Tuesday, December 4, 2018

ಮುನ್ನುಡಿ

ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯ ಸರ್ವಜ್ಞ |

        ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪ್ರಕಟಗೊಳ್ಳುತ್ತಿರುವ ಜ್ಞಾನ ದೀವಿಗೆ 2018-19ನೇ ಸಾಲಿನ ವಾರ್ಷಿಕ ಸಂಚಿಕೆಯು ಇದೀಗ ಅನಾವರಣಗೊಳ್ಳುತ್ತಿದೆ.
       ವಿದ್ಯಾರ್ಥಿಗಳ ಸ್ವರಚಿತ ಕಥೆ, ಕವನ, ನಗೆಹನಿ, ಚುಟುಕು, ಚಿತ್ರಕಲೆ, ಸಂಗ್ರಹಿತ ಲೇಖನಗಳು, ಶಾಲೆಯ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳ ವರದಿಗಳನ್ನೊಳಗೊಂಡಿರುವ ಈ ಹೊತ್ತಿಗೆಯು ಸಹಶಿಕ್ಷಕ ಶ್ರೀ ಜಟ್ಟೆಪ್ಪ ಸನದಿ ಇವರ ನೇತೃತ್ವದಲ್ಲಿ ಇತರ ಶಿಕ್ಷಕರ ಸಹಾಯ ಸಹಕಾರದೊಂದಿಗೆ ಸುಂದರವಾಗಿ ಮೂಡಿಬಂದಿದೆ.
       ‘ವಿದ್ಯಾ ಸರ್ವಸ್ಯ ಭೂಷಣಂ’ ಎಂಬಂತೆ ವಿದ್ಯಾರ್ಥಿಗಳಲ್ಲಿ ಅರಳುತ್ತಿರುವ ಸಾಹಿತ್ಯ, ಕಲಾ, ಕ್ರೀಡಾ ಅಭಿರುಚಿಯು ಪೂರಕ ಪೋಷಣೆಯನ್ನು ಪಡೆದುಕೊಂಡು ಅತಿ ಸುಂದರವಾಗಿ ಪರಿಪೂರ್ಣವಾಗಿ ದೇಶ, ವಿದೇಶಗಳಲ್ಲಿ ರಾರಾಜಿಸುವಂತಾಗಲಿ ಎಂದು ಆಶಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳು ನಮ್ಮೀ ಪ್ರಯತ್ನವನ್ನು ಮೆಟ್ಟಿಲಾಗಿಸಿಕೊಂಡು ತಮ್ಮ ಪ್ರತಿಭೆ ಎಂಬ ಶಕ್ತಿಯಿಂದ ಉನ್ನತ ಬೆಟ್ಟವನ್ನೇರಿ ಮೆಟ್ಟಿ ನಿಲ್ಲುವಂತಾಗಲಿ ಎಂದು ಹಾರೈಸುತ್ತೇನೆ.
       ಈ ಸಂಚಿಕೆಯು ಹಲವರ ಪರಿಶ್ರಮದ ಫಲವಾಗಿದೆ. ಮುಖ ಪುಟವನ್ನು ಅಚ್ಚು ಮಾಡಿದ ಶ್ರೀ ಉದಯ ಗಾಂವಕಾರ ವಿಜ್ಞಾನ ಶಿಕ್ಷಕರು, ನಿರ್ಮಾಣಕ್ಕೆ ಸಹಕರಿಸಿದ ಕುಮಾರಿ ಸುಪ್ರಿಯಾ ಕಂಪ್ಯೂಟರ್ ಶಿಕ್ಷಕಿ, ಶ್ರೀ ಸುಶಾಂತ್,        ಮಾ| ಭಾರ್ಗವ, ಮಾ| ರಿಶಾನ್, ಮಾ| ಅರ್ಜುನ್, ಮಾ| ಶೋಧನ್, ಮುದ್ರಣಕ್ಕೆ ಸಹಕರಿಸಿದ ವಿದ್ಯಾರ್ಥಿ/ನಿ ವೃಂದ ಮತ್ತು ಇತರ ಶಿಕ್ಷಕರಿಗೂ, ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಆತ್ಮೀಯ ಧನ್ಯವಾದಗಳು.

ಶ್ರೀಮತಿ ಕೆ. ಹರ್ಷಿಣಿ
ಮುಖ್ಯೋಪಾಧ್ಯಾಯರು,
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ 
ಪ್ರೌಢಶಾಲೆ ಪೆರ್ವಾಜೆ, ಕಾರ್ಕಳ.

No comments:

Post a Comment