ನಮ್ಮ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ
ಭಾರತ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ;

ಟಿಂಕರಿಂಗ್ ಪ್ರಯೋಗಾಲಯವು 6 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪಠ್ಯಕ್ರಮವನ್ನು ಮೀರಿ ವಿಸ್ತರಿಸಲು ಯೋಜಿಸಲಾದ ಕಾರ್ಯಕ್ರಮ.ನಾವಿನ್ಯತೆ ಮತ್ತು ಕೌಶಲಗಳ ಮೂಲಕ ನವ ಭಾರತವನ್ನು ಕಟ್ಟಲು ಉದ್ಧೇಶಿಸಲಾದ ಚಟುವಟಿಕೆ. ಈ ಪ್ರಯೋಗಾಲಯದಲ್ಲಿ ಅತ್ಯುತ್ತಮ ಗುಣಮಟ್ಟದ ಮೂರು ಆಯಾಮದ ಪ್ರಿಂಟರ್ ಗಳು, ರೋಬೋಟಿಕ್ಸ್ ತಂತ್ರಗಳು, ಗ್ರಾಹಕ ಉಪಕರಣಗಳು ಹೀಗೆ ಅತ್ಯುನ್ನತ ಇಲೆಕ್ಟ್ರಾನಿಕ್ ಉಪಕರಣಗಳನ್ನು ಈ ಪ್ರಯೋಗಾಲಯ ಒಳಗೊಂಡಿದೆ. ವಿದ್ಯಾರ್ಥಿಗಳು ಈ ಎಲ್ಲ ಸೌಕರ್ಯಗಳ ಮೂಲಕ ಗಣಿತೀಯ ಮತ್ತು ಸೃಜನಾತ್ಮಕ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬಹುದು. ಕೃತಕ ಬುದ್ದಿವಂತಿಕೆಯ ಮೂಲಕ ಮಾರ್ಪಡಿಸಿದ ಜ್ಞಾನವನ್ನ ಹೊಂದಬಹುದು
No comments:
Post a Comment