Wednesday, December 5, 2018

ಕನ್ನಡ ವಿಭಾಗ-ಕವಿತೆ

ನಮ್ಮ ನೆಚ್ಚಿನ ಶಾಲೆ
ಕಾರ್ಕಳ ಪರಿಸರದಲ್ಲಿ
ಸುಂದರ ತೋಟದಲ್ಲಿ
ಪೆರ್ವಾಜೆ ಶಾಲೆಯಲ್ಲಿ
ಅರಳುತಿಹ ಹೂಗಳ ನೋಡಿಲ್ಲ
ಮಕ್ಕಳಿಗಾಗಿ ಕ್ಷಮಿಸಿಸುವ ಶಿಕ್ಷಕರು
ಶಿಕ್ಷಕರನ್ನು ಗೌರವಿಸುವ ಮಕ್ಕಳು
ಎಷ್ಟೊಂದು ಸುಮಧುರ ಸಂಸಾರ
ನಮ್ಮೆಲ್ಲರ ಪ್ರೀತಿಯ ಪೆರ್ವಾಜೆ ಸಂಸಾರ

ಕವನಗಳು
ಚಂದಿರ ಮಡಿಲು ತಂಪು
ಹಕ್ಕಿಗಳ ಹಾಡು ಇಂಪು
ಕಸ್ತೂರಿ ಬೀರುವ ಕಂಪು
ಮಂಗಳ ಗ್ರಹವು ಕೆಂಪು

ಸಂಗ್ರಹ:- ಜೀವನ್ 10ನೇ ಬಿ


ಕವನ
ಅಪ್ಪ - ಅಮ್ಮ
ನೀವೇ ನೀಡಿದ ಜನ್ಮ
ನೀವೇ ಇಡಿಸಿದ ಪ್ರೀತಿಯ ಹೆಜ್ಜೆ
ನೀವೇ ಕಲಿಸಿದ ವಿದ್ಯೆ
ನೀವೇ ಹೆಳಿಕೊಟ್ಟ ಮಾತು
ನೀವೇ ನಡೆಸಿದ ಮಾರ್ಗ
ನೀವೇ ತೋರಿಸಿದ ಜಗತ್ತು
ನೀವೇ ಚೆಂದ
                             ನಿಮ್ಮ ಪ್ರೀತಿಯಲ್ಲಿ ನಾನು ಅಂಧ
                             ನಿಮ್ಮ ಮುಂದೆ ಬೇರೆನಿಲ್ಲ
                             ನಿಮಗೆ ಸಾಟಿ ಯಾರೂ ಇಲ್ಲ
                             ನೀವೇ ಇರೆವೇ ನಾನೆಲ್ಲಿ
                             ನಿಮ್ಮಿಂದರೇ ನಾನಿಲ್ಲ.
ನೀವೇ ನೆನ್ನ ಬಾಳಿಗೆ ಉಸಿರು
ನೀವೇ ನನ್ನ ಪಾರಿಗೆ ದೇವರು
ನಿಮ್ಮ ವತ್ಸಲ್ಯಕ್ಕೆ ಮನ ಸೋತೆನಾ
ನಿಮ್ಮ ತ್ಯಾಗಕ್ಕೆ ಚಿರಖಾಗಿ ನಾ
ನನ್ನ ಪ್ರೀತಿಯ ಅಪ್ಪ..... ಅಮ್ಮ......
                                              ರಚನೆ- ಕೆ.ಸಂಧ್ಯಾ 10ನೇಸಿ


ಮರಳಿ ಬಾ ಮಣ್ಣಿಗೆ ಯೋಧ
ಹುಟ್ಟು ದರಿಧ್ರವಾದರೆನು, ಸಾವು ಚರಿತ್ರೆಯಾಗಿರಬೇಕು
ಸಾವಿನ ದಿನ ದೇಶವೇ ಕಣ್ಣಿರಿಡಬೇಕು
ದಿನವಿಡಿ ಮಂಜು ಮುಸುಕಿದ ಹಿಮಾಲದ
ಮುಂದೆ ನಿಂತು ಮನದ ತುಂಬಾ
ದೇಶ ಪ್ರೇಮವನ್ನು ತುಂಬುಕೊಂಡು
ಜೀವದ ಹಂಗನ್ನು ಲೆಕ್ಕಿಸದೆ ಭಾರತಾಂಬೆಯ
ರಕ್ಷಣೆಗಾಗಿ ಹೋರಾಡಿ, ಆಕೆಯ ಮಡಿಲಲ್ಲಿ ಸುಖವಾಗಿ
ನಿದ್ರಿಸುತ್ತಿರುವ ಪ್ರತಿಯೊಬ್ಬ ವೀರ
ಯೋಧನ ಮರೆಯಲಾಗದು ಮಧುರ ನೆನಪಿದು
ಇಂತಹ ಯೋಧರನ್ನು ಎಷ್ಟು ಬಾರಿ
ನೆನಪಿಸಿಕೊಂಡರು ಸಾಲದು
ಎಲ್ಲಾ ಯೋಧರನ್ನು ಗೌರವಿಸೋಣ
ಸಂಗ್ರಹ:-ನಿಶ್ಮಿತಾ 10ನೇ ಬಿ                             
  ಕವನಗಳು
   ಇರುವೆ:-
ಇರುವೆ ಇರುವೆ
ಎಲ್ಲೆಡೆ ಇರುವೆ
ವಾಸನೆ ಹಿಡಿದು
ತಿಂಡಿಗೆ ಬರುವೆ
ಜೊತೆಯಲಿ ಗೆಳೆಯರ ಕರೆತರುವೆ
ಎಲ್ಲರ ಒಟ್ಟಿಗೆ ನೀನಿರುವೆ.

   ಕಾವ್ಯ:-
ಆಚೆ ಮನೆ ದಿವ್ಯ
ಈಚೆ ಮನೆ ಭವ್ಯ
ದಿವ್ಯ ಭವ್ಯ ಸೇರಿಕೊಂಡು
ಬರೆದರೊಂದು ಕಾವ್ಯ

   ಪುರಸ್ಕಾರ:-
ಯಾರಲ್ಲೂ ಮಾಡಬೇಡ ಮತ್ಸರ
ಯಾರನ್ನೂ ಮಾಡಬೇಡ ತತ್ಸರ
ಯಾರಿಗೂ ತೋರಬೇಡ ತಿರಸ್ಕಾರ
ದಿನವೂ ಅವರಿಗೆ ಮಾಡು ನಮಸ್ಕಾರ
ಇದು ಬಲ್ಲವನಿಗೆ ದೊರೆಯುವುದು ಪುರಸ್ಕಾರ
ಸಂಗ್ರಹ:-ಸುದರ್ಶಿನಿ 10ನೇಬಿ


      ಅಮ್ಮ
ಅಮ್ಮ ಎಂಬ ಎರಡಕ್ಷರ
ಅವಳಿಂದ ಕಲಿತೆ ನಾ ಸರ್ವಕ್ಷರ
ಅಮ್ಮ ಜೊತೆಲಿದ್ದರೆ ಹರುಷ
ಅವಳಿಲ್ಲದಿದ್ದರೆ ಹೇಗೆ ಕಳೆಯಲಿ ವರುಷ
ಅವಳೇ ನನ್ನ ಜೀವನದ ಸರ್ವಸ್ವ
ಜೀವನ ಜೋಕಾಲಿ
ಬಾಳೊಂದು ಭವಗಳ ತೂಗುಯ್ಯಾಲೆ
ಏಳು - ಬೀಳುಗಳ ಸರಮಾಲೆ
ಮುಗಿಲೆತ್ತರ ಏರಲು ಅನವರತ ಶ್ರಮ
ಕೆಳ ಬಾಗಲು ಬೇಕಿಲ್ಲ ಕ್ರಮ

ಜೀವನ ಜೋಕಾಲಿಯಿದು
ಜೀಗಬೇಕು ಬಲು ಜೋಕೆಯಲಿ
ಋತು ಬದಲಾವಣೆಗನುಗುಣವಾಗಿ
ತೂಗಬೇಕು ಲೀಲಾಜಾಲವಾಗಿ

ಜಗವೆಂಬುದು ಜಟಿಲ ಜಂಜಾಟಗಳ ಸುರುಳಿ
ಮುನ್ನುಗ್ಗಬೇಕು ಸುಳಿಯ ಸೀಳಿ
ದೊರೆಯುವುದಾಗ ನೆಮ್ಮದಿಯ ಸುಳಿ
ಜೀವನ ಜೋಕಾಲಿಯಿಂದ ನೀ ತಿಳಿ|

ಸಂಗ್ರಹ:-ನಿಶ್ಮಿತಾ 10ನೇ ಬಿ

ನಮ್ಮ ಸುಂದರ ನೋಟ
ನಮ್ಮ ನೋಟದ ಕಲರವ
ನಮ್ಮನ್ನು ಚೇತನಗೊಳಿಸುವುದಕ್ಕೆ ಕಾತರಿಸುತ್ತಿದೆ
ನಮ್ಮನ್ನು ಏಳಿಗೆಯತ್ತ ಕರೆದೊಯ್ಯಲು ಪ್ರಯತ್ನಿಸುತ್ತಿದೆ
                                    ನಾವು ನೋಡುವ ನೊಟದ
                                    ಪ್ರತಿಯೊಂದು ಕಲರವು
                                    ನಮ್ಮನ್ನು ನಮ್ಮ ಗುರಿಯ
                                    ಪ್ರಯಾಣದತ್ತ ಕರೆದೊಯ್ಯುತ್ತಿದೆ
ನಮ್ಮ ಜೀವನವು ನೀರಿನಂತಹದ್ದು
ಅದನ್ನು ಜಾರದಂತೆ ನೋಡಿಕೊಂಡು
ನಮಗೆ ಸಹಕರಿಸುತ್ತಿದೆ
                                           ರಚನೆ:-ಪ್ರತೀಕ್ಷಾ 10 ನೇ

ಸೂರ್ಯ-ಚಂದ್ರ
ಸೂರ್ಯ:-
ಆಗಸದಲ್ಲಿ ಮಿನುಗುವ ಸೂರ್ಯ
ನಮಗೆಲ್ಲರಿಗೂ ಅನಿವಾರ್ಯ
ಸೂರ್ಯ ಉದಯಿಸುವಾಗ ಹಕ್ಕಿಗಳ ಆಗಮನ
ಸೂರ್ಯ ಮರೆಯಾಗುತ್ತಿದ್ದಂತೆ ಚಂದ್ರನ ಆಗಮನ
ಮುಂಜಾನೆ ಹೊತ್ತಲ್ಲಿ ಕಿರಣವನ್ನೆಲ್ಲಾ ಚೆಲ್ಲಿಸಿ
ಶುಭ ದಿನದ ಹೊಸ ಭರವಸೆಗಳ ಅರಳಿಸಿ
ಸುಪ್ರಭಾತದಂತೆ ಹಕ್ಕಿಗಳ ಕಲರವ
ಆನಂದದಿಂದ ಕಂಡೆವು ನಾವು  ಸೂರ್ಯನ ಕಿರನವ


ಚಂದಿರ:-
ತಂಪನ್ನು ಧಾರೆ ಎರಿಯುವ ಚಂದಿರ
ಜಗತ್ತನ್ನೇ ಮಾಡಿದ ದೇವ ಮಂದಿರ
ಹಸು ಮಕ್ಕಳ ಪುಟ್ಟ ಮನಸ್ಸು
ಕಾಣಲು ಶುರುಮಾಡಿದವ ಜಗತ್ತೇ ಕಾಣದ ಕನಸು
           
                             ರಚನೆ:- ಧನ್ಯ 10ನೇ ‘ಬಿ


   ಪೆರ್ವಾಜೆ
ಕಾರ್ಕಳದ ಸ್ವಚ್ಛತೆಯಲ್ಲಿ
ಸುಂದರ ಬನದಲ್ಲಿ
ಪೆರ್ವಾಜೆ ಶಾಲೆಯಲ್ಲಿ
ಅರಳುತ್ತಿರುವ ಹೂಗಳಲ್ಲಿ
ಮಕ್ಕಳಿಗಾಗಿ ಶ್ರಮಿಸುವ ಶಿಕ್ಷಕರಲ್ಲಿ
ಎಷ್ಟೊಂದು ಸುಮಧುರ ಸಂಸಾರ

ಬೆಳೆಸುತಿಹರು ಮಕ್ಕಳಲ್ಲಿ  ಸಂಸ್ಕಾರ

ಕವನ
ಆಚೆ ಮನೆ ದೀಕ್ಷ,
ಈಚೆ ಮನೆ ರಕ್ಷಾ,
ರಕ್ಷಾ ದೀಕ್ಷ ಸೇರಿಕೊಂಡು,
ಮಾಡಿದರೊಂದು ರಿಕ್ಷಾ.

ಪ್ರಜೆ ಪ್ರಜೆ ಪ್ರಜೆ,
ನಾನೊಂದು ಭಾರತದ ಪ್ರಜೆ,
ಅದಕ್ಕೆ ಕಾರಣ,
ನನ್ನ ಶಾಲೆ ಪೆರ್ವಾಜೆ
                                     ರಚನೆ:- ವೈಷ್ಣವಿ ಹೆಗ್ಡೆ 9ನೇ
ಶಾಲಾ ಶಿಕ್ಷಕ
ಶಾ: ಶಾರದಾಂಬೆಯ ಲೋಭವನ್ನು ತ್ಯಜಿಸಿ
ಲಾ: ಲಾಭದ ಲೋಭವನ್ನು ತ್ಯಜಿಸಿ
ಶಿ: ಶಿಸ್ತು ಸಂಯಮಗಳನ್ನು ಪರಿಪಾಲಿಸುತ್ತಾ
ಕ್ಷ: ಕ್ಷಣ ಕ್ಷಣಕ್ಕೂ ಕೆಲಸವೆಂಬ ದೇವರನ್ನು ನೆನೆದು
: ಕರುಣೆ ಅಂತಃಕರಣವನ್ನು ಅರಿತು ನಡೆಯುವವನೇ
ಸಂಗ್ರಹ:- ಪ್ರತೀಕ್ಷ 8 ‘
ಕನ್ನಡ ನಾಡು
ಹೊನ್ನಿನ ಮಣ್ಣಿನ ಚಿನ್ನದನಾಡು
ವನ್ಯ ಜೀವಿಗಳ ನೆಚ್ಚಿನ ಬೀಡು
ಹಸುರಸುರಿನ ಗಿರಿ ವನಗಳ ಸಾಲು
ಕಾವೇರಿ ನದಿಯು ಹರಿಯುವನಾಡು

ಸಾರ್ವ ಭೌಮರು ಕಟ್ಟಿದ ನಾಡು
ಗಂಗ ಕದಂಬರು ಆಳಿದ ನಾಡು
ರಾಷ್ಟ್ರಕೂಟರು ಜನಿಸಿದ ನಾಡು
ಒಡೆಯರು ಉಳಿಸಿ ಬೆಳೆಸಿದ ನಾಡು

ಪುಣ್ಯಕ್ಷೇತ್ರಗಳ ಭವ್ಯ ನಾಡು
ಸಿರಿ ಸಂಪತ್ತಿನ, ಚಿನ್ನದ ನಾಡು
ವರನಟರುದಿಸಿದ ಗಂಧದಬೀಡು
ಕಬ್ಬಿಗರುದಿಸಿದ ಕರುನಾಡು
ಅದುವೆ ನಮ್ಮಯ ಕನ್ನಡನಾಡು
ರಚನೆ:- ಸುಮುಖ. ಕೆ. ಎಸ್ 10ನೇ ಬಿ

ಸಣ್ಣ ಸಂಗತಿ
ನಟ್ಟಿರುಳ ಕರಿಮುಗಿಲ ನೀರ್ ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶೃತಿಗೆ
ಗಾಳಿಯೇ ಹಾಡುತಿದೆ. ಇತ್ತ ಮನೆಯೊಳಗೆ
                 
                 ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
                 ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರಿಮೈಲಿ!
                 ನಿದ್ದೆಗಣ್ಣಿನಲ್ಲಿ ಪಕ್ಕದ ತಾಯಿ ಕೈ ನೀಡಿ
                 ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ
                 
ಹೊದಿಕೆಯನೆ ಕಿತ್ತೆಸೆದು ಮಲಗುವುದು ಬರಿ ಮೈಲಿ
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ
ಇದು ಸರಿಯೆ? ತಪ್ಪೆ? ಉತ್ತರವಿಲ್ಲ. ದೆಸೆ ದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ
ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ;
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ
                                     
ಸಂಗ್ರಹ:- ಸೃಷ್ಠಿ ಶರ್ಮ.ಯು. 8 ನೇ’   
 ನಮ್ಮ ಶಾಲೆ
ನಮ್ಮ ಶಾಲೆ
ಪ್ರೀತಿಯ ಶಾಲೆ
ಸುಂದರವಾದ ಶಾಲೆ
ಸ್ವಚ್ಛತೆಯನ್ನು ಕಾಪಾಡಿತ್ತಿರುವ ಶಾಲೆ
ಪ್ರತಿಭೆಯನ್ನು ತೋರಿಸುವಂತಹ ಶಾಲೆ
ಮನಸ್ಸಿಗೆ ಖುಷಿಯನ್ನು ಕೊಡುವ ಶಾಲೆ
ತಾಯಿಯ ಹಾಗೆ ಮಮತೆಯನ್ನು ನೀಡುವ ಶಾಲೆ
ತಂದೆಯ ಹಾಗೆ ಪ್ರೀತಿಯನ್ನು ನೀಡುವ ಶಾಲೆ
ನಮ್ಮ ಶಾಲೆ
ಪ್ರೀತಿಯ ಶಾಲೆ
ಪೆರ್ವಾಜೆ ಶಾಲೆ
                                 ರಚನೆ:- ವರ್ಷಾ 10ನೇ
ಮೊಸಳೆಯ ಜಾಣತನ
ಮೊಸಳೆಯೊಂದು ದಡಕೆ ಬಂದು,
ಬಾಯಿ ತೆರೆದು ಮಲಗಿತು;
ಹಕ್ಕಿಯೊಂದು ಹಾರಿ ಬಂದು,
ಬಾಯಿಯಲ್ಲಿ ಕುಳಿತಿತು
                        ತನ್ನ ಚೂಪು ಕೊಕ್ಕಿನಿಂದ
                        ಹಲ್ಲಿನೆಡೆಗೆ ಚುಚ್ಚಿತು;
                        ಹೊಟ್ಟೆ ತುಂಬಿದಾಗ,
                        ಹಕ್ಕಿ ಹಾರಿ ಹೋಯಿತು.
ಹಲ್ಲು ಸ್ವಚ್ಛವಾದ ಮೊಸಳೆ,
ಬಹಳ ಹರುಷ ಪಟ್ಟಿತು.
                                         
                                  ಸಂಗ್ರಹ:- ಸ್ವೀನಿ ನಿಶಾಲ್ ಮಿನೇಜಸ್ 10ನೇಬಿ

ಜೀವನ ನೀಡಿದಾಕೆಗೊಂದು ನಮನ
ಅಮ್ಮಾ ನಿನ್ನ ಮೊಗವೇ
ನನಗೆ ಚಿರಚೇತನ
ಅಮ್ಮಾ ನಿನ್ನ ನಗುವೇ
ನನಗೆ ಅಮೃತ ಸಿಂಚನ

ನೀನಿರದ ಬಾಳದುವೇ
ಸುಡುಭೂಮಿ ಕಂಪನ
ನಿನ್ನ ನೆನಪಿನಲ್ಲಿ ಇಹುದು
ಸಹಬಾಳ್ವೆ ಜೀವನ

ನೀ ಹೇಳೋ ಮಾತುಗಳೇ
ನನ್ನ ಜೀವನ ಸಾಧನ.

ನಿನ್ನ ಸೇವೆಂಯಿಂದಲೇ
ನನ್ನ ಪ್ರತಿ ಜನ್ಮ ಪಾವನ
ನಿನಗಾಗಿ ಅರ್ಪಿಸುವೆ
ನನ್ನ ನುಡಿ ನಮನ
ಅಮ್ಮಾ ಎಂಬ ನುಡಿಯಲ್ಲಿ ಅಮೃತವಿದೆ, ಪ್ರೀತಿಯ ಸಿಂಚನವಿದೆ, ಮಮತೆಯ ಒಡಲಿದೆ. ಮಡಿಲಲ್ಲಿ ಹಾಲ್ಜೇನ ತುತ್ತು ಉಣಿಸುವ ತಾಯಿಗೆ ನನ್ನ ಮಗುವೇ ಬಾಳಿನ ಮುತ್ತು”.
                                       
 ಸಂಗ್ರಹ:- ಅನಿಶಾ 10ನೇಬಿ
     ಭಾವನೆ
ಜನರು ಹಲವಾರು ಆದರೆ,
ಹರಿಯುವ ರಕ್ತ ಒಂದೇ.
ಮರಗಳು ಹಲವಾರು ಆದರೆ,
ಬೀಸುವ ಗಾಳಿ ಒಂದೇ.
ಹಸುಗಳು ಹಲವಾರು ಆದರೆ,
ಅವು ಕೊಡುವ ಹಾಲು ಒಂದೇ.
ನದಿಗಳು ಹಲವಾರು ಆದರೆ,
ನೀರು ಒಂದೇ.
ಮಿಣುಗುವ ತಾರೆಗಳು ಹಲವು ಆದರೆ,
ಆಕಾಶ ಒಂದೇ.
ದೇಶಗಳು ಹಲವಾರು ಆದರೆ.
ಭೂಮಿ ಒಂದೇ.
                                          ಸಂಗ್ರಹ:- ಸ್ನೇಹ 10ನೇಬಿ
ಗಲಿಬಿಲಿಯ ಮೂಲ
ದೇಹದ ಭಾವನೆ ಅಳಿಯಲಿ ಬೇಗ
ದೇವರ ಒಳಗಡೆ ನೋಡು ನೀನೀಗ
                    ಸದಯನ ಕೃಪೆಗೆ ನೀ ಮನ ಮಾಡು
                    ಬೇಹುತ ಬಾಡುತ ನೀ ಬಳಿ ಓಡು
ನಾಮ ನೇಮವೆ ಶಕ್ತಿಯ ಕಿಡಿಯು
ಎಂದಿಗೂ ಮರೆಯದೆ ಭಕ್ತಿಯ ಮಿಡಿಯು
                     ಸನಾಥ ಪ್ರಜ್ಞೆಯ ಏಳ್ಗೆಯ ಕುರುಹು
                     ಸದಾಶೆಯಿಂದಲಿ ವಿಜಯದ ಹೋಳಹು
ಮನದಲಿ ಶಾಂತಿ ತನುವಲಿ ಕಾಂತಿ
ಕಿತ್ತೆಸೆ ಭ್ರಾಂತಿ ಕರ್ಮದ ವಾಂತಿ
                     ನೆಮ್ಮದಿ ನೆಲೆಯೇ ಸ್ಫೂರ್ತಿಯ ಸೆಳೆಯೇ
                     ಸಮರಸ ಸವಿಯೆ ರಾಜರಾಜೇಶ್ವರಿಯೆ
ಕ್ಷಣ ನಿನ್ನದು ಸಹನೆಯ ಮಡಿಲು
ವಾದವ ತೊರೆಯುತ ಪ್ರೇಮದ ಕಡಲು



ಗಲಿಬಿಲಿಯ ಜಾಲ
ಆತ್ಮ ಶಕ್ತಿಯ ಮರೆಯದಿರು
ಗಲಿಬಿಲಿ ಎಂದೇ ನರಳದಿರು

ನೀನೋ ಬರಿಯ ದೇಹವೇ ಅಲ್ಲ
ಒಳಗಿನ ದೇವರೇ ಸರ್ವವ ಬಲ್ಲ

ನಾಮವು ಪ್ರೇಮದಿ ಮನದಲಿ ಇರಲಿ
ಪ್ರೇಮ ಕಲಹವೇ ಉಸಿರಾಗಿರಲಿ

ವಾದ ವಿವಾದಕೆ ಬೆಲೆ ಕೊಡಬೇಡ
ಆಪ್ತತೆಯಿಂದಲಿ ಪೀಡಿಸಿ ನೋಡ

ಮನದ ಅಶಾಂತಿಯ ಕಿತ್ತೆಸೆ ಬೇಗ
ಜೀವನ ಪಣವನು ಎದುರಿಸೆ ಆಗ

ಅರಳಲಿ ಶ್ರದ್ಧಾ ಭಕ್ತಿಯ ಸೆಲೆಯು
ವಿವೇಕ ಚಿಮ್ಮಲು ಶಾಂತಿಯ ನೆಲೆಯು

ಅಂತರ ಗಂಗೆಯ ಹೀರುತ ಓಡು
ದಾಸನ ಭಾವದಿ ಸಾಧನ ಮಾಡು


ಗಡಿಬಿಡಿಯ ತೊಡಕು
ಅವಸರವೆಂದಿಗೂ ಅಂಟದಿರು
ತವಕದಿ ಸಾಧನೆ ತ್ಯಜಿಸದಿರು

ಜೀವನ ನಶ್ವರ ನೆನಪಿರಲಿ
ಪ್ರಾಣವೇ ದೇವರು ಗೊತ್ತಿರಲಿ

ಸರ್ವಶಕ್ತನೇ ಬೆಳಗಿಹನು
ನಿತ್ಯ ಜಾಗ್ರತ ಆಗಿಹನು

ಆಪ್ತತೆ ಕರೆಗೆ ಕೃಪೆ ಬೇಗ
ಗಡಿಬಿಡಿ ಮೆಟ್ಟುತ ನಲಿ ಈಗ

ಸದಾಶೆ ನೆರಳದು ಅತಿ ಪ್ರಮುಖ
ಚಣಚಣ ಕಾಡೋ ನೀ ಸುಮುಖ

ನಾಮದಿ ಅಂದದ ಮನವಿರಲಿ
ನೇಮದಿ ಅರಳಿದ ತನುವುರಲಿ

ಯೋಚಿಸಿ ಯೋಜಿಸು ಮಗುವೆ
ಜೀವನ ದಾರಿಯು ಅತಿ ಸುಗಮವೇ


ಗಡಿಬಿಡಿ ಒಡಕು
ಮನದಲಿ ಗೊಂದಲದಿಂದೇ ಗಡಿಬಿಡಿ
ಇಷ್ಟ ಪ್ರೇಮದಿ ಬಿರುಕೇ ಗಡಿಬಿಡಿ

ಗುರು ಭಕ್ತಿಯ ಕೊರತೆಯೇ ಗಡಿಬಿಡಿ
ಆಪ್ತತೆ ಮೂಡದ ಕಾರಣ ಗಡಿಬಿಡಿ

ಸ್ವಾರ್ಥದ ಆವೇಶದಿ ಗಡಿಬಿಡಿ
ಸ್ವೈರತೆ ಅರಳಲು ತಾ ಗಡಿಬಿಡಿ

ಶ್ರದ್ಧಾ ಭಕ್ತಿಯ ಒಡಕೇ ಗಡಿಬಿಡಿ
ಛಲ ಬಲ ಬತ್ತಲು ಖಂಡಿತ ಗಡಿಬಿಡಿ
ಮೇಲ್ಮೈ ಕನಸದು ಬೀಸಲು ಗಡಿಬಿಡಿ

ಅಂದದ ಬಾಳಿಗೆ ಮಾರಕ ಗಡಿಬಿಡಿ
ಚಂಚಲ ಮನಕೆ ಕಾರ ಗಡಿಬಿಡಿ

ಲೌಖಿಕ ಗಾಳಿಯ ಬೀಸಿಕೆ ಗಡಿಬಿಡಿ
ವಾದದ ಬಹುವಿಧ ಪಾಶಕೆ ಗಡಿಬಿಡಿ

ಗಲಿಬಿಲಿ ಗಡಿಬಿಡಿ ರಾದ್ಧಾಂತ
ಮನದಲಿ ದುಗುಡವು ಮನೆ ಮಾಡಿರಲು
ಗಲಿಬಿಲಿ ಬಹು ಪರಿ ಹಿಂಡುವ ಉರುಳು

ಅವಸರವಂತೂ ಚುಚ್ಚುತ ಸಾಗಲು
ಗಡಿಬಿಡಿ ನಿಜಕೂ ಅಂಟುತ ಬರಲು

ವಾದ ವಿವಾದದ ನಡುವೆ
ಗಲಿಬಿಲಿ ಅಂತೂ ಪಾಶವೇ ನಿಜವೆ

ಭರದಲಿ ನಗುವ ಛಲವಿರೆ ಮುಂದೆ
ಗಡಿಬಿಡಿ ಹೊಂಡಕೆ ಬೀಳುವಿ ಇಂದೇ

ಗುರುವಿನ ಅಣತಿ ಪಾಲಿಸು ಇಗ
ಗಲಿಬಿಲಿ ಗೋಳನು ದಾಟುವಿ ಬೇಗ

ಇಷ್ಟ ಪ್ರೇಮವ ಅರಳಿಸಿ ನಡೆಯೋ
ಗಡಿಬಿಡಿ ಗೌಜನು ಬೇಗನೆ ಬಡಿಯೋ

ಸಂಗ್ರಹ:- ಜೀವನ್ 10ನೇಬಿ
ಎರಡಕ್ಷರದ ಮಹತ್ವ
ಬಾಳು ಎಂಬ ನರಕದಲ್ಲಿ
ಹುಟ್ಟು ಎಂಬದನ್ನು ಪಡೆದು
ತಾಯಿ ಎಂಬ ದೇವರ ದರ್ಶನ ಮಾಡಿ
ತಂದೆ ಎಂಬ ಎರಡಕ್ಷರದಿಂದ
ಪ್ರೀತಿ ಎಂಬುದನ್ನು ಪಡೆದು
ಮಾತು ಎಂಬ ಮಾಣಿಕ್ಯವನ್ನು ಪಡೆದು
ಶಾಲೆ ಎಂಬ ದೇಗುಲವ ಸೇರಿ
ಗುರು ಎಂಬವರಿಂದ
ವಿದ್ಯೆ ಎಂಬ ಎರಡಕ್ಷರ ಕಲಿತು
ಪ್ರಾಯ ಎಂಬ ಅವಸ್ಥೆ ತಲುಪಿ
ವೃತ್ತಿ ಎಂಬ ಮಾರುಕಟ್ಟೆಯಲ್ಲಿ ಪಳಗಿ
ಪ್ರಿಯಕರ ಎಂಬುವವನ ಮೋಹದಲ್ಲಿ
ಮಗು ಎಂಬ ಬಾಳ ಕಣ್ಣು ಪಡೆದು
ಮುಪ್ಪು ಎಂಬುದನ್ನು ತಲುಪಿ
ಸಾವು ಎಂಬುದರಿಂದ ಸ್ವರ್ಗ ಕಂಡು
ಜೀವ ಎಂಬುದನ್ನು ಕಳೆದುಕೊಂಡ
ಇವ ಯಾರು ಗೊತ್ತೇ ? ಇವನೇ ಮಾನವ

                                   ಸಂಗ್ರಹ: ಶ್ರೀಲಕ್ಷೀ ರಾವ್ 10ನೇಬಿ
ಪುಟ್ಟ ಮಗು                               
ನಟ್ಟಿರುಳ ಕರಿಮುಗಿಲ ನೀರ್- ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿ
ಗಾಳಿಯೇ ಹಡುತ್ತಿದೆ. ಇತ್ತ ಮನೆಯೊಳಗೆ

                ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಲಲಿ
                ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರಿಮೈಲಿ !
                ನಿದ್ದೆಗಣ್ಣಿನಲೆ ಪಕ್ಕದ ತಾಯಿಯ ಕೈ ನೀಡಿ
                ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ

ಹೊದಿಕೆಯನೆ ಕಿತ್ತೆಸೆದು ಮಲಗುವುದು ಬರಿ ಮೈಲಿ ;
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ
ಇದು ಸರಿಯೆ? ತಪ್ಪೆ? ಉತ್ತರವಿಲ್ಲ. ದೆಸೆ ದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ
ನಿದ್ದೆ ಎಚ್ಚರಗಳಲಿ ಪೋರೆವ ಕೈ ದುಡಿತುತ್ತಿದೆ;
ಅದನ್ನು ಲೆಕ್ಕಿಸದೆ ಮಗು ಹೊದಿಕೆಯನು ಒದಿಯುತ್ತಿದೆ.

                                    ಸಂಗ್ರಹ: ಪ್ರಣೀತ್.ವಿ. ಕೋಟ್ಯಾನ್ 8ನೇಬಿ
ಕವನ
ಮಳೆಯ ಮೋಡಿ
ಝರಿಯಂತೆ ಧುಮುಕಿದೆ ಮನಸು,
ಜಡಿಮಳೆಯದೆನದು ಸೊಗಸು,
ತಂಗಾಳಿ ಯಾಕೀ ಮುನಿಸು?
                                                   
  ಸಿಡಿಲು ಮಿಂಚಾಟ, ಆಡಲು ಮುಗಿಲು
   ಗಿರಿರಾಣಿ ನಾನೆಂದಿತು ನವಿಲು
ನದಿ, ಕ್ಷೀರ ವಣ್ರದಂತೆ ತೊರಲು
ನನ್ನ ಮನ ಬಾನ ಪಕ್ಷಿಗಳ ಸಾಲು
ಕವಿಯಾದ ನಿನ್ನಿಂದ ನಾನು
ಸಮನಾಗಿ ಕಾಣುತಿದೆ ಭೂಬಾನು,
ಪ್ರಕೃತಿಗೆ ನೀ ಬಳಿದ ಚಿತ್ತಾರವೇನು?
ಸುಮಧುರ ಅತಿಮಧುರ ಸಂಗೀತ ನೀನು.   

                                 ಸಂಗ್ರಹಸೃಷ್ಟಿ 9ನೇ  
ಆಸೆಯ ನೋವುಗಳ ತಿಳುವು
ಅಮ್ಮ ಇಲ್ಲ ಅಪ್ಪ ಇಲ್ಲ
ನಾನೇನು ಮಾಡಲಿ
ಬಂದು ಇಲ್ಲ ಬಳಗ ಇಲ್ಲ
ನಾನೇನು ಮಾಡಲಿ ||
ಕಲಿಯುವ ಆಸೆ ನನಗಿದೆ
ಆದರೆ ಕಲಿಸೋರಿಲ್ಲ
ನಲಿಯುವ ಆಸೆ ನನಗಿದೆ
ನಲಿಸೋಲ್ಲ ||
ಖಾಲಿ ಮಾಡಿ ಹೊಟ್ಟೆಯನ್ನ
ತುಂಬಿಸಲೇ
ಶಾಲೆಗೆ ಹೋಗಿ ಅಕ್ಷರವನ್ನ
ಓದಿ ಬರಲೇ ||
ಬಾಲಕಾರ್ಮಿಕತೆಯನ್ನು
ನಿಲ್ಲಿಸೋರಿಲ್ಲವೇ
ನಮ್ಮ ಕನಸು ನನಸು
ಮಾಡಿಸೋರಿಲ್ಲವೇ ||
ಜಗತ್ತಿನಲ್ಲಿ ನಮ್ಮ óಷ್ಟ
ಕೇಳೋರಿಲ್ಲಿಲ್ಲ
ಕಷ್ಟವನು ಕಂಡು ಇರುವ
ಜನರೇ ಇಲ್ಲಿಲ್ಲ ||       
(ಸಂಗ್ರಹ)-ಅಮಿಶ .ಜಿ
8 ನೇತರಗತಿ

ಬಣ್ಣದ ಚಿಟ್ಟೆ
ನೋಡಲು ಚಂದ ನೀ ಅಂದ
ನನ್ನ ಕನಸಿನ ಚಿಟ್ಟೆ
ರಂಗು ರಂಗಿನ ಅಂಗಿ ತೊಟ್ಟು
ಎಲ್ಲಿಗೆ ನೀ ಹೊರಟೆ
ಹೂವಿನ ಮಕರಂದ ಸವಿದು
ಸಂತಸದಿ ನಲಿಯುವೆ
ರೆಕ್ಕೆಯ ಬಡಿದು ಬಾನೆತ್ತರ ಹಾರಿ
ಆಕಾಶದಲ್ಲಿ ತೇಲುವೆ
ಹಸಿರು ಮನ ಸಿರಿಯಲ್ಲಿ ನೀನೊಂದು
ಮಿನುಗುವ ಚೆಲುವೆ

ಆಕರ್ಷಣೀಯ ಮೈ ಬಣ್ಣಗಳಿಂದ
ಎಲ್ಲರನ್ನು ಸೆಳೆಯುವೆ
ಮಳೆ ಬರಲಿ ಚಳಿ ಇರಲಿ ಬಿರುಗಾಳಿ
ಬೀಸಲಿ ಅಂಜುವುದಿಲ್ಲ
ಒತ್ತಡ ಚಿಂತೆ ದುಃಖಗಳಲ್ಲಿ ನಗು
ಒಂದೇ ನಿನ್ನಯ ಮೂಲ
ಸುಂದರ ಸುಖದ ನೆಮ್ಮದಿ ಬದುಕು
ಇತರರಿಗೆ ಕೆಡಕು ಬಯಸಲ್ಲ
ಚಿಟ್ಟೆಗಳೇ ನಮ್ಮ ಸಂತಸದ ಜೀವನ
ಆದರ್ಶವಾಗಲಿ ನಮಗೆಲ್ಲ
(ಸಂಗ್ರಹ)_ಶ್ರೇಯಾ
8ನೇತರಗತಿ
ಕಾಮನ ಬಿಲ್ಲು
ರವಿಯದೊ ಹೊರಟನು ಪಡುವಣಕೆ
ತಾಯಿಯ ಮನೆಯನು ಸೇರಲಿಕೆ

ಸಂಜೆಯ ಹೊತ್ತಿನ ಹೂಬಿಸಿಲು
ಕಣ್ಣಿಗೆ ಹಿಗ್ಗಿನ ಅಂದದ ಹೊನಲು

ಬಿಳಿತೆರೆ ಮೋಡದ ಅಂಚಿನಲಿ
ಹನಿಮಳೆ ಬೀಳುವ ಹೊತ್ತಿನಲಿ

ತುಂತುರು ಹನಿಗಳು ಬೀಳುತ್ತಿವೆ.
ಕಾಮನ ಬಿಲ್ಲನು ಮೂಡಿಸಿವೆ.

ಕಾಮನಬಿಲ್ಲನು ನೋಡಲ್ಲಿ
ಮಣಿದಿಹ ಬಿಲ್ಲದು ಮುಗಿಲಲ್ಲಿ

ಕಿತ್ತಳೆ ಕೇಸರಿ ಹಳದಿ ಕೆಂಪು
ನೀಲಿ ಕಂದು ನೇರಳೆ ತಂಪು

ನೆಲಕೂ ಮುಗಿಲಿಗೂ ಮುಟ್ಟಿಹುದು
ಕಣ್ಣಿಗೆ ಹಬ್ಬವÀ ತಂದಿಹುದು

ಸೂರ್ಯನು ಮುಳುಗಿದ ಕತ್ತಲು ಬಂದಿತು
ಮೋಡವು ಚದುರಿತು ಮಳೆಯೂ ನಿಂತಿತು

ಮರೆಯಲಿ ಓಡಿತು ಕಾಮನ ಬಿಲ್ಲು
ಕಾಣದಾಯಿತು ಮಾಯದ ಬಿಲ್ಲು
(ಸಂಗ್ರಹ)-ಪ್ರಣೀತ್ ಪಿ. 8ನೇಬಿತರಗತಿ
ಕವನಗಳು
ಪರಿಸರ
ಸುಡಲು ಬೇಡಿ, ಬಗೆಯ ಬೇಡಿ
ತೋಡಬೇಡಿ ಧರೆಯನು
ನಮಗೂ ಸ್ವಲ್ಪ ಹಸಿರ ಉಳಿಸಿ
ನಾವು ಬದುಕಿ ಬಾಳಲು

ಮನುಜ ನಿನಗೆ ದಾಹವೇಕೋ
ಪ್ರಕೃತಿ ಸಹನೆ ಮೀರಿದೆ
ಬೆಳಸ ಬನ್ನಿ ಹಸಿರ ಉಸಿರು
ನಾವು ಬದುಕಿ ಬಾಳಲು

ಸೂರ್ಯ,ಚಂದ್ರ,ತಾರೆಯಂತೆ
ಸ್ವಾರ್ಥ ಬಿಟ್ಟು ಬಾಳುವ
ಬನ್ನಿ ಎಲ್ಲ ಒಂದುಗೂಡಿ
ಗಿಡವ ನೆಟ್ಟು ನಲಿಯುವ

ಗಿಡವ ನೆಟ್ಟು, ನೀರು ಹಾಕಿ
ಕಾಡು ಬೆಳೆಸಿ ಮೆರೆಯುವ
ನಾಳೆ ನಮ್ಮ ಬದುಕಿಗಾಗಿ
ಪರಿಸರವನ್ನು ಉಳಿಸುವ.
(ಸಂಗ್ರಹ)-ರೀಷ್ಮಾ 8ನೇತರಗತಿ


ಮುಂಜಾನೆ
ಬಾನಿನಂಗಳದಲ್ಲಿ ರವಿ ಮೂಡಿ ಬಂದ
ಬೆಚ್ಚನೆ ಮಲಗಿದ್ದ ಕೆನ್ನೆಯನ್ನು ಮುದ್ದಿಸುತ
ಬೆಳಗಾಯಿತೇಳೆಂದು ಎಚ್ಚರಿಸುತ

ಹಕ್ಕಿಗಳು ಮೈ ಮರೆತು ಮೀಯುತಿದೆ
ತಾವರೆ ಕೊಳದಲಿ ಚಿಲಿಪಿಲಿ ಎಂದು
ಉದಯರಾಗವ ಹಾಡುತ

ಮಧುಹೀರ ಬರುತಿವೆ ದುಂಬಿಗಳ ದಂಡು
ಅರಳಿ ನಗುತಿರುವ ಹೂವುಗಳ ಕಂಡು
ತೊನೆಯುತಿದೆ ಮರ ಗಿಡಗಳು ಉಲ್ಲಾಸದಿಂದ


(ಸಂಗ್ರಹ)-ರೀಷ್ಮಾ 8ನೇತರಗತಿ
   ಅಮ್ಮ
 ಕುಣಿಯುತ್ತಿದ್ದರೆ
 ಆಗಾಧ ಪ್ರೀತಿ
 ಕುಂಟಾನಾದರೂ ಕುರುಡನಾದರೂ
 ಅದೇ ರೀತಿ
 ಏಳೇಳು ಜನ್ಮದಲಿ
 ಉಸಿರಿನ ದೇವರು
 ಎದೆ ಹಾಲಿನ ಪ್ರೀತಿಯಲಿ
 ಮರೆತೆ ಬಿಟ್ಟಳಲ್ಲ
 ಅವ್ವ ಕಣ್ಣೀರು.
ಸಂಗ್ರಹ:- ಶ್ರಾವ್ಯ.ಎಸ್.ಪೂಜಾರಿ
                                   
                   ಬಾಳ ಕದನದಲ್ಲಿ
ಬಾಳ ಕದನದಲ್ಲಿ ಕಟ್ಟು ನೀ
ಬುತ್ತಿಯ ತಾಳ್ಮೆ ಎಂಬ ಶಕ್ತಿಯ
                      ಫಲದು ಕಡು ಕಷಟದಲೂ
                      ಬಿತ್ತು ಸ್ನೇಹದ ಬೀಜವ
                      ಕರಗದೆಂದು ಸ್ನೇಹದ ಚೈತನ್ಯ
ಸುಖದಲ್ಲೂ ಸುಳಿಯದಿರಲಿ
ನಾನು ಎಂಬಅಹಂಭಾವವು
                      ಸರ್ವರನ್ನು ಗೌರವಿಸುತ
                      ಕಹಿಯನ್ನೆಲ್ಲಾ ಮರೆಯುತ
                      ಬದುಕನ್ನು ಪ್ರೀತಿಸುವ
                     

                                    ಸಂಗ್ರಹ:- ಶ್ರಾವ್ಯ.ಎಸ್.ಪೂಜಾರಿ



No comments:

Post a Comment