:- ಎಷ್ಟ್ ಸಲ ಕೇಳಿದ್ರು ನನ್ ಹೆಸ್ರು ಚರಣ್.ಡಿ .
   ಟೀಚರ್:- ನೀನು ಯಾರ್ ಮಗ....??
   ಸ್ಟೂಡೆಂಟ್:- ವಿಶ್ವ ಸುಂದರಿಯ ಮಗ.
   ಟೀಚರ್:- ಏನ್ ತಮಾಷೆ ಮಾಡ್ತಿಯಾ....
   ಸ್ಟೂಡೆಂಟ್:- ಇಲ್ಲ ಟೀಚರ್ನನ್ ಅಪ್ಪ ವಶ್ವತಾಯಿ ಸುಂದರಿ
                                                 ಸಂಗ್ರಹಅರವಿಂದ 8ನೇ ‘


ಕ್ವಿಜ್
• 2004 ಒಲಂಪಿಕ್ ಕ್ರೀಡೆಗಳಲ್ಲಿ ಭಾರತ ಹಾಕಿ ತಂಡ ಎಷ್ಟನೇ ಸ್ಥಾನ ಪಡೆಯಿತು?
ಉತ್ತರ:- ಏಳನೇ ಸ್ಥಾನ
• ಆದುನಿಕ ಒಲಂಪಿಕ್ಸ್ ಕ್ರೀಡೆಗಳ ಪಿತಾಮಹ ಯಾರು?   ಉತ್ತರ:- ಬ್ಯಾರೆನ್ ಪಿರ್ರೀ ಡಿಕೂರ್ಟಿನ್
• ಒಲಂಪಿಕ್ ಧ್ವಜದ ಹಿನ್ನಲೆ ಬಣ್ಣ ಯಾವುದು?        ಉತ್ತರ:- ಬಿಳಿ
• ಕರಾಟೆಯ ಮೂಲ ಯಾವುದು?                 ಉತ್ತರ:- ಜಪಾನ್
• ಕೀನನ್ ಕ್ರೀಡಾಂಗಣ ಎಲ್ಲಿದೆ?                   ಉತ್ತರ:- ಜೇಮ್ ಷಡ್ಪುರ
• ಲಾಲ ಬಹಾದ್ದೂರ್ ಕ್ರೀಡಾಂಗಣ ಎಲ್ಲಿದೆ?          ಉತ್ತರ:- ಹೈದರಾಬಾದ್
• ಜವಾಹರಲಾಲ್ ನೆಹರು ಕ್ರೀಡಾಂಗಣ ಎಲ್ಲಿದೆ?       ಉತ್ತರ:- ನವ ದೆಹಲಿ
• ವಲ್ಲಭಬಾಯಿ ಪಟೇಲ್ ಕ್ರೀಡಾಂಗಣ ಎಲ್ಲಿದೆ?       ಉತ್ತರ:- ಅಹಮದಾಬಾದ್
• ಯದ ವೀಂದ್ರ ಟ್ರೋಫಿ ಯಾವ ಸ್ಪರ್ಧೆಗೆ ಸಂಬಂಧಿಸಿದೆಉತ್ತರ:- ಹಾಕಿ
                   
ಸಂಗ್ರಹಶಾನ್ವಾಜ್ 10ನೇ ‘ಬಿ
ಚೆಲುವು ಚಿಗಿಸುವ ದೀಪ
ಕಾವ್ಯ ಕಣ್ಣ ಹೂಗಳಲ್ಲಿ
ಚೆಲುವು ಚಿಗಿಸು ದೀಪವೇ
ಚೆಲುವಿಗಿನಿತು ಒಲವನಿಟ್ಟು
ಬಲವ ಬಲಿಸು ದೀಪವೇ

                     ಕಾವ್ಯದೆದೆಯ ಪ್ರಾಣದೊಳಗೆ
                     ತ್ರಾಣವಾಗು ದೀಪವೇ
                     ಲಬ್ಧ ಶಬ್ದದಾಟದಲ್ಲಿ
                     ಕರುಣೆ  ಕುಣಿಸು ದೀಪವೇ

ಕಾವ್ಯ ಕುಂಚದಂಚಿನೆಳೆಗೆ
ಬಣ್ಣವಾಗು ದೀಪವೇ
ನೋಡಿದಕ್ಷಿ ಮರೆಯದಂಥ
ಚಿತ್ರವಾಗು ದೀಪವೇ

                     ಕಾವ್ಯ ಹಾವಭಾವದಲ್ಲಿ
                     ಬನಿಯನಿರಿಸುವ ದೀಪವೇ
                     ಅಣುವಿಣುವಿನಲ್ಲೂ ಬನಿಯ
                     ತನಿಯನುಳಿಸು ದೀಪವೇ
                                 
 ಸಂಗ್ರಹಸ್ವೀನಿ ನಿಶಾಲ್ ಮಿನೇಜಸ್10 ನೇ ‘ಬಿ
   
ರಸಪ್ರಶ್ನೆ
1. ಕರ್ನಾಟಕ ರಾಜ್ಯದ ವಿಚಾರ ಯಾವ ಪ್ರಾಚೀನ ಕಾವ್ಯದಲ್ಲಿ ಬರುತ್ತದೆ?
                       ಉತ್ತರ:- ಮಹಾಭಾರತ ಕಾವ್ಯದಲ್ಲಿ
2. ಪ್ರಾಚೀನ ಕಾಲದಲ್ಲಿ ಕಾಲದಲ್ಲಿ ಕರ್ನಟಕಕ್ಕೆ ಯಾವ ಹೆಸರಿತ್ತು
             ಉತ್ತರ:- ಕರುನಾಡು
3. ಪಾಂಡವರು ತಮ್ಮ ಅಜ್ಞಾತವನ್ನು ಎಲ್ಲಿ ಕಳೆದರು?
             ಉತ್ತರ:- ಕರ್ನಾಟಕದಲ್ಲಿ
4. ತ್ರೇತಾಯುಗದಲ್ಲಿ ಶಬರಿ ವಾಸವಾಗಿದ್ದ ಕರ್ನಾಟಕದ ಸ್ಥಳ ಯಾವುದು?
            ಉತ್ತರ:- ಹಂಪೆ                                                           
5. ತ್ರೇತಾಯುಗದಲ್ಲಿ ಆಂಜನೇಯನು ಜನಿಸಿದ ಸ್ಥಳ ಯಾವುದು?
          ಉತ್ತರ:- ಕರ್ನಾಟಕದ ಅಂಜನಾದ್ರಿ
6. ಕರ್ನಾಟಕದಲ್ಲಿ ಕೋಟಿಲಿಂಗಗಳ ದರ್ಶನ ಭಾಗ್ಯ ಎಲ್ಲಿ ಸಿಗುತ್ತದೆ?
          ಉತ್ತರ:- ಕೋಲಾರ ಜಿಲ್ಲೆ ಕಮ್ಮಸಂದ್ರ
7. ಮೂಕಾಸುರನೆಂಬ ರಾಕ್ಷಸನು ವಾಸಿಸುತ್ತಿದ್ದ ಪ್ರದೇಶ ಯಾವುದು?
          ಉತ್ತರ:- ಕೊಲ್ಲುರು
8. ಭಸ್ಮಸುರನನ್ನು ಶ್ರೀ ವಿಷ್ಣುವು ಭಸ್ಮ ಮಾಡಿದ ಸ್ಥಳ ಯಾವುದು?
           ಉತ್ತರ:- ಕರ್ನಾಟಕದಲ್ಲಿ
9. ರಾಮಾಯಣದ ಕಾಲದಲ್ಲಿ ಹಂಪೆ ಯಾವ ಹೆಸರನ್ನು ಪಡೆದಿತ್ತು?
          ಉತ್ತರ:-ಕಿಷ್ಕಿಂದ
10. ಗೋಕರ್ಣ ಕ್ಷೇತ್ರವು  ಏನೆಂದು ಪ್ರಸಿದ್ಧಿಯಾಗಿದೆ?
          ಉತ್ತರ:- ಭೂ ಕೈಲಾಸ
                                   ಸಂಗ್ರಹರಕ್ಷಿತ 8ನೇ ‘’   
ನಗೆಹನಿಗಳು
1.  ಸರ್ದಾರ್ಜಿ:- ಮೇ  ಕಮಿನ್ ಸರ್.
   ಸಂದರ್ಶಕ:- ವೇಯ್ಟ್ ಪ್ಲೀಸ್.
   ಸರ್ದಾರ್ಜಿ:- 75 ಕೆ.ಜಿಸರ್.
1. ಭಕ್ತ:- ಹೆಂಡತಿ ಕಾಟದಿಂದ ತಪ್ಪಿಸಿಕೊಳ್ಳಲು ಏನಾದರೂ ಉಪಾಯಕೊಡಿ.
   ಸನ್ಯಾಸಿ:- ನನಗೆ ಉಪಾಯ ಗೊತ್ತಿದ್ದರೆ ನಾನ್ಯಾಕೆ ಸನ್ಯಾಸಿ ಆಗಿದ್ದೆ.
2. ಟೀಚರ್:- ನಿಮ್ಮ ಮಗನಿಗೆ ಟಿವಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ತೋರಿಬೇಡಿ.
   ಪೋಷಕರು:- ಯಾಕೆ.
   ಟೀಚರ್:- ನಿಮ್ಮ ಅಮ್ಮ ಯಾರು ಅಂತ ಕೇಳಿದ್ರೆ 4 ಆಯ್ಕೆ ಕೊಡಿ ಅಂತಾನೆ.
                                          ರಚನೆಹರ್ಷಿತ್ 8ನೇ ‘ಬಿ’   
                   ಅರ್ಥ ಸಹಿತ ಗಾದೆಗಳು
1. ತಗ್ಗಿದ್ದಲ್ಲಿ ನೀರು ನಿಲ್ಲುವುದು:-
ಲಕ್ಷ್ಮಿ ಹಣವಂತರ ಮನೆಯಲ್ಲಿಯೇ ಓಡಾಡಿಕೊಂರುತ್ತಾಳಂತೆದುಡ್ಡಿದ್ದವರಿಗೆ ದುಡ್ಡು ಸೇರುತ್ತದೆಹಳ್ಳವಿದ್ದಲ್ಲಿ ನೀರು ತುಂಬಿಕೊಳ್ಳುವುದು.
2. ಗುಣ ನೋಡಿ ಗೆಳತನ ಮಾಡು:-
ಸ್ನೇಹ ಮಾಡಬೇಕು ನಿಜಆದರೆ  ಮತಿ ಕೆಡಿಸಿದರೆ ! ಸ್ನೇಹತನ ಸ್ವಭಾವ ಗುಣಗಳನ್ನು ತಿಳಿದು ಸಂಗ ಮಾದಬೇಕು.
3. ಆಗೋದೆಲ್ಲ ಒಳ್ಳೆದಕ್ಕೆ:-
ನಿರುದ್ಯೋಗಗಂಡೇ ಸಿಕ್ಕದಿರುವುದು ಮುಂತಾದ ಕಷ್ಟಗಳು ಎದುರಾಗುತ್ತವೆಎಂದೋ ಸರಿ ಹೋಗುತ್ತವೆಒಳ್ಳೆ ಕಾಲ ಬರುತ್ತದೆಆಪತ್ತು ಕಳೆಯುತ್ತದೆ ಬಳಿಕ ಆದದೇಲ್ಲ ಒಳ್ಳೆದಕ್ಕೆ ಎಂಬ ಮಾತಾಡುತ್ತೇವೆಕಷ್ಟದ ದಿನಗಳು ಕಳೆಯುವುದೂ ಕಷ್ಟವೇ.
4. ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ:-
ಮಕ್ಕಳು ಚಿಕ್ಕವರಿರುವಾಗಲೇ ತಂದೆ-ತಾಯಿಗಳು ಅವರಿಗೆ ಒಳ್ಳೆಯ ಬುದ್ಧಿಯನ್ನು ಕಲಿಸಿದರೆ ಅವರು ಕೊನೆಯವರೆಗೂ ಒಳ್ಳೆಯವರಾಗಿಯೇ ಇರುತ್ತಾರೆಚಿಕ್ಕಂದಿನಿಂದಲೇ ಮಕ್ಕಳು ದುರ್ಗುಗುಣಗಳ ದಾಸರಾದರೆ ಅದು ಸಾಯುವವರೆಗೂ ಬದಲಗುವುದೇ ಇಲ್ಲವೆಂದು  ಗಾದೆ ತಿಳಿಸುತ್ತದೆ.
5. ಆನೆ ಭಾರ ಆನೆಗೆಕುದುರೆ ಭಾರ ಕುದುರೆಗೆ:-
ಇಲ್ಲಿಯೂ ತಾರತಮ್ಯವನ್ನು ಗುರುತಿಸಬಹುದುಆನೆಗೆ ಆನೆಯಷ್ಟು ಭಾರ ಇದ್ದರೆ ಕುದುರೆಗೆ ಕುದುರೆಯಷ್ಟು ಭಾರ ಇದ್ದೇ ಇರುತ್ತದೆಹೋಲಿಕೆ ಇಲ್ಲ.

ಸಂಗ್ರಹ:ಸಿಂಚನಾ 8ನೇ ‘
               
ರಸಾಯನ ಶಾಸ್ತ್ರ ಕ್ವಿಜ್
• ಅರಿವಳಿಕೆಯ ಕ್ಲೋರೋಫಾರ್ಮ್ ತಯಾರಿಕೆಯ ಆರಂಭದ ಹೆಜ್ಜೆಯೆಂದರೆ?
ಉತ್ತರ:- ಅಸಿಟೋನ್
• ಜಿಂಕ್ ಆಕ್ಸೈಡ್ ಬಳಕೆಯಾಗುವುದು ಯಾವಾಗ?
ಉತ್ತರ:- ಬಿಳಿಯ ಬಣ್ಣಕ್ಕೆ
• ವಜ್ರಕ್ಕಿಂತ ಗಟ್ಟಿಯಾದ ಕೃತಕ ಪದಾರ್ಥಯಾವುದು?
ಉತ್ತರ:- ಬೋರಾಜಾನ್ (ಬೋರಾನ್ ನೈಟ್ರೈಡ್)
• ಭೂಮಿಯ ಮೇಲ್ಪದರಗಳಲ್ಲಿ ಬಳಸುವ ಜಡದಾತು ಯಾವುದು?
ಉತ್ತರ:- ಅಲ್ಯೂಮಿನಿಯಂ
• ಗಾಳಿಬಲೂನುಗಳಲ್ಲಿ ಬಳಸುವ ಜಡದಾತು ಯಾವುದು?
                                  ಉತ್ತರ:- ಹೀಲಿಯಂ
• ತಲೆಗೂದಲುಬೆರಳುಉಗುರುಗಳು ಮತ್ತು ಗೋರಸುಗಳು ಆಗಿರುವುದು?
ಉತ್ತರ:- ಪ್ರೋಟೀನುಗಳಿಂದ
• ಆಮ್ಲಗಳು ಯಾವುದನ್ನು ರೂಪಿಸಲು ಪ್ರತ್ಯಾಮ್ಲಗಳೊಂದಿಗೆ ಒಟ್ಟು ಗೂಡುತ್ತವೆ?
ಉತ್ತರ:- ಲವಣ ಮತ್ತು ನೀರು
• ಎರಡು ಅಥವಾ ಹೆಚ್ಚು ಪರಮಾಣುಗಳ ನಡುವಿನ ಕೊಂಡಿಕೆಯನ್ನು ಕರೆಯುವುದು?
ಉತ್ತರ:- ಬಂಧ
• ನೀರು ಹಿಗಿದ್ದಾಗ ಸಬುನು ನೊರೆಯನ್ನು ರೂಪಿಸುವುದು ಕಷದಟ?
ಉತ್ತರ:- ಗಡುಸು
• ಗ್ಲೈಕಲ್ಕರಿನ ರೇಡಿಯೇಟರುಗಳಲ್ಲಿ ಬಳಕೆಯಾಗುವುದು?
ಉತ್ತರ:- ಒಂದು ಗನಿಕರಣರೋಧಕ ಕಾರಕವಾಗಿ
• ಇಮಗಾಲದ ಮನಕ್ಸೈಡಿನ ಅತ್ಯಂತ ಶುದ್ಧ ರೂಪವನ್ನು ಯಾವುದರಿಂದ ಪಡೆಯಬಹುದು?
ಉತ್ತರ:- ನಿಕಲ್ ಟೆಟ್ರ ಕಾರ್ಬೊನೈಲ್
• ಕ್ಯಾಲ್ಸಿಯಂ ಮೆಗ್ನೀಷಿಯಂ ಸಿಲಿ ಕೇಟಿನ ಬಣ್ಣ ಯಾವುದು?
ಉತ್ತರ:- ಕಲ್ನಾರು
                                         ಸಂಗ್ರಹಅನನ್ಯ .ಎಂ 8ನೇ ‘ಬಿ
ಜನರಲ್ನೊಲೆಡ್ಜ್ ಕ್ವಿಜ್
• ಕರಟೆಯನ್ನು ಕಲಿಸುವ ಅಧ್ಯಾಪಕರನ್ನು ಏನೆಂದು ಕರೆಯುತ್ತರೆ?
ಉತ್ತರ:- ಸೆನ್ಸಿ
• ಭಾರತದ ಪ್ರಥಮ ಮುಸ್ಲಿಂ ರಾಷ್ಟ್ರಪತಿ ಯರು?
ಉತ್ತರ:- ಜಾಕೀರ್ ಹುಸೆನ್
• ಸೊನೆ ಕಂಡು ಹಿಡಿದ ರಷ್ಟ್ರ ಯವುದು?
ಉತ್ತರ;- ಭಾರತ
• ಧೂಮಕೇತುಗಳೆಂದರೆ ಏನು?
ಉತ್ತರ:- ಬಾಲಗಳುಳ್ಳ ನಕ್ಷತ್ರಗಳು
• ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ ಯಾವುದು?
ಉತ್ತರ:- ಬಿದಿರು
• ಒಂದೇ ಕಣ್ಣಿನಿಂದ ನಿದ್ರಿಸುವ ಪ್ರಾಣಿ ಯಾವುದು?
ಉತ್ತರ:- ಡಾಲ್ಫೀನ್
• ಆಹಾರ ಕದಿಯುವ ಹಕ್ಕಿ ಯಾವುದು?
ಉತ್ತರ:- ಸ್ಕುವಾ
• ಕಣ್ಣೀರು ಒರಸುವ ಗ್ರಂಥಿ ಯಾವುದು?
ಉತ್ತರ:- ಲಾಕ್ರಿಮಲ್ ಗ್ರಾಂಥಿ
• ಜಿ.ವಿ.ಅಯಂಗಾರ್ನವರ ಮೊದಲ ಚಿತ್ರ ಯಾವುದು?
ಉತ್ತರ:- ರಾಧಾರಮಣ
• ಕನ್ನಡದ ಆದಿ ಕವಿ ಯಾರು & ಅಂಧಕವಿ ಯಾರು?
ಉತ್ತರ:- ಪಂಪ & ಸೂರ್ದಾಸ್
• ಟೇಬಲ್ ಟೆನ್ನಿಸ್ ಮೊದಲು ಆಡಿದೆಲ್ಲಿ?
ಉತ್ತರ:- ಇಂಗ್ಲೇಂಡ್
• ಯಾವ ಹಣ್ಣಿಗೆ ಬೀಜ ಇರುವುದಿಲ್ಲ?
ಉತ್ತರ:- ಅನಾನಸ್
ಸಂಗ್ರಹಅಂಜು ತ್ರಿಶಿಯಾ ಪಿ.ಎಮ್, 8ನೇ ‘ಬಿ’                                                                                                                                                                                                                                                                       
ಗಾದೆಮಾತುಗಳು
• ವದಿಯ ಕೂಡ ವಾದಿಸಲಸಾಧ್ಯಕುಂಟನಕೂಡ ನಡೆಯಲಸಧ್ಯಾ.
• ವಿಷ ಒಬ್ಬನನ್ನು ಕೊಂದರೆಸಾಲ ವಂಶವನ್ನೇ ಕೊಲ್ಲುತ್ತೆ.
• ವೇಷದಿಂದ ಇಂದ್ರ ಕೆಟ್ಟದ್ವೇಷದಿಂದ ಕೌರವ ಕೆಟ್ಟ.
• ವೈದ್ಯ ಹೇಳಿದೇ ರೋಗಭಾಗವತ ಹಾಡಿದ್ದೇ ರಾಗ.
• ಶ್ರೀಗಂಧದ ಕೊರಡು ತೀದಷ್ಟು ಪರಿಮಳ.
• ಶೆಟ್ಟಿ ಶೃಂಗಾರ ಆಗೋ ಹೊತ್ತಿಗೆ ಪಟ್ಟಣ ಹಾಲಾಯಿತು.
• ಸತ್ಯಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
• ಹನುಮಂತರಾಯ ಹಗ್ಗ ಕಡೀವಗ ಪೂಜರಿ ಶಾವಿಗೆ ಕೇಳ್ದ.
• ಹಂದಿಗೆ ಹಲವು ಮರಿಸಿಂಹಕ್ಕೆ ಒಂದೇ ಮರಿ.
• ಹತ್ತು ಮಾದಿ ಮಾತು ಮೀರಬೇಡದೇವರ ಮುಂದೆ ಸುಳ್ಳಾಡಬೇಡ.
• ಕೈ ಕೆಸರಾದರೆ ಬಾಯಿ ಮೊಸರು.
• ಹಾಸಿಗೆ ಇದ್ದಷ್ಟು ಕಾಲು ಚಾಚು.
• ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು.
• ಉಪ್ಪಿಗಿಂತ ರುಚಿ ಇಲ್ಲ ; ತಾಯಿಗಿಂತ ಬಂಧುವಿಲ್ಲ.
• ಹಿತ್ತಲಗಿಡ ಮದ್ದಲ್ಲ.
• ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.
• ಕುಂಬಾರನಿಗೆ ವರುಷ ದಿಣ್ಣೆಗೆ ನಿಮಿಷ.
• ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.

                                      ಸಂಗ್ರಹಸಾನಿಧ್ಯ ಶಟ್ಟಿ 8ನೇ ‘ಬಿ


ಗಾದೆಗಳು
• ಕೈ ಕೆಸರಾದರೆ ಬಾಯಿ ಮೊಸರು.
• ಅಡಿಕೆ ಕದ್ದರೂ ಕಳ್ಳಆನೆ ಕದ್ದರೂಕಳ್ಳ.
• ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ.
• ತುಂಬಿದ ಕೊಡ ತುಳುಕುವುದಿಲ್ಲ.
• ಮಕ್ಕಳಿಗಾಗಿ ಆಸ್ತಿ ಮಾಡಬೇಡಿಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ.
• ಒಪ್ಪಿಗಿಂತ ರುಚಿಯಿಲ್ಲ ; ತಾಯಿಗಿಂತ ಬಂಧುವಲ್ಲ.
• ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
• ವೇದ ಸುಳ್ಳಾದರೂಗಾದೆ ಸುಳ್ಳಾಗದು.
• ಪ್ರೀತಿಯಿಂದ ಮಾಡಿದ ಕೆಲಸ ಶ್ರಮ ಎನಿಸದು.
• ವಿದ್ಯೆಗೆ ವಿನಯವೇ ಭೂಷಣ.
• ಮನೆಯೇ ಮೊದಲ ಪಾಠ ಶಾಲೆತಾಯಿಯೇ ಮೊದಲ ಗುರು.
• ಎರಡು ಕೈ ಸೇರಿದರೆ ಚಪ್ಪಾಳೆ.
• ಬೆಳ್ಳಗಿರುವುದೆಲ್ಲಾ ಹಾಲಲ್ಲ.                               
ಸಂಗ್ರಹಶೃದ್ಧಾ.ಎಸ್.ಶೆಟ್ಟಿ 9ನೇ ‘
ಶೃತಿ ಗಾನ
ಮೋಡಗಳು ಮುಸುಕಿದ
ಕೊರಳ ತಂತಿಗಳು
ಮಿಡಿಸಿದೆ ನವ ಶೃತಿ
ಸ್ವರ ಕೂಡಿ ಗಾನ
ಜೀವಗಳ ದನಿಯ
ಧಗೆಯನು ಆರಿಸಿದೆ
ವೀಣೆಯ ಜೊತೆ ಮಾಡಿದ
ಜಡಿ ಮಳೆಯ ಸ್ನಾನ !
ನದಿ
ಸಪ್ತ ಸರೋವರಕ್ಕೆ
ನೂರಾರು ಊರುಗಳಿಗೆ
ತನ್ನ ತನುವಿಂದ ಜೀವವನ್ನು
ನೀಡುತ್ತಿದೆ ಒಂದು ನದಿ
ಹಸಿರ ದಡಗಳು
ಉದರದ ಸೇತುವೆಗಳು
ಕುರುಡು ತುಡಿತಕ್ಕೆ ಅದನ್ನು
ತಿರುಗಿಸುವುದು ಎಷ್ಟು ಸರಿ?
ಸಂಗ್ರಹರಕ್ಷಿತಾ ಪೂಜಾರಿ9ನೇ ‘
ಕವಿ ಹೃದಯ
   ಮುಂಜಾನೆ
ಬಾನಿನಂಗಳದಲ್ಲಿ ರವಿ ಮೂಡಿ ಬಂದ
ಬೆಚ್ಚನೆ ಮಲಗಿದ್ದ ಕೆನ್ನೆಯನ್ನು ಮುದ್ದಿಸುತ
ಬೆಳಗಾಯಿತೇಳೆಂದು ಎಚ್ಚರಿಸುತ.
ಹಕ್ಕಿಗಳು ಮೈ ಮರೆತು ಮೀಯುತಿವೆ
ತಾವರೆ ಕೊಳದಲಿ ಚಿಲಿಪಿಲಿ ಎಂದು
ಉದಯರಾಗದ ಹಾಡುತ.
ಮಧುಹೀರ ಬಹುತಿವೆ ದುಂಬಿಗಳ ದಂಡು
ಅರಳಿ ನಗುತಿರುವ ಹೂವುಗಳ ಕಂಡು
ತೊನೆಯುತಿದೆ ಮರಗಿಡಗಳು ಉಲ್ಲಾಸದಿಂದ.
ಎಲ್ಲೆಲ್ಲೂ ತುಂಬಿಹುದು ನವೋಲ್ಲಾಸದ ಗುಂಗು
ಬಾನಲ್ಲಿ ಕಲಸಿಹುದು ಬಣ್ಣದ ರಂಗು
ಕವಿ ಮನಕೆ ತುಂಬಿತಿದೆ ಗುಂಗು.

ಸಂಗ್ರಹಸೌಂದರ್ಯ 9ನೇ ‘ಬಿ
ಗಾದೆಮಾತುಗಳು
• ಕುಂಬಾರನಿಗೆ ವರುಷದೊಣ್ಣೆಗೆ ನಿಮಿಷ.
• ಆಳಾಗಿ ದುಡಿ ಅರಸನಾಗಿ ಉಣ್ಣು.
• ವಾದಿಯ ಕೂಡ ವಾದಿಸಲಸಾಧ್ಯಕುಂಟನಕೂಡ ನಡೆಯಲಸಾಧ್ಯ.
• ವ್ಯಾಪಾರಂ ದ್ರೋಹ ಚಿಂತನಂ.
• ವಿದ್ಯೆಯಿಂದಲೇ ಜ್ಞಾನಜ್ಞಾನದಿಂದಲೇ ಮುಕ್ತಿ.
• ವಿಷ ಒಬ್ಬನನ್ನು ಕೊಂದರೆಸಾಲ ವಂಶವನ್ನೇ ಕೊಲ್ಲುತ್ತೆ.
• ವೈದ್ಯ ಹೇಳಿದ್ದೇ ರೋಗಭಾಗವತ ಹಾಡಿದ್ದೇ ರಾಗ.
• ಕೈ ಕೆಸರಾದರೆ ಬಾಯಿ ಮೊಸರು.
• ಶ್ರೀ ಮಂತರ ಮನೆ ನೋಟ ಚಂದಬಡವರ ಮನೆ ಊಟ ಚಂದ.
• ಶ್ರೀ ಗಂಧದ ಕೊರಡು ತೇದಷ್ಟು ಪರಿಮಳ.
• ಕಂದ ಕಲಿತರೆ ಕನ್ನಡವ ಎಂದೆಂದಿಗೂ ಮುನ್ನಡೆವ.
• ವಿದ್ಯೆ ವಿನಯವನ್ನು ಕಲಿಸುತ್ತದೆಬುದ್ಧಿ ವಿವೇಕವನ್ನು ಕಲಿಸುತ್ತದೆ.
• ಮನೆಯೇ ಮೊದಲ ಪಾಠ ಶಾಲೆಜನನಿ ತಾನೇ ಮೊದಲ ಗುರುವು.
• ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
• ಬಾಯಿ ಒಳ್ಳೆದಾದರೆ ಊರು ಒಳ್ಳೆದು.
• ಒಗ್ಗಟಿನಲ್ಲಿ ಬಲವಿದೆ.

                                  ಸಂಗ್ರಹಶ್ರಾವ್ಯ, 8ನೇ ‘ಬಿ
ಗಾದೆಗಳು
• ಕೈ ಕೆಸರಾದರೆ ಬಾಯಿ ಮೊಸರು.
• ಹಾಸಿಗೆ ಇದ್ದಷ್ಟು ಕಾಲು ಚಾಚು.
• ಗಾಳಿ ಬಂದಂತೆ ತೂರಿಕೋ.
• ಕಾಯಕವೇ ಕೈಲಾಸ.
• ಮಾತು ಮನೆ ಕೆಡಿಸಿತುತೂತು ಒಲೆ.
• ಬೆಳೆವ ಸಿರಿ ಮೊಳಕೆಯಲ್ಲಿ.
• ಅತಿ ಆಸೆ ಗತಿಗೇಡು
• ಆರೋಗ್ಯವೇ ಭಾಗ್ಯ.
• ದುಡ್ಡೇ ದೊಡ್ಡಪ್ಪ.
• ಬೆಕ್ಕಿಗೆ ಆಟಇಲಿಗೆ ಪ್ರಾಣ ಸಂಕಟ.
• ಕುಂಬರನಿಗೆ ವರುಷದುಣ್ಣೆಗೆ ನಿಮಿಷ.
• ತುಂಬಿದ ಕೊಡ ತುಳುಕುವುದಿಲ್ಲ.
• ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು?
• ಗಿಡವಾಗಿ ಬಗ್ಗದುಮರವಾಗಿ ಬಗ್ಗಿತೇ?
• ಆಳಾಗಿ ದುಡಿ ಅರಸನಾಗಿ ಉಣ್ಣು.
• ಹಿತ್ತಲ ಗಿಡ ಮದ್ದಲ್ಲ.
• ಮಾಡಿದ್ದುಣ್ಣೋ ಮಾರಯ್ಯ.
• ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು.
• ಉಪ್ಪಿಗಿಂತ ರುಚಿಯಿಲ್ಲತಾಯಿಗಿಂತ ಬಂದೂ ಇಲ್ಲ.
• ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.
• ಹಂದಿಗೆ ಹಲವು ಮರಿಸಿಂಹಕ್ಕೆ ಒಂದೇ ಮರಿ.

                                     ಸಂಗ್ರಹಸಾಹಿತ್ಯ 8ನೇ ‘ಬಿ
ಅಪ್ಪಾ ಯು ಆರ್ ಗ್ರೇಟ್
ನನಗೆ 6 ವರ್ಷವಿದ್ದಾಗಅರೆ ಅಪ್ಪನಿಗೆ ಎಷ್ಟೊಂದು ವಿಷಯ ಗೊತ್ತಲ್ವಾ ಅನಿಸಿತ್ತಿತ್ತು.
10ನೇ ವರ್ಷಕ್ಕೆ ಕಾಲಿಟ್ಟಾಗ ಅಪ್ಪ ಒಂಥರಾ ಸಿಡುಕನಂತೆ ಕಂಡ.
12ನೇ ವರ್ಷದಲ್ಲಿ ಹಿಂತಿರುಗಿ ಬಂದಾಗಗಂತೂ-ಉಫ್ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ.
16ನೇ ವರ್ಷದಲ್ಲಿ ನನಗೂ ಅಪ್ಪನಿಗೂ ಸಣ್ಣ ಜಗಳವಾಯ್ತು.
21ಕ್ಕೆ ಬಂದೆನಾಅಪ್ಪ ವಿಪರೀತ ಬಿಗಿಯಾದನಂತೆ ತೀರಾ ಒರಟನಂತೆ ಕಂಡ.
25ನೇ ವಯಸ್ಸಿನಲ್ಲಿ ಅಂದುಕೊಂಡೆಅಪ್ಪನಿಗೆ ಗೊತ್ತಿರುದಷ್ಟೇ ನನಗೂ ಗೊತ್ತಿದೆ.
30 ರಲ್ಲಿದ್ದಾಗ ಮದುವೆಯಾದೆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾನಿಕೆಯೇ ಇರಲಿಲ್ಲ.
35ನೇ ವರ್ಷದಲ್ಲಿ ನನ್ನ ಮಗಮಗಳ ರಂಪ ಕಂಡು ತಲೆ ಚಿಟ್ಟು ಹಿಡಿತು.
39 ರಲ್ಲಿದ್ದಾಗ ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ ; ಅಪ್ಪನೆನಪಾದ.
42 ವಯಸ್ಸಲ್ಲಿ ಅನಿಸಿದ್ದು ; ಅಪ್ಪನಂತೆಯೇ ಬಿಗಿಯಾದೇ ಹೋದ್ರೆ ಮಕ್ಕಳು ಬಗ್ಗಲ್ಲ.
45 ವಯಸ್ಸಿನಲ್ಲಿ ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೊಂದು ಕಷ್ಟ ಆಯ್ತೊ ಅಂದುಕೊಂಡೆ.
50 ರಲ್ಲಿದ್ದಾಗ ಅನಿಸಿತು ; ಎರಡು ಮಕ್ಕಳನ್ನು ಸಾಕೋದೇ ಕಷ್ಟಅಪ್ಪ ನಾಲ್ಕು ಮಕ್ಕಳನ್ನು ಹೇಗೆ ಸಾಕಿದ?
58ನೇ ವಯಸ್ಸಿನಲ್ಲಿ ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದ್ದರುಅಳುಬಂತು ನನಗೆ ! ಕಡೆಗೂಹಳೆಯದೆಲ್ಲ ನೆನಪಾಗಿಗೋಡೆಯ ಮೇಲಿನ ಚಿತ್ರವಾಗಿದ್ದ ಪೋಟೊ ಮುಂದೆ ನಿಂತುಅಪ್ಪಾ ಯು ಆರ್ ಗ್ರೇಟ್ ಅಂದಾಗನನಗೆ 60 ತುಂಬಿತುಅಪ್ಪನ ಮಹತ್ವ ತಿಳಿಯಲು 54 ವರ್ಷ ಬೇಕಾಯ್ತು !
(ಅಪ್ಪ ಅಂದ್ರೆ ಆಕಾಶ)
                                                                               ಸಂಗ್ರಹಕೃತಿಕಾ, 9ನೇ ‘



                                       
ಗಾದೆಗಳು
1. ವ್ಯಾಪಾರಂ ದ್ರೋಹ ಚಿಂತನಂ.
2. ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
3. ಹಣ್ಣೆಲೆ ಉದುರುವಾಗಚಿಗುಗಲೆ ನಕ್ಕಿದಣತೆ.
4. ಹಟ್ಟಿ ತಂಬಾ ಹಸುಹಾಲು ಮತ್ರತುಸು.
5. ಹನುಮಂತರಯ ಹಗ್ಗ ಕಡೀವಾಗ ಪೂಜಾರಿ ಶಾವಿಗೆ ಕೇಳ್ದ.
6. ಸಿಪ್ಪೆ ತಿಂದವ ಸಿಕ್ಕಿಕೊಂಡಹಣ್ಣು ತಿಂದವ ಜಾರಿಕೊಂಡ.
7. ವಿದ್ಯೆಯಿಂದಲೇ ಜ್ಞಾನಜ್ಞಾದಿಂದಲೇ ಮುಕ್ತಿ.
8. ಹಂದಿಗೆ ಹಲವು ಮರಿಸಿಂಹಕ್ಕೆ ಒಂದೇಮರಿ.
9. ಹನುಮಂತನ ಮುಂದೆ ಹಾರಲೆ ಗುಬ್ಬಿ ಎಂದರ.
10. ಶ್ರೀಮಂತರ ಮನೆ ನೋಟ ಚೆಂದಬಡವರ ಮನೆ ಊಟ ಚೆಂದ.
11. ಕೈ ಕೆಸರಾದರೆ ಬಾಯಿ ಮೊಸರು.
12. ತಾಳಿದವನು ಬಾಳಿಯನು.
13. ಅತಿ ಆಸೆ ಗತಿಗೇಡು.
14. ಕಸ್ತೂರಿ ಪರಿಮಳ ಕತ್ತೆಗೇನು ಗೊತ್ತು.
                                          ಸಂಗ್ರಹಹರ್ಷಿತ್, 8ನೇ ‘ಬಿ


ತಿಂಗಳ ಹೆಸರು (ತುಳುಕನ್ನಡಇಂಗ್ಲೀಷ್)         
ತುಳುವಿನ ತಿಂಗಳುಗಳು ಕನ್ನಡದಲ್ಲಿ ತಿಂಗಳುಗಳು ಇಂಗ್ಲೀಷ್ ತಿಂಗಳುಗಳು      
ಸುಗ್ಗಿ ಚೈತ್ರ ಜನವರಿ         
ಪಗ್ಗು ವೈಶಾಖ ಫೆಬ್ರವರಿ         
ಬೇಶ ಜ್ಯೇಷ್ಟ ಮಾರ್ಚ್         
ಕಾರ್ತೆಲ್ ಆಷಾಡ ಎಪ್ರಿಲ್         
ಆಟಿ ಶ್ರಾವಣ ಮೇ         
Éೂೀಣ ಭಾದ್ರಪದ ಜೂನ್         
ಕನ್ಯಾ ಆಶ್ವೀಜಾ ಜುಲೈ         
ಬೊಂತೆಲ್ Áರ್ತಿಕ ಅಗಸ್ಟ್         
ಜಾರ್ದೆ ಮಾರ್ಗಶಿರ ಸಪ್ಟಂಬರ್         
Éರಾರ್ದೆ ಪುಷ್ಯ ಅಕ್ಟೋಬರ್         
ಪುಯಿಂತೆಲ್ ಮಾಘ ನವೆಂಬರ್         
ಮಾಯಿ ಫಾಲ್ಗುಣ ಡಿಸೆಂಬರ್         

ಸಮೀಕ್ಷಾ 8ನೇ  ತರಗತಿ



                           



ಒಗಟುಗಳು
1.ಮುಂಜಾನೆ ಬರತೈತಿ ಸಂಜೆಗೆ ಹೋಗತೈತಿ.                    :ಸೂರ್ಯ
2.ಚಿಕ್ಕ ಮನೆಯೊಳಗೆ ಚಿಕ್ಕ ತುಂಬಿವೆ.                          :ಹಲ್ಲುಗಳು
3.ಹಕ್ಕಿ ತಿನ್ನುವವನಿಗೆ ಕೆಂಪು ಪುಕ್ಕ.                            :ಕೋಳಿ
4.ಹಾರಿದರೆ ಹನುಮಂತ ,ಕೂಗಿದರೆ ಶಂಖ.                     :ಕಪ್ಪೆ
5.ಒಂದೇ ಕಣ್ಣುಒಂದೇ ಬಾಲ.                              :ಸೂಜಿ
6.ತಾತನ ತಟ್ಟೆ ಥಳ ಥಳ ಹೊಳೆಯುತ್ತದೆ.                       :ಚಂದ್ರ
7.ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.                           :ಕಣ್ಣು
8.ಅಂಕು ಡೊಂಕಾದ ಬಾವಿಲಿ ಒಂದೂ ತೊಟ್ಟು ನೀರಿಲ್ಲ.            :ಕಿವಿ
(ಸಂಗ್ರಹ)-ರಕ್ಷಣ್ ಯು.ಸಾಲಿಯನ್ 8ನೇ ‘’ ತರಗತಿ
ಒಗಟುಗಳು
1.ಅಕ್ಕ ಅಕ್ಕ ಏರಿ ನೋಡು
ಏರಿ ಮ್ಯಾಗಳ ಗಾರೆ ನೋಡು
ಗಾರೆÀ ಮ್ಯಾಗಳ ತೂತು ನೋಡು
ತೂತಿನೊಳಗಿನ ಮಾತು ನೋಡು
:ಕಣ್ಣು
2. ಅರ್ಧ ಬಂದಾಗ ಅಳುವುದು
   ತುಂಬಾ ಬಂದಾಗ ನಗುವುದು
ಬಳೆ ತೊಡಿಸುವುದÀÅ
3. ಅಪ್ಪನ ಮುಕ್ಳೀಲಿ ಮಗ ಸಿಕ್ಕು ಹಾಕಿಕೊಂಡಿದ್ದಾನೆ.
ಗೇರು ಬೀಜ
4. ಆಗ್ರದಲ್ಲಿದೆ ಸಾಗರದಲ್ಲಿದೆ
  ಜಡೆನಿಂಗನ ಮುಡೀ ಮೇಲಿದೆ ಜಡೆಬಿಲ್ಲೆ.
:ಚಂದ್ರ
5.  ಮನೆ  ಮನೆಯೆಲ್ಲಾ ಆಡಿ ಬಂದು
ಸಂಜೇಲಿ ಬಂದು ಮೂಲೇಲಿ ನಿಂತುಕೊಳ್ತದೆ.
:ಪೊರಕೆ
6.ಈಟೆ ಹುಡುಗ ಕರಿ ಟೋಪಿ ಹಾಕಿಕೊಂಡು
ಕರಾಮತ್ತು ಮಾಡ್ತಾನೆ.
ಬೆಂಕಿ ಕಡ್ಡಿ
7.ಕರಿದು ಕಸ್ತೂರಿ ಬಿಳೀದು ಕಿಸ್ಬಾಯಿ
ಆಡೊ ಮಕ್ಕಳ ತೊಡೆ ಮೇಗೆಬಲ್ಲವರ ಬಾಯಲ್ಲಿ
ಪುಸ್ತಕ
8.ಕರಿಯ ಕುದುರೆಯ ಮೇಲೆ
ಒಬ್ಬರು ಹತ್ತುತ್ತಾರೆ ಒಬ್ಬರು ಇಳಿಯುತ್ತಾರೆ.
ಕಾವಲಿ-ರೊಟ್ಟಿ.

(ಸಂಗ್ರಹ)-ಸಂಪ್ರೀತ್
                                                                  8ನೇ ‘’ ತರಗತಿ
ಕನ್ನಡ ಗಾದೆಗಳು
1. ವಾದಿಯ ಕೂಡ ವಾದಿಸಲಸಾಧ್ಯಕುಂಟನಕೂಡ ನಡೆಯಲಸಾಧ್ಯ.
2. ವ್ಯಾಪರಂ ದ್ರೋಹ ಚಿಂತನಂ.
3. ವಿದ್ಯೆಯಿಂದಲೇ ಜ್ಞಾನಜ್ಞಾನಂದಿಂದಲೇ ಮುಕ್ತಿ.
4. ವಿಷ ಒಬ್ಬನನ್ನು ಕೊಂದರೆಸಾಲ ವಂಶವನ್ನೇ ಕೊಲ್ಲುತ್ತೆ.
5. ವೇಷದಿಂದ ಇಂದ್ರ ಕೆಟ್ಟದ್ವೇಷದಿಂದ ಕೌರವ ಕೆಟ್ಟ.
6. ವೈದ್ಯ ಹೇಳಿದ್ದೇ ರೋಗಭಾಗವತ ಹಾಡಿದ್ದೇ ರಾಗ.
7. ಶ್ರೀಗಂಧದ ಕೊರಡು ತೇದಷ್ಟೂ ಪರಿಮಳ.
8. ಶ್ರೀಮಂತರ ಮನೆ ನೋಟ ಚೆಂದಬಡವರ ಮನೆ ಊಟ ಚೆಂದ.
9. ಸತ್ಯಕ್ಕೆ ಸಾವಿಲ್ಲಸುಳ್ಳಿಗೆ ಸುಖವಿಲ್ಲ.
10. ಸಮಯಕ್ಕೆ ಬಾರದ ಬುದ್ದಿ ಸಾವಿರ ಇದ್ದರೂ ಲದ್ದಿ.
11. ಸಾವಿರ ಪಾರಿವಾಳ ಸೇರಿದರೆ ಒಂದು ಗಿಡುಗ ಆದೀತು!
12. ಸಾವಿರದಷ್ಟೂ ಸಾಲವಾದರೂ ಹಾಲು ತುಪ್ಪ ಬಿಡಬಾರದು.
13. ಸುಖ ಹೆಚ್ಚಾದರೆ ಕಣ್ಣು ಎತ್ತರಸೊಕ್ಕು ಹೆಚ್ಚಾದರೆ ನಾಶ ಹತ್ತಿರ.
14. ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಹಾಗೆ.
15. ಹತ್ತು ಮಂದಿ ಮಾತು ಮೀರಬೇಡದೇವರ ಮುಂದೆ ಸುಳ್ಳಾಡಬೇಡ.
16. ಹರಿಯುವವರೆಗೆ ಎಳೆಯಬಾರದುಮುರಿಯುವವರೆಗೆ ಜಗ್ಗಬಾರದು.

                                              ಸಂಗ್ರಹಕುಮಯೂರಿ   8ನೇ ‘’ 
ಭಾರತ ದೇಶದ ಪ್ರಧಾನ ಮಂತ್ರಿಗಳು

ಹೆಸರು                                                 ಅವಧಿ
    1. ಜವಾಹರ ಲಾಲ್ ನೆಹರು             1947-64
    2. ಗುಲ್ಜಾರಲಾಲ್ ನಂದ                       1964-64
    3. ಲಾಲ ಬಹದ್ದೂರ್ ಶಾಸ್ತ್ರಿ             1964-66
    4. ಗುಲ್ಜಾರಲಾಲ್ ನಂದ                     1966-66
    5. ಶ್ರೀಮತಿ ಇಂದಿರಾ ಗಾಂಧೀ             1966-77
    6. ಮುರಾರ್ಜಿ ದೇಸಾಯಿ                     1977-79
    7. ಚರಣ ಸಿಂಗ್                             1979-80
    8. ಶ್ರೀಮತಿ ಇಂದಿರಾ ಗಾಂಧೀ             1980-84
    9. ರಾಜೀವ್ ಗಾಂಧೀ                     1984-89
    10. ವಿ.ಪಿಸಿಂಗ್                             1989-90
    11. ಚಂದ್ರಶೇಖರ                             1990-91
    12. ಪಿ.ವಿನರಸಿಂಹ ರಾವ್                   1991-96
    13. .ಬಿವಾಜಪೇಯಿ                     1996-96
    14. ಹೆಚ್.ಡಿದೇವೆಗೌಡ                     1996-97
    15. .ಕೆಗುಜರಾಲ್                     1997-98
    16. .ಬಿವಾಜಪೇಯಿ                         1998-04
    17. ಡಾಮನಮೋಹನ್ ಸಿಂಗ್             2004-2014
    13. ನರೇಂದ್ರ ಮೋದಿ                       2014-
                   
                                                             ಸಂಗ್ರಹ:- ದಿವ್ಯ ದೇವಾಡಿಗ 8ನೇ ಬಿ

No comments:

Post a Comment